ಸುರಪುರ: ನಗರಕ್ಕೆ ನಿರಂತರ ಶುದ್ಧ ಕುಡಿಯುವ ನೀರಿನ ಸರಬರಾಜು ಕಾಮಗಾರಿ ಲೋಕಾರ್ಪಣೆಗೊಳ್ಳುತ್ತಿರುವ ಸಂದರ್ಭದಲ್ಲಿ ಇಲ್ಲಿಯ ನಗರಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಇತರೆ ಸದಸ್ಯರಿಂದ ಅಪಸ್ವರ ವ್ಯಕ್ತವಾಗಿದ್ದು ಇದರ ಕುರಿತು ಮುಖಂಡರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡ ನಾಯಕ (ತಾತಾ) ಮಾತನಾಡಿ,ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅನುದಾನದಲ್ಲಿ ನಿರ್ಮಿಸುತ್ತಿರುವ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣವಾಗಿ ಮುಗಿದಿಲ್ಲ,ಇಂತಹ ಸಂದರ್ಭದಲ್ಲಿ ಅಪೂರ್ಣ ಕಾಮಗಾರಿ ತರಾತುರಿಯಲ್ಲಿ ಲೋಕಾರ್ಪಣೆಗೆ ಮುಂದಾಗಿರುವುದು ಸರಿಯಲ್ಲ ಎಂದರು.ಹುಲಕಲ್ ಗುಡ್ಡದಲ್ಲಿ ನಿರ್ಮಿಸಲಾಗುತ್ತಿರುವ 10 ಲಕ್ಷ ಲೀಟರ್ ಸಾಮಥ್ರ್ಯದ ಮದರ್ ಟ್ಯಾಂಕ್ ನಿರ್ಮಿಸಿರುವ ಸ್ಥಳದ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ,ದಾವೆ ನಡೆಯುತ್ತಿದೆ.
ಒಂದುವೇಳೆ ನ್ಯಾಯಾಲಯದ ತೀರ್ಪು ದೂರುದಾರರ ಪರವಾಗಿ ಬಂದಲ್ಲಿ ಟ್ಯಾಂಕ್ ತೆರವುಗೊಳಿಸಲಾಗುತ್ತದೆಯೇ ಎಂದು ಪ್ರಶ್ನಿಸಿದರು.ಅಲ್ಲದೆ ಅನೇಕ ಕಡೆಗಳಲ್ಲಿ ನಳಗಳ ಜೋಡಣೆ ಮಾಡಿ ಪರೀಕ್ಷೆ ನಡೆಸುತ್ತಿರುವಾಗ ಪೈಪ್‍ಗಳು ಸೋರಿಕೆಯಾಗುತ್ತಿವೆ,ಲೀಕೇಜ್ ಆಗುತ್ತಿರುವ ಪೈಪ್‍ಗಳ ದುರಸ್ಥಿ ಇದೆ,ಈಗ 5 ವರ್ಷಗಳ ನಿರ್ವಹಣೆ ಗುತ್ತಿಗೆದಾರರಿಗಿದೆ,ನಂತರ ಅದರ ಜವಬ್ದಾರಿ ಯಾರಿಗೆ ನೀಡಲಾಗುತ್ತದೆ ಎನ್ನುವುದು ಇದುವರೆಗೂ ತಿಳಿದಿಲ್ಲ
.ಪೈಪ್‍ಲೈನ್ ಮಾಡಲು ಅನೇಕ ಕಡೆಗಳಲ್ಲಿ ಸಿ.ಸಿ ರಸ್ತೆಗಳನ್ನು ಹೊಡೆದು ಹಾಕಲಾಗಿದ್ದು ಇದುವರೆಗೂ ರಸ್ತೆ ದುರಸ್ತಿ ಆಗಿಲ್ಲ,ಹೊಸ ಸಿ.ಸಿ ರಸ್ತೆಯನ್ನು ನಿರ್ಮಿಸಕೊಡಬೇಕು,ಇಂತಹ ಅನೇಕ ಸಮಸ್ಯೆಗಳಿರುವ ಸಂದರ್ಭದಲ್ಲಿ ಚುನಾವಣೆಗಾಗಿ ಕಾಮಗಾರಿಯನ್ನು ಉದ್ಘಾಟನೆ ಮಾಡುತ್ತಿರುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.
ನಮಗೆ ಶಾಸಕರು ಕಾಳಜಿವಹಿಸಿ ಕಾಮಗಾರಿಯನ್ನು ಮಾಡಿಸಿರುವುದರ ಕುರಿತು ಹೆಮ್ಮೆಯಿದೆ,ಆದರೆ ಕಾಮಗಾರಿ ಪೂರ್ಣವಾಗದೆ ಅರ್ಧಮರ್ಧ ಕಾಮಗಾರಿ ಮುಗಿದಿರುವಾಗಲೇ ಉದ್ಘಾಟನೆಗೆ ನಮ್ಮ ವಿರೋಧವಿದೆ ಎಂದರು.ಈ ಸಂದರ್ಭದಲ್ಲಿ ನಗರಸಧೆ ಸದಸ್ಯರಾದ ಕಮ್ರುದ್ದಿನ್,ಜುಮ್ಮಣ್ಣ ಕೆಂಗುರಿ,ಶಕೀಲ ಅಹ್ಮದ್,ಧರ್ಮು ಮಡಿವಾಳ,ಅಹ್ಮದ್ ಶರೀಫ್,ಜಹೀರ್ ಅಹ್ಮದ್ ಬಗ್ಗು,ಲಿಯಾಖತ್ ಹುಸೇನ್ ಇದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…