ಬಿಸಿ ಬಿಸಿ ಸುದ್ದಿ

ಗುಲಬರ್ಗಾ ಟೈರ್ ಡೀಲ್‍ಶಿಪ್ ಗಾದಾ ಟೈರ್ಸ್ ಜೊತೆಗೆ ಸಹಯೋಗ

ಕಲಬುರಗಿ: ಕರ್ನಾಟಕದಲ್ಲಿನ ತನ್ನ ಬೆಳೆಯುತ್ತಿರುವ ಯೋಕೋಹಾಮಾ ಕ್ಲಬ್ ನೆಟ್‍ವರ್ಕ್ (ಙಅಓ)ಗೆ ಹೊಸ ಮಳಿಗೆ ಸೇರಿಸಿರುವುದಾಗಿ ಯೋಕೋಹಾಮಾ ಇಂಡಿಯಾ ಘೋಷಿಸಿದೆ. ಯೋಕೋಹಾಮಾ, ವಿಶೇಷವಾದ ಕಾರ್ಯಜಾಲವಾಗಿದ್ದು, ವಿಶ್ವ-ದರ್ಜೆ ಟೈರ್ ಖರೀದಿಯ ಅನುಭವ ಒದಗಿಸುವಂತಹ ಪಾಯಿಂಟ್ ಆಫ್ ಸೇಲ್ಸ್ ಅಭಿವೃದ್ಧಿಪಡಿಸುವುದಕ್ಕಾಗಿಯೇ ಇರುವ ಯೋಕೋಮಾದ ಜಾಗತಿಕ ಸಿದ್ಧಾಂತದ ಮೇಲೆ ಆಧಾರಿತವಾಗಿದೆ ಮತ್ತು ಈ ಬಾರಿ ಸಂಸ್ಥೆಯು, ಕರ್ನಾಟಕದ ಗುಲಬರ್ಗಾದಲ್ಲಿರುವ ಮುಂಚೂಣಿ ಟೈರ್ ಡೀಲ್‍ಶಿಪ್ ಆದ ಗಾದಾ ಟೈರ್ಸ್ ಜೊತೆಗೆ ಸಹಯೋಗ ಏರ್ಪಡಿಸಿಕೊಂಡಿದೆ.

“ನಮ್ಮ ಪ್ರಸ್ತುತದ ಙಅಓ ಗೆ ಮಾಡಿರುವ ಹೊಸ ಸೇರ್ಪಡೆಯು ತಂತ್ರಯುಕ್ತವಾಗಿ ನಮಗೆ ಉತ್ತಮವಾಗಿದ್ದು, ದೇಶದಾದ್ಯಂತ ನಮ್ಮ ತಲುಪುವಿಕೆಯನ್ನು ವಿಸ್ತರಿಸುವುದಕ್ಕೆ ನೆರವಾಗುತ್ತದೆ. ನಮಗೆ ಕರ್ನಾಟಕವು ಬಹು ಮುಖ್ಯ ಮಾರುಕಟ್ಟೆಯಾಗಿದ್ದು ಇಲ್ಲಿರುವ ನಮ್ಮ ಭಾಗೀದಾರರು ಬ್ರ್ಯಾಂಡ್ ಗುರುತಾದ ಮೋಟಾರಿಂಗ್ ಜೀವನಶೈಲಿಯ ಆಚರಣೆ(ಅeಟebಡಿಚಿಣiಟಿg ಒoಣoಡಿiಟಿg ಐiಜಿesಣಥಿಟe’)ಯೊಂದಿಗೆ ಪ್ರತಿಧ್ವನಿಸುತ್ತದೆ. ನಮ್ಮ ವಿಶೇಷ ಮಳಿಗೆಯ ಮೂಲಕ, ಗುಲಬರ್ಗಾದಲ್ಲಿರುವ ನಮ್ಮ ಗ್ರಾಹಕರ ಟೈರ್ ಖರೀದಿ ಅನುಭವವನ್ನು ವರ್ಧಿಸುವುದಕ್ಕೆ ನಾವು ಕಾತರದಿಂದ ಕಾಯುತ್ತಿದ್ದೇವೆ.”ಎಂದು ಹೇಳಿದರು, ಯೋಕೋಹಾಮಾ ಇಂಡಿಯಾದ ಮಾರಾಟ ವಿಭಾಗದ ನಿರ್ದೇಶಕ ಹರೀಂದರ್ ಸಿಂಗ್.

ತಾಂತ್ರಿಕವಾಗಿ ಅತ್ಯಾಧುನಿಕವಾದ ವಿಶಾಲ ಉತ್ಪನ್ನ ಶ್ರೇಣಿಗಾಗಿ ಯೋಕೋಹಾಮಾ ಟೈರ್ಸ್ ಪ್ರಸಿದ್ಧವಾಗಿದ್ದು, ಇವು ಮೋಟಾರುಸವಾರರ ಸದಾ ಬದಲಾಗುತ್ತಿರುವ ಅವಶ್ಯಕತೆಗಳನ್ನು ಪೂರೈಸುತ್ತವೆ.

ಯೋಕೋಹಾಮಾ ಟೈರ್ಸ್‍ನೊಂದಿಗಿನ ಸಹಭಾಗಿತ್ವದ ಬಗ್ಗೆ ಮಾತನಾಡುತ್ತಾ, ಗಾದಾ ಟೈರ್ಸ್‍ನ ಸಂತೋμï ವಿ ಗಾದಾ, “ಧನಾತ್ಮಕವಾದ ಗ್ರಾಹಕ ಅಭಿಪ್ರಾಯ ಮಾಹಿತಿ ಮತ್ತು ಯೋಕೋಹಾಮಾ ಟೈಗಳ ಅತ್ಯುತ್ಕøಷ್ಟ ಗುಣಮಟ್ಟ ಬ್ರ್ಯಾಂಡ್‍ಗೆ ನಮ್ಮ ಬದ್ಧತೆಯ ಪುನರುಚ್ಚರಣೆಯಾಗಿದೆ. ನಮ್ಮ ಗ್ರಾಹಕರು ಟೈನ ಕಾರ್ಯಕ್ಷಮತೆ ಮತ್ತು ವಾರಂಟಿ ಪೆÇ್ರಗ್ರಾಮ್‍ನಿಂದ ಅತೀವ ಸಂತುಷ್ಟರಾಗಿದ್ದಾರೆ. ಙಅಓನ ಭಾಗವಾಗಿರುವುದು, ಈ ಅದ್ಭುತವಾದ ಸಹಭಾಗಿತ್ವದ ವಿಸ್ತರಣೆಯಾಗಿದ್ದು, ಯೋಕೋಹಾಮಾದೊಂದಿಗೆ ನಮ್ಮ ಹೊಸ ಇನ್ನಿಂಗ್ಸ್ ಪ್ರಾರಂಭಿಸುವ ನಿರೀಕ್ಷೆ ಇರಿಸಿಕೊಂಡಿದ್ದೇವೆ.”ಎಂದು ಹೇಳಿದರು.

ಙಅಓ ಡೀಲರ್ ಶಿಪ್ ಮಳಿಗೆಗಳು ಕೇವಲ ಸಾಮಾನ್ಯ ಟೈರ್ ಅಂಗಡಿಗಳಲ್ಲ. ಅವು, ಯೋಕೋಹಾಮಾ ಟೈರ್ಗಳ ಸಂಪೂರ್ಣ ಶ್ರೇಣಿ, ವೀಲ್ ಬ್ಯಾಲೆನ್ಸಿಂಗ್, ವೀಲ್ ಅಲೈನ್‍ಮೆಂಟ್ ಇತ್ಯಾದಿ ನಿಮ್ಮ ಎಲ್ಲಾ ಟೈರ್ ಸಂಬಂಧಿತ ಅಗತ್ಯಗಳು ಮತ್ತು ಸೇವೆಗಳಿಗೆ ಏಕ ನಿಲುಗಡೆ ಪರಿಹಾರವಾಗಿದೆ. ಇವೆಲ್ಲವೂ ಇತ್ತೀಚಿನ ಸಾಧನಗಳು ಮತ್ತು ಯಂತ್ರಗಳು ಮತ್ತು ತರಬೇತಿ ಪಡೆದ ತಂತ್ರಜ್ಞರ ಜೊತೆಗೇ ಬರುತ್ತವೆ. 2020ರಿಂದಲೂ ಯೋಕೋಹಾಮಾ ಇಂಡಿಯಾ,ತನ್ನ ಙಅಓಅನ್ನು ನಾಲ್ಕುಪಟ್ಟು ಹೆಚ್ಚಿಸಿದ್ದು, 2023ರಲ್ಲೂ ತನ್ನ ತಲುಪುವಿಕೆಯನ್ನು ಇನ್ನಷ್ಟು ಪ್ರಬಲವಾಗಿ ವಿಸ್ತರಿಸುವ ಯೋಜನೆ ಇರಿಸಿಕೊಂಡಿದೆ.

emedialine

Recent Posts

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

16 mins ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

22 mins ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

26 mins ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

1 hour ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

4 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

7 hours ago