ಬಿಸಿ ಬಿಸಿ ಸುದ್ದಿ

ಇದ್ರಿಶ್ ಪಾಷಾ ಕೊಲೆಗಡುಕರಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಕಲಬುರಗಿಯಲ್ಲಿ ಪ್ರತಿಭಟನೆ

ಕಲಬುರಗಿ; ಕಳೆದ ಮೂರು ದಿನಗಳ ಹಿಂದೆ ಕನಕಪುರ ತಾಲೂಕಿನ ಸಾತನೂರು ಬಳಿ ಗೋರಕ್ಷಕ ವೇಷದ ಕೊಲೆಗಡುಕ ಮತಾಂಧ ಗೂಂಡಾ ಪಡೆ, ಇದ್ರಿಷ್ ಪಾಷಾ ಎಂಬ ಬಡ ಮುಸ್ಲಿಂ ಕಾರ್ಮಿಕನನ್ನು ಬಲವಂತವಾಗಿ ಕಾಂಪೌಂಡ್ ಒಂದರಲ್ಲಿ ಕೂಡಿಹಾಕಿ ಎಲೆಕ್ಟ್ರಿಕ್ ಶಾಖ್ ಮೂಲಕ ಚಿತ್ರ ಹಿಂಸೆಯನ್ನು ನೀಡಿ ಕೊಲೆ ಮಾಡಿರುವ ಘಟನೆ ಖಂಡಿಸಿ, ಮತಾಂಧ ಶಕ್ತಿಗಳಿಗೆ ಒಳಪಟ್ಟಿರುವ ಕೊಲೆಗಡುಕರನ್ನು ಕಠಿಣ ಶಿಕ್ಷೆಗೆ ಗುರಿಸಪಡಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ) ಜಿಲ್ಲಾ ಸಮಿತಿ ಆಗ್ರಹಿಸಿದೆ.

ನಗರದ ಸರದಾರ್ ವಲ್ಲಭಾಯಿ ಪಟೇಲ್ ವೃತದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.

ಗದಗ ಜಿಲ್ಲೆಯ ನರಗುಂದಾದಲ್ಲಿ ಸಮೀರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಲೀಲ್ , ಮಸೂದ್ , ಫಾಜಿಲ್ ರ ಕೊಲೆಗಳು ಈಗಾಗಲೇ ನಡೆದು ಹೋಗಿವೆ. ಸರಕಾರವು ಮುಸ್ಲಿಂ ಸಮುದಾಯದ ವಿರುದ್ದ ಧಾರ್ಮಿಕ ತಾರತಮ್ಯ ಮೆರೆಯುತ್ತಿರುವುದು ಮತ್ತು ಹಿಂದುತ್ವವಾದಿ ಮತಾಂಧರ ಕುರಿತ ಪ್ರೋತ್ಸಾಹಿಸುವಂತಹ ಮೆದು ಧೋರಣೆಯಿಂದ ಇಂತಹ ಘಟನೆಗಳು ಬೆಳೆಯುತ್ತಿರುವುದರ ಹಿಂದಿನ ಕುಮ್ಮಕ್ಕಾಗಿದೆ ಎಂದು ಆರೋಪಿಸಿದ್ದಾರೆ.

ಮಂಡ್ಯ ಜಿಲ್ಲೆಯ ಇದ್ರೀಶ್ ಪಾಷಾರವರ ಕೊಲೆಗೆ ಕಾರಣರಾದ  ಗೋರಕ್ಷಕ ವೇಶದ ಕೊಲೆಗಡುಕರನ್ನು ಉಗ್ರ ಶಿಕ್ಷೆಗೆ ಒಳಪಡಿಸಿ,  ಇದ್ರಿಶ್ ಕುಟುಂಬಕ್ಕೆ ತಕ್ಷಣವೇ 25 ಲಕ್ಷ ರೂಪಾಯಿಗಳ ನೆರವು ಮತ್ತು ಮಕ್ಕಳಿಗೆ ಉನ್ನತ ಹಂತದವರೆಗೆ ಉಚಿತ ವಿದ್ಯಾಭ್ಯಾಸ ಮತ್ತು ಒಂದು ಸರಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು.

ರೈತ ಹಾಗೂ ಹೈನೋದ್ಯಮ, ಮಾಂಸೋದ್ಯಮ ಮತ್ತು ಚರ್ಮೋದ್ಯಮವನ್ನು ನಾಶ ಮಾಡುವ, ಜನತೆಯ ಆಹಾರದ ಹಕ್ಕು, ಬದುಕುವ ಹಾಗೂ ಉದ್ಯೋಗದ ಹಕ್ಕಿನ ಮೇಲೆ ಧಾಳಿ ಮಾಡಿರುವ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ – 2020 ನ್ನು ಈ ಕೂಡಲೇ ವಾಪಾಸು ಪಡೆಯಬೇಕು. ಬಡ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ 2ಬಿ ಮೀಸಲಾತಿ ಸೌಲಭ್ಯ ರದ್ದತಿಯನ್ನು ತಡೆಯಬೇಕು ಹಾಗೂ ಅದನ್ನು ಪುನರ್ಸ್ಥಾಪಿಸಿ ಮುಂದುವರೆಸಬೇಕೆಂದು ಆಗ್ರಹಿಸಿದರು.

ಸಾರ್ವಜನಿಕ ರಂಗದ ಶಿಕ್ಷಣ ಹಾಗೂ ಸಾರ್ವಜನಿಕ ಉದ್ಯಮ ಹಾಗೂ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಾಪಾಸು ಪಡೆಯಬೇಕು‌. ಖಾಲಿ ಇರುವ ಎಲ್ಲ ಸರಕಾರಿ ಹುದ್ದೆಗಳನ್ನು ತುಂಬಬೇಕು. ಖಾಸಗೀರಂಗದಲ್ಲೂ ಮೀಸಲಾತಿಯನ್ನು ಜಾರಿಗೊಳಿಸಬೇಕು.

ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ನಡೆದ ಚಳುವಳಿಯ ಮೇಲಿನ ಗೋಲಿಬಾರ್ ಪ್ರಕರಣದಲ್ಲಿ ಮಡಿದ ಮುಸ್ಲಿಂ ಯುವಜನರ ಕುಟುಂಬಗಳಿಗೆ ನೀಡಲಾದ ಪರಿಹಾರದ ಚೆಕ್ ಗಳನ್ನು ಅಂದು ಮತಾಂಧತೆಯ ಒತ್ತಡಕ್ಕೆ ಮಣಿದು ವಾಪಾಸು ಪಡೆದರು ಮತ್ತು  ತಾವು ಮತೀಯ ಕಾರಣದಿಂದ ಕೊಲೆಯಾದ ಹಿಂದುತ್ವವಾದಿ ಯುವಕರ ಮನೆಗೆ ತೆರಳಿ 25 ಲಕ್ಷ ರೂಗಳ ನೆರವು ನೀಡಲಾಗಿತ್ತು.

ಆದರೇ ಅಂತಹದ್ದೆ ಮತೀಯ ದುಷ್ಕೃತ್ಯಕ್ಕೆ ಬಲಿಯಾದ ಮುಸ್ಲಿಂ ಜನತೆಯ ಕುಟುಂಬಗಳನ್ನು ಸಂತೈಸುವ ಕೆಲಸವನ್ನು ಮಾಡಲಿಲ್ಲ ಮತ್ತು ನೆರವನ್ನು ನೀಡಲಿಲ್ಲ. ಇಂತಹ ಕೊಲೆಗಡುಕರ ಮೇಲೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ, ಇಂತಹ ಧಾಳಿಗಳಿಗೆ ಪೂರಕವಾದ ಕಾಯ್ದೆಗಳನ್ನು ಜಾರಿಗೊಳಿಸಲು ಕ್ರಮ ವಹಿಸಲಾಗಿತ್ತು ಇಡೀ ಮುಸ್ಲಿಂ ಸಮುದಾಯ ರಂಜಾನ್ ಹಬ್ಬದ ಸಡಗರದಲ್ಲಿರುವಾಗ ರಾಜ್ಯ ಸರಕಾರ ಅವರನ್ನು ಪ್ರೋತ್ಸಾಹಿಸುವ ದಿಶೆಯಲ್ಲಿ ನೆರವನ್ನು ಘೋಷಿಸಬೇಕಾದ ಜಾಗದಲ್ಲಿ ಅವರಿಗೆ ಇದುವರೆಗೆ ನೆರವಾಗುತ್ತಿದ್ದ ಮೀಸಲಾತಿ ಹಕ್ಕನ್ನು ವಾಪಾಸು ಪಡೆಯುವ  ಅತ್ಯಂತ ನಾಚಿಕೆ ಗೇಡಿನ ಕೃತ್ಯ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಇಂತಹ ಎಲ್ಲಾ ಧಾರ್ಮಿಕ ಹಾಗೂ ಜಾತಿತಾರತಮ್ಯದ ನೀತಿಗಳನ್ನು ಈ ಕೂಡಲೇ ಕೈಬಿಟ್ಟು. ಧಾರ್ಮಿಕ ಕೊಲೆಗಳಿಗೆ ಕೊನೆ ಹಾಡಬೇಕೆಂದು ಸಿಪಿಐಎಂಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮಂಡಳಿ ಸದಸ್ಯ ಹಾಗೂ ಜಿಲ್ಲಾ ಕಾರ್ಯದರ್ಶಿ ಎಂ.ಬಿ ಸಜ್ಜನ್ ಸೇರಿಂದತೆ ಅಖಿಲ ಭಾರತೀಯ ಜನವಾದಿ ಮಹಿಳಾಸ ಸಂಘಟನೆ ಜಿಲ್ಲಾ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago