ಕಲಬುರಗಿ: ವಿಶ್ವದ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿ ಆ ಮೂಲಕ ಎಲ್ಲಾ ಜಾತಿ ಜನಾಂಗಕ್ಕೆ ತಮ್ಮದೇಯಾದ ಗೌರವಯುತ ಬದುಕು ನೀಡಿದ ಡಾ. ಅಂಬೇಡ್ಕರ್ ಅವರ ಬಗ್ಗೆ ನಾವ್ಯಾರು ಇಲ್ಲಿಯವರೆಗೂ ತಿಳಿದುಕೊಳ್ಳಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬಾಬಾಸಾಹೇಬರ ಕುರಿತು ಓದುವ ಸಂಸ್ಕೃತಿ ಹೆಚ್ಚು ಹೆಚ್ಚಾಗಿ ಬೆಳೆಯಬೇಕಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 132ನೇ ಜಿಲ್ಲಾ ಜಯಂತ್ಸುತ್ಸವ ಸಮಿತಿ ಶನಿವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಂದು ಜಾತಿಗಾಗಿ ತಮ್ಮ ಜೀವನದ ಉದ್ದಕ್ಕೂ ಹೋರಾಟ ಮಾಡಲಿಲ್ಲ. ಬದಲಾಗಿ ದೇಶದ ತುಳಿತಕ್ಕೊಳಗಾದ ಸಮುದಾಯದ ಶ್ರೇಯಸ್ಸಿಗಾಗಿ ಶ್ರಮಿಸಿದ್ದಾರೆ. ದುರಾದೃಷ್ಟವಶಾತ್ ಇಂದು ಡಾ.ಅಂಬೇಡ್ಕರ್ ಜಯಂತಿಯನ್ನು ಕೇವಲ ದಲಿತರ ಓಣಿಗಳಲ್ಲಿ ಆಚರಣೆ ಮಾಡಲಾಗುತ್ತಿದೆಯೇ ಹೊರತು, ಅವರು ಕೊಟ್ಟ ಸಂವಿಧಾನದ ಮೂಲಕ ಮೀಸಲಾತಿ ಹಕ್ಕುಗಳನ್ನು ಪಡೆಯುವ ಯಾವ ಮೇಲ್ವರ್ಗದ ಓಣಿಗಳಲ್ಲಿ ಬಾಬಾ ಸಾಹೇಬರ ಜಯಂತಿ ಆಚರಣೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ಮಗನ ಸಾವಿನಲ್ಲೂ ದೇಶದ ಭವಿಷ್ಯಕ್ಕಾಗಿ ಚಿಂತಿಸಿದ್ದ ಡಾ. ಬಾಬಾಸಾಹೇಬರು ಹೊರದೇಶದಲ್ಲಿ ಓದಿ ಮಿತಿಮೀರಿದ್ದ ಜಾತಿಯ ಅವಮಾನಗಳನ್ನು ಸಹಿಸಿಕೊಂಡು ಸಂವಿಧಾನದ ಮೂಲಕ ಅಸಮಾನತೆಯನ್ನು ತೊಲಗಿಸಲು ಪ್ರಯತ್ನಿಸಿದ್ದಾರೆ. ಆದರೆ ಇನ್ನೂ ಆ ಅಸ್ಪೃಶ್ಯತೆ ಮುಂದುವರಿದಿರುವುದು ಶೋಚನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಚಿದಾನಂದ ಕುಡ್ಡನ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿನೇಶ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ. ಉಮಾದೇವಿ ಮಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಸುರೇಶ ಬಡಿಗೇರ, ಡಾ.ನಾಗಪ್ಪ ಗೋಗಿ, ಮಹಾಂತೇಶ ಸಾಲಿಮಠ, ಪ್ರಕಾಶ ಮೂಲಭಾರತಿ, ಅಶ್ವಿನಿ ಸಂಕಾ, ಗಣೇಶ ವಳಕೇರಿ ಪಾಲೊಂಡಿದ್ದರು.
ಪರಿವರ್ತನ ಕಲಾ ತಂಡದ ಶರಣು ಹಂಗರಗಿ ಹಾಗೂ ಸಂಗಡಿಗರು ಭೀಮಗೀತೆ ಗಾಯನ ಪ್ರಸ್ತುತಪಡಿಸಿದರು. ನಂತರ ನಡೆದ ಕವಿಗೋಷ್ಠಿ ಕಾರ್ಯಕ್ರಮವು ಎಸ್.ಪಿ. ಸುಳ್ಳದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಡಾ. ಸೂರ್ಯಕಾಂತ ಸುಜ್ಯಾತ್, ಡಾ. ಶಾಂತಪ್ಪ ಡಂಬಳ, ಡಾ. ಶರಣಬಸಪ್ಪ ವಡ್ಡನಕೇರಿ, ಹರಿಕೃಷ್ಣ ಸಿಂದಬಂದಗಿ ಅವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ವಿ.ಆರ್. ಚಾಂಬಾಳ, ಡಾ.ಕೆ.ಎಸ್.ಬಂಧು, ಬೀಮಣ್ಣ ಬೋನಾಳ, ಡಾ.ಬಸವರಾಜ ದಯಾಸಾಗರ, ಎಂ.ಎನ್.ಸುಗಂದಿ, ರಾಜಶೇಖರ ಮಾಂಗ್, ಡಾ.ಗಾಂಧಿಜೀ ಮೋಳಕೆರೆ, ಧರ್ಮಣ್ಣ ಧನ್ನಿ, ಡಾ. ಹಣಮಂತ ಮೇಲ್ಕೇರಿ, ಡಾ. ವಿಜಯಕುಮಾರ ಬೀಳಗಿ ಸೇರಿ ಮತ್ತಿತರರ ಕವಿಗಳು ಭಾಗವಹಿಸಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…