ಬಿಸಿ ಬಿಸಿ ಸುದ್ದಿ

ಅವಂಟಿ ಪರಿವಾರದಿಂದ ಕಾಂಗ್ರೆಸ್ ಗೆ ಆನೆ ಬಲ : ಶುಭಾಷ ರಾಥೋಡ್

ಚಿಂಚೋಳಿ: ವಿದಾನ ಸಭಾ ಮತಕ್ಷೇತ್ರಕ್ಕೆ ತನ್ನದೆ ಯಾದ ಇತಿಹಾಸ ಹೊಂದಿದ್ದು ಎಲ್ಲರ ಕಣ್ಣು ಚಿಂಚೋಳಿ ಕ್ಷೇತ್ರದ ಕಡೆಗಿರುತ್ತೆ ಇಲ್ಲಿ ಯಾವ ಪಕ್ಷ ಗೆಲ್ಲತ್ತೆಯೋ ಆ ಪಕ್ಷ ಕರ್ನಾಟಕದಲ್ಲಿ ಅದಿಕಾರದ ಗದ್ದುಗೆ ಹಿಡಿಯುತ್ತೆ ಎಂಬುದು ವಾಡಿಕೆ. ಕಟು ಸತ್ಯ ಇದಕ್ಕೆ ಪ್ರತಿ ಚುನಾವಣೆಯೇ ಸಾಕ್ಷೀ ಕಳೆದ 2019 ಉಪ ಚುನಾಣೆಯಲ್ಲಿ ಬಿಜೆಪಿ ಅಬ್ಯರ್ಥಿ ಜಯಶಾಲಿಯಾದಾಗ ಕಾಂಗ್ರೆಸ್‌ ಜೆಡಿಎಸ್ ಸಮಿಶ್ರ ಸರಕಾರ ಪತನಾವಾಗಿ ಕಾಕತಾಳಿಯಂತೆ ಬಿಜೆಪಿ ಸರಕಾರ ರಚನೆಯಾಯಿತು.

ಉಪ ಚುನಾವಣೆಯಲ್ಲಿ ಬಿಜೆಪಿ ಅಬ್ಯರ್ಥಿ ಡಾ: ಅವಿನಾಶ್ ಜಾದವ ರವರು ಗೆಲ್ಲಲು ಕೋಲಿ ಸಮಾಜದ ಮತಗಳು ನಿರ್ಣಾಯಕ ವಾಗಿದ್ದು. ಲಕ್ಷ್ಮಣ ಆವುಂಟಿ ಹಾಗೂ ಅವರ ತಂಡ ಪ್ರಮುಖ ಪಾತ್ರವಹಿಸಿದ್ದು ಅಬ್ಯರ್ಥಿಯ ಚುನಾವಣಾ ಎಜೆಂಟರಾಗಿ ಹಾಗೂ ಪ್ರಚಾರ ಪ್ರಮುಖರಾಗಿ ಲಕ್ಷ್ಮಣ ಆವುಂಟಿ ರವರು ಪ್ರತಿ ಭೂತಗೆ ಅಬ್ಯರ್ಥಿ ಯೊಂದಿಗೆ ಮುಖಂಡರೊಂದಿಗೆ ತೆರಳಿ ಕೋಲಿ ಸಮುದಾಯ ಹಾಗೂ ಹಿಂದುಳಿದ ಸಮುದಾಯದ ಮತ ಸೆಳೆಯಲು ಯಶಸ್ವಿಯಾಗಿದ್ದಾರು.

ಧರ್ಮ ಪತ್ನಿ ಶ್ರೀಮತಿ ನರಸಮ್ಮ ಆವುಂಟಿ ರವರು ಕೂಡಾ ಸ್ತ್ರೀ ಶಕ್ತಿ ಒಕ್ಕೊಟದ ಅದ್ಯಕರಾಗಿದ್ದು ಸಾವಿರಾರು ಮಹಿಳೆಯರ ನ್ನು ಮನವಲಿಸಿ ಡಾ: ಅವಿನಾಶ್ ಜಾದವರವರನ್ನು ಗೆಲ್ಲಿಸಲು ಶ್ರಮವಹಿಸಿದರು.ಅಷ್ಟೇ ಯಲ್ಲ ಕಲಬುರ್ಗಿ ಹಾಗೂ ಬಿದರ ಲೋಕ ಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಜೊತೆಗೂಡಿ ಕೋಲಿ ಸಮಾಜದ ಮತಗಳು ಬಿಜೆಪಿ ಪಕ್ಷಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದರು ಲಕ್ಷ್ಮಣ ಆವುಂಟಿ ರವರು ಬಿದರ ಲೋಕ ಸಭಾ ಕ್ಷೇತ್ರದ ಚಿಂಚೋಳಿ ಮಂಡಲದ ಸಂಚಾಲಕರಾಗಿಯು ಕೆಲಸ ಮಾಡಿದರು.

ಪಕ್ಷ ಯಾವದೆ ಕೆಲಸ ನಿಡಿದರು ಕೂಡಾ ನಿಷ್ಠೆ ಮತ್ತು ಪ್ರಮಾಣಿಕತೆಯಿಂದ ದುಡಿದ ಇವರನ್ನು ಬಿಜೆಪಿ ಪಕ್ಷ ಹಾಗೂ ಶಾಸಕರು ಸಂಸದರು ಯಾವದೆ ಸ್ಥಾನ ಮಾನ ನಿಡದೆ ಸಂಪೂರ್ಣವಾಗಿ ಮುಲೆಗುಂಪು ಮಾಡಲಾಗಿತ್ತು ಅಷ್ಠೆಯಲ್ಲಿ ಕೋಲಿ ಸಮಾಜದ ಪ್ರಮುಖ ಬೆಡಿಕೆಯಾದ ಎಸ್ ಟಿ‌ ಸೇರ್ಪಡೆಯ ಕುರಿತು ಬಿಜೆಪಿ ಪಕ್ಷ ಹಾಗೂ ಸಂಸದರುಗಳ ಮೃದು ದೊರಣೆಗೆ ಸುಳ್ಳು ಭರವಸೆಗೆ ಬೆಸತ್ತು ಜನರ ಒತ್ತಾಯದ ಮೆರಿಗೆ ಬಾಬುರಾವ ಚಿಂಚನಸೂರ್ ಜೊತೆಗೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಾಗಿನಿಂದ ಚಿಂಚೋಳಿ ‌ಕ್ಷೇತ್ರದ ಹಳ್ಳಿ ಹಳ್ಳಿಗು ತೆರಳಿ ಬಿಜೆಪಿ ಮತ್ತು ಸಂಸದರು ಕೋಲಿ ಸಮಾಜಕ್ಕೆ ಮಾಡಿದ ಅನ್ಯಾಯವನ್ನು ಸಮಾಜದ ಬಂದುಗಳಿಗೆ ತಿಳಿಸಿ ಸಾವಿರಾರು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳಿಸಿ ಸುಭಾಷ್ ರಾಠೊಡ ರವರನ್ನು‌ ಬೆಂಬಲಿಸಲು‌ ಮನವಿ ಮಾಡಿಕೊಳ್ಳುತ್ತಿದ್ದು ಕಾಂಗ್ರೆಸ್ ಪಕ್ಷದ ಪ್ರಚಾರದ ಸಾರತ್ಯ ಕುಡಾ ಪಕ್ಷ ವಹಿಸಿದೆ.

ಇವರಂತೆ ಇವರ ಧರ್ಮ ಪತ್ನಿ ಕೂಡಾ ಇಂದು ಸಾವಿರಾರು ಮಹಿಳೆಯರು ಬೆಂಬಲಿಗರೊಂದಿಗೆ ಬಿಜೆಪಿ‌ ತ್ಯಜಿಸಿ ಸುಭಾಷ್ ರಾಠೊಡ ಹಾಗೂ ಡಾಃ ಶರಣ ಪ್ರಕಾಶ ಪಟೀಲ್ ರವರ ನಾಯಕತ್ವ ದಲ್ಲಿ ಪಕ್ಷದ ಅದ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾದರು.

ಇದರಿಂದ ಚಿಂಚೋಳಿ ಸೇಡಂ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚಿನ ಬಲ ಬಂತಾಗಿದೆ ಇವರ ಜೊತೆಗೆ ಇವರೊಂದಿಗಿರು ಕೋಲಿ ಸಮಾಜದ ಬಂದುಗಳು ಕಾರ್ಯಕರ್ತರು ಮಹಿಳಾ ಪಡೆ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುಲಾಗುತ್ತಿದೆ.

ಇದಕ್ಕೆ ಸಾಕ್ಷಿ ಲಕ್ಷ್ಮಣ ಆವುಂಟಿ ರವರು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆ ಯಾದಾಗಿನಿಂದ ಕೋಲಿ ಸಮಾಜದ ಬಂದುಗಳು ಅವರ ಅಬಿಮಾನಿಗಳು ತಂಡೊಪ ತಂಡವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೆಸ್ ನತ್ತ ವಲವು ವ್ಯಕ್ತ ಪಡಿಸುತ್ತಿದ್ದಾರೆ. ನರಸಮ್ಮ ಆವುಂಟಿ ರವರೊಂದಿ ಸಾವಿರಾರು ಮಹಿಳೆಯರು ಜೊತೆಗಿದ್ದಿರುವದು ಸಾಕ್ಷಿಯಾಗಿದೆ.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 hour ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 hour ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

4 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

4 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

4 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

4 hours ago