ಜ.18 ರಂದು ಬೆಂಗಳೂರ ಚಲೋ

0
155

ಕಲಬುರಗಿ: ನಗರದ ಪಬ್ಲಿಕ ಗಾರ್ಡನ್ ಹತ್ತಿರ ಯಾತ್ರಿಕ ನಿವಾಸದಲ್ಲಿ ಕಲಬುರಗಿ ಜಿಲ್ಲಾ ಕಾಂಟ್ರಾಕ್ಟರ್ ಅಸೋಸಿಯೇಷನ್ ವತಿಯಿಂದ ಪೂರ್ವಭಾವಿ ಸಭೆಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣನವರ ನೇತೃತ್ವದಲ್ಲಿ ರಾಜ್ಯ ಗುತ್ತಿಗೆದಾರರ ಉಗ್ರ ಹೋರಾಟವನ್ನು ಜನವರಿ 18.ರಂದು ಹಮ್ಮಿಕೋಳಲಾಗಿದೆ. ಎಂದು ಕಲಬುರಗಿ ಜಿಲ್ಲಾ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಬಿ. ಶೇಗಜಿ ಹೇಳಿದರು.

ಮತ್ತು ಜಿಲ್ಲೆಯ ಹಾಗೂ ಎಲ್ಲಾ ತಾಲ್ಲೂಕು ಮತ್ತು ಕೆ.ಇ.ಬಿ ಗುತ್ತಿಗೆದಾರರು, ಎಸ್.ಟಿ/ಎಸ್.ಟಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕೇಶರ್ ಅಶೋಷನ್ ಅಧ್ಯಕ್ಷರು, ಸದಸ್ಯರು, ಪ್ರಾವೇಟ ಬಿಲ್ಡರ್ಸ ಮತ್ತು ಡೆವಲಪರ್ಸಗಳು ಗುತ್ತಿಗೆದಾರರ ಸಭೆಯನ್ನು ಕರೆಯಲಾಯಿತು.
ಈ ಸಭೆಯಲ್ಲಿ ಗುತ್ತಿಗೆದಾರರ ಬಾಕಿ ಇರುವ ಪಾವತಿಸುವ ಎಲ್ಲಾ ಬಿಲ್ಲುಗಳನ್ನು, ಗುತ್ತಿಗೆದಾರರ ಹಳೆಯ ಬಿಲ್ಲುಗಳಿಗೆ ಶೇಕಡಾ 18% ರಷ್ಟು ಜಿ.ಎಸ್‍ಟಿ ಸೇರಿಸಿ ಬಿಲ್ಲನ್ನು ಪಾವತಿಸಬೇಕು, ಕಲ್ಯಾಣ ಕರ್ನಾಟಕ ಮಂಡಳಿಯಿಂದ (ಕೆ.ಕೆ.ಆರ್.ಡಿ.ಬಿ) ಟೆಂಡರದಲ್ಲಿ ಹಾಗೂ ಬೆಲ್ಲಿನಲ್ಲಿ ಶೇಕಡಾ 18ರಷ್ಟು ಜಿ.ಎಸ್‍ಟಿ ಕೊಡಬೇಕು.ಕಲ್ಯಾಣ ಕರ್ನಾಟಕದಲ್ಲಿ ಕಾಮಗಾರಿಯು ಪೂರ್ಣಗೊಳಿಸಿದರು ಬಿಲ್ಲ ಇನ್ನು ಫೈನಲ್ ಆಗಿಲ್ಲವೆಂದು ನೆಪ ಒಡ್ಡಿ 20% ತಡೆ ಹಿಡಿಯುತ್ತಾರೆ. ಅದನ್ನು ತೆಗೆದು ಹಾಕುಬೇಕು.

Contact Your\'s Advertisement; 9902492681

ಕರ್ನಾಟಕ ಕ್ರಶರ್ ಸಂಘದವರು ಮಾಡುತ್ತಿರುವ ಚಳುವಳಿಯ ಬಗ್ಗೆ ನಮ್ಮ ಕಲಬುರಗಿ ಕಾಂಟ್ರೇಕ್ಟರ ಅಶೋಷನ್ ವತಿಯಿಂದ ಅವರಿಗೆ ಸಹಕಾರ ಕೊಡಬೇಕು, ಸರ್ಕಾರದ ಹಾಗೂ ಕೋರ್ಟಿನ ಆದೇಶದ ಪ್ರಕಾರ ಪ್ರೇಮಿಂಟನ್ನು ಜೇಷ್ಠತೆ ಆಧಾರದ ಮೇಲೆ ಕೊಡಬೇಕು, ಈ ಎಲ್ಲಾ ಬೇಡಿಕೆಗಳನ್ನು ಜ. 18 ರಂದು ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ಸ್ಟೇಟ್ ಕಾಂಟ್ರೇಕ್ಟರ ಅಶೋಷನ ಸಂಘದವರು ಸರ್ಕಾರದ ಗಮನಕ್ಕೆ ತರಲು ಪ್ರತಿಭಟನೆ (ಹೋರಾಟ) ಇಟ್ಟಿರುತ್ತಾರೆ ಈ ಎಲ್ಲಾ ಕಾಂಟ್ರಾಕ್ಟರ್ ಅಳಿಯು ಉಳಿಯು ಪ್ರಶ್ನೆ ಆಗಿದ್ದು ಈ ಸಭೆಯಲ್ಲಿ ಎಂದು ಒತ್ತಾಯಿಸಿದರು.

ಈ ಸಭೆಯಲ್ಲಿ ಉಪಾಧ್ಯಕ್ಷರಾದ ಎನ್.ಎಸ್.ಮೂಲಗೆ, ಮೊಹಸಿನ್ ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜಯ್.ಆರ್.ಕೆ., ಕೆ.ಪಿ.ಎಸ್.ಸಿ ಸದಸ್ಯ ಎಂ.ಕೆ.ಪಾಟೀಲ, ಮನಸೂರ ಪಟೇಲ್, ಗುರುನಂಜಯ್ಯಾ ಆರ್.ಜಿ, ಜೈಕುಮಾರ ದೇವಲಗಾಂವಕರ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here