ಬಿಸಿ ಬಿಸಿ ಸುದ್ದಿ

ಮೀಸಲಾತಿ ವಾಪಾಸು; ಮುಸ್ಲಿಂ ಧ್ವೇಷದ ಭಾಗ | ಸಿಪಿಐಎಂ ಕಾರ್ಯದರ್ಶಿ ಕೆ.ನೀಲಾ ಆಕ್ರೋಶ

ಕರ್ನಾಟಕ ರಾಜ್ಯ ಸರಕಾರ ಹಿಂದುಳಿದ ವರ್ಗ 2 ಬಿ ಅಡಿಯಲ್ಲಿ ಶೇ 4 ರಷ್ಠು ಮೀಸಲಾತಿ ಹೊಂದಿದ್ದ ಮುಸ್ಲಿಂ ಸಮುದಾಯದ ಬಡವರ ಸೌಲಭ್ಯವನ್ನು ವಾಪಾಸು ಪಡೆದಿರುವುದು ಮುಸ್ಲಿಂ ದ್ವೇಷದ ಭಾಗವಾಗಿದೆಯೆಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ಇದು ಧಾರ್ಮಿಕ ತಾರತಮ್ಯವನ್ನು ಮುನ್ನಡೆಸುವ ಜಾತ್ಯಾತೀತ ಭಾರತದ  ಸಂವಿಧಾನದ ವಿರೋಧಿ ದುಷ್ಕೃತ್ಯವಾಗಿದೆಯೆಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮತ್ತು ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಅಲ್ಪ ಸಂಖ್ಯಾತರ ಸಾಮಾಜಿಕ, ಆರ್ಥಿಕ ಹಿಂದುಳಿದಿರುವಿಕೆಯನ್ನು ಸಮಗ್ರವಾಗಿ ಗುರುತಿಸಿ, ಅವರ  ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಅಭಿವೃದ್ದಿಗಾಗಿ ಒಕ್ಕೂಟ ಸರಕಾರಗಳೇ ಈ ಹಿಂದೆ ರಚಿಸಿದ್ದ ನ್ಯಾಯ ಮೂರ್ತಿ ರಾಜೇಂದ್ರ ಸಾಚಾರ್ ಸಮಿತಿ ವರದಿ  ಹಾಗೂ  ಮುಸ್ಲಿಂ ಜನ ಸಮುದಾಯದ ಜನ ಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಸೌಲಭ್ಯ ನೀಡಬೇಕೆಂದು ಡಾ.ರಂಗನಾಥ ಮಿಶ್ರಾ ಸಮಿತಿ ವರದಿಗಳು ಸ್ಪಷ್ಟವಾಗಿ ಹೇಳಿವೆ. ಹೀಗಿರುವಾಗ ಅವರ ಸೌಲಭ್ಯ ವಾಪಾಸು  ಪಡೆದಿರುವುದು ಅಕ್ಷಮ್ಯವಾಗಿದೆ. ಈ ಕೂಡಲೇ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಪಡೆಸಿರುವುದನ್ನು ವಾಪಾಸು ಪಡೆದು ಅವರ ಮೀಸಲಾತಿಯನ್ನು ಮುಂದು ವರೆಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿದೆ.

ಆರ್ಥಿಕವಾಗಿ ಹಿಂದುಳಿದ ವಿಭಾಗಗಳ ಜೊತೆ ಸೇರಿಸಿದಲ್ಲಿ ಮುಸ್ಲಿಂ ಸಮುದಾಯದ ಬಲಹೀನರು ಮೇಲ್ಜಾತಿಗಳ ಸಮುದಾಯಗಳೊಂದಿಗೆ ಸ್ಪರ್ಧಿಸಲಾಗದೇ ಹೋಗುವುದರಿಂದ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಯೆಂಬುದು ಮರೀಚಿಕೆಯಾಗಲಿದೆ. ಬಿಜೆಪಿ ಹಾಗೂ ಆರ್ ಎಸ್ ಎಸ್ ಮುಂತಾದ ಹಿಂದುತ್ವ ಕೋಮುವಾದಿ ಶಕ್ತಿಗಳು ರಾಜ್ಯ ಸರಕಾರದ ಅಧಿಕಾರ ಮತ್ತು ಜನತೆಯ ತೆರಿಗೆಯ ಹಣವನ್ನು ಜನ ವಿರೋಧಿ ದುಷ್ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಮತಾಂಧತೆಯ ಹಾಗೂ ಜಾತಿ ತಾರತಮ್ಯದ ಧೃವೀಕರಣಕ್ಕೆ ಕ್ರಮವಹಿಸಿರುವುದರ ಭಾಗವಿದೆಂದು ವಿವರಿಸಿದೆ.

ಮುಸ್ಲಿಂ ಸಮುದಾಯದ ಮೀಸಲು ಸೌಲಭ್ಯವನ್ನು ವಾಪಾಸು ಪಡೆದು ಆ ಜಾಗದಲ್ಲಿ ಒಕ್ಕಲಿಗ ಹಾಗೂ ಪಂಚಮಸಾಲಿ ಸಮುದಾಯಗಳಿಗೆ ನೀಡಿರುವುದು, ಈ ಎರಡು ಸಮುದಾಯಗಳನ್ನು ಮುಸ್ಲಿಂ ಸಮುದಾಯದ ವಿರುದ್ಧ ಎತ್ತಿಕಟ್ಟುವ, ಅಸಹಿಷ್ಣುತೆಯನ್ನು ಬೆಳೆಸುವ ಕೆಟ್ಟ ಕುತಂತ್ರವಾಗಿದೆಯೆಂದು ಸಿಪಿಐಎಂ ವಿವರಿಸಿದೆ. ಇದರ ಉದ್ದೇಶ ಸಮಾಜದಲ್ಲಿ ಪರಸ್ಪರರ ನಡುವೆ ಅಶಾಂತಿಯನ್ನುಂಟು ಮಾಡಿ ವಿಭಜಿಸಿ ಆಳುವ ಮತ್ತು ಕಾರ್ಪೋರೇಟ್ ಲೂಟಿಯಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಲೂಟಿಕೋರ ತಂತ್ರವಾಗಿದೆ ಎಂದು ಕಿಡಿಕಾರಿದ್ದಾರೆ.

ಅದೇ ರೀತಿ, ಬಿಜೆಪಿ ಮತ್ತು ಹಿಂದುತ್ವವಾದಿ ದುಷ್ಟಕೂಟವು ಜನತೆಯ ಒತ್ತಾಯದ ಮೇರೆಗೆ ಒಂದು ಕಡೆ  ತಾನು ಮೀಸಲಾತಿ ಪರವಾಗಿದ್ದೇನೆಂದು ತೋರಿಕೆಯ ಕ್ರಮ ವಹಿಸುತ್ತಿದ್ದರೇ, ಮತ್ತೊಂದೆಡೆ  ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಮೂಲಕ ದುರ್ಬಲ ಸಮುದಾಯಗಳಿಗೆ ಮತ್ತು ಬಾಲಕಿಯರಿಗೆ ಶಿಕ್ಷಣವನ್ನು ನಿರಾಕರಿಸುತ್ತಿದೆ. ಹಾಗೂ ಲಕ್ಷಾಂತರ ಸರಕಾರಿ ಹುದ್ದೆಗಳನ್ನು ತುಂಬದೇ ರದ್ದುಪಡಿಸಲು ಕ್ರಮ ವಹಿಸುವುದು ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಿಸುವುದು, ಇಲ್ಲವೇ ಹೊರ ಗುತ್ತಿಗೆ ಆಧಾರದಲ್ಲಿ ಅತ್ಯಂತ ನಿಕೃಷ್ಠ ವೇತನಕ್ಕೆ ನಿರುದ್ಯೋಗಿಗಳನ್ನು ಶೋಷಿಸುವ  ಮೂಲಕ, ಅದೇ ರೀತಿ ಖಾಸಗೀ ರಂಗದ ಉದ್ದಿಮೆಗಳು ಹಾಗೂ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನಿರಾಕರಿಸುವ ಮೂಲಕ, ಶಿಕ್ಷಣ ಹಾಗೂ ಉದ್ಯೋಗ ರಂಗದಲ್ಲಿ ಮೀಸಲಾತಿ ಇಲ್ಲದಂತೆ ಮಾಡಲಾಗಿದೆ. ಬಿಜೆಪಿ ಹಾಗೂ ಹಿಂದೂ ಮತಾಂಧರ ಈ ದ್ವಂದ್ವ ನಡೆಯನ್ನು ಮತ್ತು ಕೇವಲ ಮತಬ್ಯಾಂಕ್ ಗಾಗಿ ಮೀಸಲಾತಿ ಕುರಿತಂತೆ ಬಾಯುಪಚಾರದ ಮಾತುಗಳನ್ನು ರಾಜ್ಯದಲ್ಲಿ ಮೀಸಲಾತಿ ಪಡೆಯುವ ಮತ್ತು ಮೀಸಲು ಸೌಲಭ್ಯ ಕೇಳುವ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದೆ.

ಸರ್ವರಿಗೂ ಸಮಪಾಲು ಮತ್ತು ಸಮಬಾಳು ಎಂಬಂತೆ  ರಾಜ್ಯದ ಜನತೆ, ಈ ಸರಕಾರದ ಮತ್ತು ಬಿಜೆಪಿ ಹಾಗೂ ಆರ್ ಎಸ್ ಎಸ್ ಮುಂತಾದ  ಹಿಂದುತ್ವ ಮತಾಂಧ ಕೂಟಗಳು ರಾಜ್ಯದ ಸಾಮರಸ್ಯ ಹಾಳು ಗೆಡಹುವ ಕುತಂತ್ರವನ್ನು ಸೋಲಿಸಲು ಒಗ್ಗೂಡಿ ಹೋರಾಡಬೇಕು ಮತ್ತು  ಸಾರ್ಮುವಜನಿಕ ಶಿಕ್ಷಣದ ಉಳಿವಿಗಾಗಿ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಿಸದಂತೆ, ಸರಕಾರಿ ಉದ್ಯೋಗಗಳನ್ನು ತುಂಬುವಂತೆ ಮತ್ತು ಖಾಸಗೀ ರಂಗದಲ್ಲೂ ಮೀಸಲಾತಿ ವಿಸ್ಥರಿಸುವಂತೆ, ಹಾಗೂ ಮುಸ್ಲಿಂ ಸಮುದಾಯಕ್ಕಾದ ಅನ್ಯಾಯವನ್ನು  ತಡೆಯುವಂತೆ, ಒಗ್ಗೂಡಿ ಒತ್ತಾಯಿಸಬೇಕೆಂದು ಸಿಪಿಐಎಂ ಕರೆ ನೀಡುತ್ತದೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago