ಕಲಬುರಗಿ; ಅಬಕಾರಿ ನಿರೀಕ್ಷಕರಾದ ಸುಭಾಸ ಎಂ. ಕೋಟಿ ಇವರ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ನರೇಂದ್ರಕುಮಾರ ಹೊಸಮನಿ, ಅಣ್ಣಪ್ಪ.ಕೆ ನವಲೆ ಹಾಗೂ ಸಿಬ್ಬಂದಿಗಳೊಂದಿಗೆ ಮಾರ್ಚ್ 28 ರಂದು ಸಂಜೆ 7 ಗಂಟೆಗೆ ಕಲಬುರಗಿ ತಾಲೂಕಿನ ಶರಣಶಿರಸಗಿ ಗ್ರಾಮದಿಂದ ಅಫಜಲಪೂರ ಕಡೆ ಹೋಗುವ ರಸ್ತೆಯ ಬಲಭಾಗದಲ್ಲಿ ಬರುವ ದಾಬಾದ ಪತ್ರಾಸ್ ಶೆಡ್ ಮೇಲೆ ಅಬಕಾರಿ ದಾಳಿ ನಡೆಸಿ 86.640 ಲೀ. ಮದ್ಯ ಹಾಗೂ 31.200 ಲೀ. ಬಿಯರ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಲಬುರಗಿ ವಲಯ ನಂ.2ರ ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲ್ಕಂಡ ಮದ್ಯ ಹಾಗೂ ಬೀಯರ್ ಮೌಲ್ಯವು ಅಂದಾಜು 64,892 ರೂ ಇದ್ದು, ಅಬಕಾರಿ ಉಪನಿರೀಕ್ಷಕರ-2 ನರೇಂದ್ರಕುಮಾರ ಹೊಸಮನಿ ಅವರು ಓರ್ವ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ಈ ದಾಳಿ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳಾದ ಆಸೀಫ್ ಇಕ್ಬಾಲ್, ಚನ್ನಪ್ಪ ಸಾಹು, ಮಹ್ಮದ್ ರಿಜ್ವಾನ್ ಹಾಗೂ ಸಂತೋಷ ಜಮಾದಾರ ಉಪಸ್ಥಿತರಿದ್ದರು.
ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ ಇವರ ಆದೇಶದಂತೆ ಹಾಗೂ ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು (ಜಾ&ತ) ರವರ ನಿರ್ದೇಶನದ ಮೇರೆಗೆ ಮತ್ತು ಕಲಬುರಗಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಹಾಗೂ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶದನ್ವಯ ಈ ದಾಳಿಯನ್ನು ನಡೆಸಲಾಗಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…