ಸುರಪುರ: ಯಾದಗಿರಿ ನಗರದ ಎನ್.ವಿ.ಎಮ್ ಹೊಟೆಲ್ ನಲ್ಲಿ ಮೂಲನಿವಾಸಿ ಅಂಬೇಡ್ಕರ್ ಸೇನೆಯ ಜಿಲ್ಲಾ ಮಟ್ಟದ “ ಒಂದು ದಿನದ ವಿಚಾರ ಸಂಕೀರ್ಣ “ ವನ್ನು ಭಾರತದ ಮೊಟ್ಟ ಮೋದಲನೆಯ ಮಹಿಳಾ ಶಿಕ್ಷಕಿ ಅಕ್ಷರದಾತೆ ಮಾತೆ ಸಾವಿತ್ರೀಭಾಯಿ ಪುಲೆ ಯವರ 192 ನೇ ಜಯಂತ್ಯೋತ್ಸವ ಹಾಗೂ 205 ಭೀಮಾ ಕೋರೆಗಾಂವ್ ವಿಜಯೋತ್ಸವ ದಿನದ ಅಂಗವಾಗಿ ವಿಚಾರ ಸಂಕೀರ್ಣ ಮತ್ತು ಜಿಲ್ಲಾ ಸಮಿತಿ ಪುನರ್ ರಚನೆ ಸಭೆಯನ್ನು ನಡೆಸಲಾಯಿತು.ಸಭೆಯಲ್ಲಿ ರಾಜ್ಯ ಸಂಚಾಲಕರಾದ ಧನರಾಜ್ ನಾಗವಂಶಿ ಅದ್ಯಕ್ಷತೆ ರಾಜ್ಯ ಸಂಘಟನಾ ಸಂಚಾಲಕರಾದ ರಾಹುಲ್ ಹುಲಿಮನಿಯವರು ಮುಖ್ಯ ಅತಿಥಿಗಳಾಗಿ ಭಾಗವಹಹಿಸಿದ್ದರು.
ಮೊದಲಿಗೆ ಸಭೆಯನ್ನು ಪ್ರಾರಂಬಿಸಿ ತಥಾಗತ ಬುದ್ಧನಿಗೆ ಪಂಚಶೀಲ ಪ್ರಾರ್ಥನೆ ಸಲ್ಲಿಸಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಾತೆ ಸಾವಿತ್ರೀಬಾಯಿ ಪುಲೆ ಯವರ ಬಾವಚಿತ್ರಕ್ಕೆ ಜ್ಯೋತಿ ಬೆಳಗಿಸಲಾಯಿತು. ಇದೆ ಸಂದರ್ಭದಲ್ಲಿ ವಿವಿದ ಸಂಘಟನೆಗಳಿಂದ ಹೊಸದಾಗಿ ಬಂದವರಿಗೆ ನಮ್ಮ ಸೇನೆಗೆ ನೀಲಿ ಶಾಲೂ ನೀಡಿ ಬರ ಮಾಡಿಕೊಳ್ಳಲಾಯಿತು.
ಅದ್ಯಕ್ಷತೆವಹಿಸಿದ್ದ ಧನರಾಜ್ ನಾಗವಂಶಿ ಮಾತನಾಡಿ, ರಾಜ್ಯದಲ್ಲಿ ಇನ್ನು ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವದು ಖಂಡನಿಯ ನಾವುಗಳು ನಿಜವಾಗಿಯೂ ಅಂಬೇಡ್ಕರ್ ರವರ ಅನುಯಾಯಿಗಳಾಗಿದ್ದರೆ ಪರಿಣಾಮಕಾರಿಯಾಗಿ ರಾಜ್ಯದಲ್ಲಿ ನಮ್ಮ ಸಂಘಟನೆಯಿಂದ ಅರ್ಥ ಪೂರ್ಣ ಇಂತಹ ವಿಚಾರ ಸಂಕೀರ್ಣ ಹಮ್ಮಿಕೊಂಡು ದೇಶದ ಮೂಲನಿವಾಸಿಗರಿಗೆ ತಳಮಟ್ಟದಿಂದ ಜನಜಾಗೃತಿ ಮೂಡಿಸಬೇಕೆಂದರು.
ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಸಂಟನಾ ಸಂಚಾಲಕ ರಾಹುಲ್ ಹುಲಿಮನಿ, ನಮ್ಮ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಬಾಬಾಸಾಹೇಬರ ಆಶಯದಂತೆ ಸಂವಿದಾನ ರಕ್ಷಣೆಗಾಗಿಯೇ ಹೋರಾಟ ರೂಪಿಸಬೇಕು. ಯಾದಗಿರಿ ಜಿಲ್ಲೆಯಲ್ಲಿ ಸಮಸ್ಯಗಳಿಗೆ ಸ್ಪಂದಿಸಿ ತಳ ಸಮುದಾಯಗಳ ಅಭಿವೃದ್ಧಿಗೆ ಶ್ರಮವಹಿಸಬೇಕು ಎಂದರು. ವೇಧಿಕೆ ಮೇಲಿದ್ದ ಬಸವಲಿಂಗ ಎಸ್ ಹಾಲು, ಮಾಯಾ ಎಸ್ ಆರ್ ನಾಯಕ ಶರಣರಡ್ಡಿ ಹತ್ತಿಗೂಡುರು ಮಾತನಾಡಿದರು.
ನಂತರ ಸಂವಿದಾನ ಪೀಠಿಕೆ ಸಾಮೂಹಿಕವಾಗಿ ಓದುವದರ ಮುಖಾಂತರ ಕಾರ್ಯಾಕ್ರಮದಲ್ಲಿ ಸಂಕಲ್ಪ ಮಾಡಲಾಯಿತು. ಕಾರ್ಯಾಕ್ರಮದಲ್ಲಿ ಜಿಲ್ಲೆಯ ಎಲ್ಲ ತಾಲುಕುಗಳ ಮೂಲನಿವಾಸಿ ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳು ಬಾಗವಹಿಸಿದ್ದರು. ನಂತರ ಯಾದಗಿರಿ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಯಿತು.
ಯಾದಗಿರಿ ಜಿಲ್ಲಾ ಸಮಿತಿ ರಚನೆ: ಶರಣರಡ್ಡಿ ಹತ್ತಿಗೂಡುರು ಕಲಬುರ್ಗಿ ವಿಭಾಗೀಯ ಸಂಚಾಲಕರು, ಮೈಲಾರಿ ಡಿ ಹೊಸಮನಿ ಯಾದಗಿರಿ ಜಿಲ್ಲಾ ಉಸ್ತುವಾರಿ, ರಂಗನಾಥ ಬಾಗಲಿ ಜಿಲ್ಲಾ ಸಂಚಾಲಕರು, ಶರಣು ಹೊಸಮನಿ, ಸಿದ್ರಾಮ್ ಹಾಲಭಾವಿ, ಮಾನಪ್ಪ ಜೆಗ್ರೀ, ನಿಂಗಣ್ಣ ದರ್ಶಾನಾಪೂರ, ಮೌನೇಶ್ ಕೆ, ಸಂದೀಪ ನಾಯಕ್, ಮಹಮ್ಮದ್ ಗೌಸ್, ಶಾಂತಪ್ಪ ದೇವರಗೋನಾಲ್, ಶ್ರಿಕಾಂತ ಕೆಳಿಗೇರಿ, ವೆಂಕಟಗೀರಿಯಪ್ಪ ಕುಪಗಲ್ ಜಿಲ್ಲಾ ಸಂಘಟನಾ ಸಂಚಾಲಕರು. ಗಿರೀಶ್ ಚಟರಕರ್ ಜಿಲ್ಲಾ ಖಜಾಂಚಿ, ಶಿವಣ್ಣ ಸಾಸಗೇರಿ, ಹಣವಂತ ಚಲುವಾದಿ ಜಿಲ್ಲಾ ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು.
ಕಾರ್ಯಾಕ್ರಮದಲ್ಲಿ ಮೂಲನಿವಾಸಿ ಅಂಬೆಡ್ಕರ್ ಸೇನೆಯ ನೂರಾರು ಕಾರ್ಯಕರ್ತರು ಬಾಗವಹಿಸಿದ್ದರು.ಶರಣು ಬೂತಾಳಿ ಸ್ವಾಗತಿಸಿದರು, ಮಂಜುನಾಥ ನೀರುಪಿಸಿದರು ನಾಗೇಶ ಅರಿಕೇರಿ ವಂದಿಸಿದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…