ವಿದ್ಯೆ ಶಿಸ್ತು ಕಲಿಸಿದ ಗುರು-ಶಿಷ್ಯರ ಬಾಳಿನ ಶಿಲ್ಪಿ; ಶಿಕ್ಷಕ ಶಿವಾನಂದ ಹಿರೇಮಠಗೆ ಬೀಳ್ಕೊಡುಗೆ

0
12

ವಾಡಿ: ಅಕ್ಷರ ವಿದ್ಯೆ ಮತ್ತು ದೈಹಿಕ ಶಿಸ್ತು ಕಲಿಸಿದ ಗುರುಗಳೇ ಶಿಷ್ಯರ ಬಾಳಿನ ಶಿಲ್ಪಿಗಳಾಗಿರುತ್ತಾರೆ. ಗುರುವಿನ ತತ್ವಾದರ್ಶಗಳನ್ನು ಪಾಲಿಸುವಾತನೇ ನಿಜವಾದ ಶಿಷ್ಯನಾಗುತ್ತಾನೆ ಎಂದು ಅಳ್ಳೊಳ್ಳಿ ಸಾವಿರ ದೇವರ ಸಂಸ್ಥಾನ ಮಠದ ಪೂಜ್ಯ ಶ್ರೀಸಂಗಮನಾಥ ಸ್ವಾಮೀಜಿ ನುಡಿದರು.

ಶನಿವಾರ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ದೈಹಿಕ ಶಿಕ್ಷಕ ಶಿವಾನಂದ ಹಿರೇಮಠ ಅವರ ಬೀಳ್ಕೊಡುಗೆ ಸಮಾರಂಭದ ಸಾನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಒಂದೇ ಶಾಲೆಯಲ್ಲಿ 36 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕ ಹಿರೇಮಠ ಅವರಿಗೆ ಸ್ಥಳೀಯವಾಗಿ ಸಾವಿರಾರು ಜನ ಶಿಷ್ಯರ ಪ್ರೀತಿ ವಿಶ್ವಾಸ ದೊರೆತಿದೆ. ವಿವಾಹ ಸಮಾರಂಭವನ್ನೂ ಮೀರಿಸುವಂತೆ ಅದ್ಭುತವಾಗಿ ಆಯೋಜನೆಗೊಂಡಿರುವ ಸೇವಾ ನಿವೃತ್ತಿಯ ಈ ಬೀಳ್ಕೊಡುವ ಸಮಾರಂಭ ನೋಡಿದರೆ ನಿಜಕ್ಕೂ ಇದು ಶಿವಾನಂದ ಅವರ ಶಿಕ್ಷಕ ವೃತ್ತಿ ಜೀವನಕ್ಕೆ ಸಂದ ಗೌರವ ಎಂದು ಬಣ್ಣಿಸಿದರು.

Contact Your\'s Advertisement; 9902492681

ಹಳಕರ್ಟಿ ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಪೂಜ್ಯ ಶ್ರೀಮುನೀಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಮುಗುಳನಾಗಾವಿ ಮಠದ ಶ್ರೀಜೇಮಸಿಂಗ್ ಮಹಾರಾಜ್, ಸಿದ್ದೇಶ್ವರ ಧ್ಯಾನಧಾಮದ ಶ್ರೀರಾಜಶೇಖರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖ್ಯಶಿಕ್ಷಕ ರಾಮಕಿಶನರಾವ ಪವಾರ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಸಂಚಾಲಕ ವೀರಭದ್ರಪ್ಪ ಆರ್.ಕೆ, ಕಸಾಪ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ, ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಮುಖಂಡರಾದ ವಿಠ್ಠಲ ನಾಯಕ, ಹಣಮಂತ ಚವ್ಹಾಣ, ರಾಜುಗೌಡ ಪೊಲೀಸ್ ಪಾಟೀಲ, ರಮೇಶ ಕಾರಬಾರಿ, ರವಿ ಸಿಂಧಗಿ, ದಾವೂದ್ ಪಟೇಲ, ಚಂದ್ರಾಮ ಚವ್ಹಾಣ, ನೀಲಸಿಂಗ ಚವ್ಹಾಣ, ಕಾಶೀನಾಥ ಶೆಟಗಾರ, ಡಾ.ಸುರೇಶ ಕುಲಕರ್ಣಿ, ವೆಂಕಟೇಶ ದೇವದುರ್ಗ, ಗೌತಮ ಪರ್ತೂರಕರ, ರಾಘವೇಂದ್ರ ಅಲ್ಲಿಪುರ, ಸಿಸ್ಟರ್ ಗ್ರೇಸಿ, ಚಿದಾನಂದ ಮಠಪತಿ, ಅಬ್ರಾಹಂ ರಾಜಣ್ಣ, ಹೇಮಂತ ಬಿ.ಕೆ, ಸಿದ್ದಲಿಂಗ ಬಾಳಿ, ಕಾಂತಪ್ಪ ಬಡಿಗೇರ, ಬಾಬುಮಿಯ್ಯಾ, ಬಸವರಾಜ ಹೊಸಮನಿ, ರವಿ ಕಾರಬಾರಿ ಸೇರಿದಂತೆ ಸಾವಿರಾರು ಜನ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಸುನಂದಾ ಕುಲಕರ್ಣಿ ನಿವೃತ್ತ ದೈಹಿಕ ಶಿಕ್ಷಕ ಶಿವಾನಂದ ಹಿರೇಮಠ ಅವರ ಜೀವನ ಪರಿಚಯ ಮಾಡಿಕೊಟ್ಟರು. ಬಂಡಯ್ಯ ಶಾಸ್ತ್ರೀ ನಿರೂಪಿಸಿದರು.

ಟೀಕೆಗೆ ಗುರಿಯಾದ ಶಿಕ್ಷಣಾಧಿಕಾರಿಗಳ ಗೈರು: ಕಳೆದ 36 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ, ಪ್ರತಿವರ್ಷವೂ ನಡೆಯುವ ತಾಲೂಕು ಮತ್ತು ಹೋಬಳಿ ಮಟ್ಟದ ಕ್ರೀಡಾಕೂಟಗಳಲ್ಲಿ ಕ್ರೀಯಾಶೀಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಶಿಕ್ಷಕನ ಬೀಳ್ಕೊಡುಗೆ ಸಮಾರಂಭಕ್ಕೆ ಅಧಿಕೃತವಾಗಿ ಆಹ್ವಾನವಿದ್ದರೂ ಗೈರಾದ ಕ್ಷೇತ್ರಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ, ಬಿಆರ್‍ಪಿ ಮಲ್ಲಿಕಾರ್ಜುನ ಸೇಡಂ, ಅಕ್ಷರ ದಾಸೋಹದ ನಿದೇರ್ಶಕ ಪ್ರಕಾಶ ನಾಯ್ಕೋಡಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ದೇವಿಂದ್ರರೆಡ್ಡಿ ದುಗನೂರ ಅವರು ಹಳೆಯ ವಿದ್ಯಾರ್ಥಿಗಳ ಟೀಕೆಗೆ ಗುರಿಯಾದರು. ಜೀವನಪೂರ್ತಿ ಸರ್ಕಾರಿ ಸೇವೆ ಸಲ್ಲಿಸಿದ ಶಿಕ್ಷಕನಿಗೆ ಕೊನೆಯ ಗಳಿಗೆಯಲ್ಲಿ ಶಿಕ್ಷಣ ಇಲಾಖೆಯಿಂದಲೇ ಅಗೌರವ ದೊರೆತಿದ್ದು, ಸ್ಥಳೀಯರ ಅಸಮಾಧಾನಕ್ಕೂ ಕಾರಣವಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here