ಕಲಬುರಗಿ: ಯಶಸ್ಸು ಎಂಬುವದು ಹೆಸರು, ಹಣ, ಪ್ರಬಲವಾದ ಶಕ್ತಿಯಿಂದ ಸಾಧಿಸಲು ಸಾಧ್ಯವಿಲ್ಲ. ಯಶಸ್ಸು ಎಂಬುವದು ನಾವು ಮಾಡುವ ವಿಶಿಷ್ಟವಾದ ಕೆಲಸದಿಂದ ಸಾಧ್ಯವಿದೆ. ಹೀಗಾಗಿ ಅಭ್ಯಾಸದಲ್ಲಿ ಪ್ರಯೋಗಾತ್ಮಕವಾಗಿ ಕಲಿಯುವ ವಿಧಾನ ಅಳವಡಿಸಿಕೊಳ್ಳಿ. ಹೆಚ್ಚು ಹೆಚ್ಚು ಪ್ರಯೋಗಾತ್ಮಕ ಕಲಿಕೆದಿಂದ ಜ್ಞಾನವೃದ್ಧಿಯಾಗಿ ಹೊಸದೊಂದು ಅನ್ವೇಷಣಿಗೆ ಸಹಕಾರಿಯಾಗುತ್ತದೆ ಎಂದು ಸಿಸ್ಕೊ ಕಂಪೆನಿಯ ಸೀನಿಯರ್ ಸರ್ವಿಸ್ ಡೆಲಿವೆರಿ ಮ್ಯಾನೆಂಜರಾದ ರಾಜ್ ಬಿರಾದಾರ ಹೇಳಿದರು.
ನಗರದ ಶರಣಬಸವ ವಿವಿಯ ಶತಮಾನೋತ್ಸವ ಸಭಾಂಗಣದಲ್ಲ್ಲಿ ಶುಕ್ರವಾರ ಆಯೋಜಿಸಿದ್ದ ಇಂಡಕ್ಷನ್ (ದೀಕ್ಷಾರಂಭ-೨೦೧೯) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ ಕೇತ್ರದಲ್ಲಿ ಮುಂದುವರೆಯುತ್ತಿರುವ ನೀವು ಆಯ್ಕೆಮಾಡಿಕೊಂಡ ವಿಷಯದ ಬಗ್ಗೆ ಹೆಮ್ಮೆ, ಗೌರವ ಬೆಳೆಸಿಕೊಳ್ಳಿ ಇದರಿಂದ ನಿಮ್ಮದೇ ಆದ ಕ್ಷೇತ್ರದಲ್ಲಿ ಪ್ರಬಲವಾದ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಪದವಿಧರರು ಹೆಚ್ಚಾಗುತ್ತಿದ್ದಾರೆ ಆದರೆ ಅವರೆಲ್ಲರೂ ಉದ್ಯೋಗಸ್ಥರಾಗುತ್ತಿಲ್ಲ. ಇದಕ್ಕೆ ಕಾರಣ ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿನ ಅನಾಶಕ್ತಿಯೇ ಕಾರಣ ಎಂದು ತಿಳಿಸಿದರು.
ಪ್ರತಿಯೊಬ್ಬರು ತನ್ನದೇ ಆದ ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ. ಅದಕ್ಕಾಗಿ ನಿಮ್ಮದೇ ಆದ ದಾರಿಯಲ್ಲಿ ಮುಂದೇ ಸಾಗಿ ಮತ್ತೊಬ್ಬರ ಬೆನ್ನುಹತ್ತಿ ಹೋಗಬೇಡಿ ಇದರಿಂದ ನಿಮ್ಮ ಸ್ವಂತಿಕೆಯ ಕೆಲಸದಲ್ಲಿ ಪ್ರಬುದ್ಧತೆ ಸಾಧಿಸಲು ಸಾಧ್ಯವಿಲ್ಲ ಎಂದರು.
ಸಿಸ್ಕೊ ಕಂಪೆನಿಯ ಸೀನಿಯರ್ ಸರ್ವಿಸ್ ಡೆಲಿವೆರಿ ಮ್ಯಾನೆಂಜರಾದ ಶೀಲಾ ಪಾಟೀಲ ಮಾತನಾಡಿ, ನಿಮ್ಮ ಕನಸ್ಸನ್ನು ಸಾಕಾರಗೊಳಿಸಲು ಕಲಿಕೆಯ ಪದ್ದತಿ ಬದಲಿಸಿಕೊಳ್ಳಿ. ಪಠ್ಯದ ವಿಷಯಸಾರ ಕಂಠಪಾಠ ಮಾಡದೇ, ಇಷ್ಟಪಟ್ಟು ಓದಿ, ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ಅರ್ಥಮಾಡಿಕೊಂಡು ಓದಿದ ಅಭ್ಯಾಸ ಮುಂದೇ ನಿಮ್ಮ ಭವಿಷ್ಯ ರೂಪಿಸುತ್ತದೆ ಎಂದರು.
ಸಂಶೋಧನಾ ಗ್ರಂಥಗಳನ್ನು ಓದುವದು ಹಾಗೂ ಹೊಸ ಹೊಸ ಸಂಗತಿಗಳ ಅನ್ವೆಷಣೆಯತ್ತ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ. ಅಭ್ಯಾಸದಲ್ಲಿ ನಕಲು ಮಾಡುವದು, ಸುಲಭ ಮಾರ್ಗ ಹುಡುಕಾಡುವಲ್ಲಿ ನಿಮ್ಮ ಬುದ್ಧಿಶಕ್ತಿ ಕೇಂದ್ರಿಕರಿಸಿದರೇ, ನಿಮ್ಮ ಶಕ್ತಿ ಸಾಮರ್ಥ ಅರಿಯಲು ಸಾಧ್ಯವಿಲ್ಲ. ಕಷ್ಟಪಟ್ಟು ಮಾಡಿದ ಕೆಲಸದಿಂದ ಸಮಾಜದಲ್ಲಿ ಗೌರವ ಸಿಗುತ್ತದೆ. ನೀವು ಮಾಡಿದ ಕಾರ್ಯದಿಂದ ಸಮಾಜ ನಿಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತದೆ ಎಂದು ತಿಳಿಸಿದರು.
ಧನಾತ್ಮಕವಾಗಿ ಆಲೋಚನೆ ಮಾಡುವ ಸ್ವಭಾವ ವೃದ್ಧಿಸಿಕೊಳ್ಳಿ, ಧನಾತ್ಮಕ ಅಂಶಗಳಿಂದ ಸಮಾಜದಲ್ಲಿಯ ಪ್ರತಿಯೊಂದು ಅಂಶಗಳಲ್ಲಿ ಜಯ ಸಾಧಿಸಬಹುದು. ಸಿಸ್ಕೋ ಕಂಪೆನಿಯಲ್ಲಿ ಪ್ರತಿಶತ ೫೦ರಷ್ಟು ಉದ್ಯೋಗಿಗಳು ಮಹಿಳೆಯರಿದ್ದಾರೆ. ವಿಶ್ವದ ಉನ್ನತವಾದ ಕಂಪೆನಿಗಳಲ್ಲಿ ಇಂದು ಮಹಿಳೆ ಪುರುಷರ ಸರಿಸಮಾನವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸಿಸ್ಕೊ ಕಂಪೆನಿಯ ಸೀನಿಯರ್ ಸರ್ವಿಸ್ ಡೆಲಿವೆರಿ ಮ್ಯಾನೆಂಜರಾದ ವೆಂಕಟೇಶ ಕಸ್ತೂರಿ ಮಾತನಾಡಿ, ಅಂತರಜಾಲದಿಂದ ಅಭ್ಯಾಸದ ಬಗ್ಗೆ ಮತ್ತಷ್ಟು ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಿದೆ. ಸಮಾಜ ಮತ್ತು ಒಂದು ಕಂಪೆನಿಗೆ ಒಳೆಯ ಸೇತುವೆಯಾಗಿ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.
ಪ್ರೊ. ಶರಣಬಸವಪ್ಪ ಪಾಟೀಲ ಸ್ವಾಗತಿಸಿದರು. ವಿವಿ ಸಮ ಕುಲಪತಿ ಡಾ. ವಿ.ಡಿ. ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡಾ. ಬಸವರಾಜ ಮಠಪತಿ ಉಪಸ್ಥಿತರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…