ಬಿಸಿ ಬಿಸಿ ಸುದ್ದಿ

ನಿಗಮದ ಇಬ್ಬರು ಚಾಲಕರಿಗೆ “ಹೀರೋಸ್ ಆನ್ ದ ರೋಡ್” ರಾಷ್ಟ್ರಮಟ್ಟದ ಸುರಕ್ಷಾ ಪ್ರಶಸ್ತಿ

ಕಲಬುರಗಿ; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅತೀ ಹೆಚ್ಚಿನ ಅವಧಿಗೆ ಅಪಘಾತ ರಹಿತ ಸುರಕ್ಷಿತ ಬಸ್ ಚಾಲನೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ ಎ.ಎಸ್.ಆರ್.ಟಿ.ಯು. (ಂSಖಖಿU) ನೀಡುವ “ಹೀರೋಸ್ ಆನ್ ದ ರೋಡ್” ರಾಷ್ಟ್ರಮಟ್ಟದ ಸುರಕ್ಷಾ ಪ್ರಶಸ್ತಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-01ರ ಕಲಬುರಗಿ ಘಟಕ-04ರ ಚಾಲಕರಾದ ಶ್ರಾವಣ ಹಾಗೂ ಹೊಸಪೇಟೆ ವಿಭಾಗದ ಹಡಗಲಿ ಘಟಕದ ಚಾಲಕ ಎಸ್.ಎಸ್.ಸೋಮನಕಟ್ಟಿ ಸೇರಿದಂತೆ ಇಬ್ಬರು ಚಾಲಕರು ಭಾಜನರಾಗಿದ್ದು, ನಿಗಮದ ಇಬ್ಬರು ಚಾಲಕರು ಈ ಪ್ರಶಸ್ತಿ ಪಡೆದಿದ್ದಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಧಾಪಕ ನಿರ್ದೇಶಕರಾದ ಎಮ್. ರಾಚಪ್ಪ ಅವರು ಅಭಿನಂಧಿಸಿದ್ದಾರೆ.

18.04.2023 ರಂದು ನವದೆಹಲಿಯಲ್ಲಿ ಜರುಗಿದ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ ಎ.ಎಸ್.ಆರ್.ಟಿ.ಯು. (ಂSಖಖಿU) ಅಧ್ಯಕ್ಷೆ ಅಲ್ಕಾ ಉಪಾಧ್ಯಾಯ ಹಾಗೂ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು, ಮತ್ತು ವ್ಯವಸ್ಧಾಪಕ ನಿರ್ದೇಶಕರು, ಎ.ಎಸ್.ಆರ್.ಟಿ.ಯು. ಂSಖಖಿU ಉಪಾಧ್ಯಕ್ಷ ಶೇಕರ್ ಚನ್ನೆ ಅವರು ಚಾಲಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಅತಿ ಹೆಚ್ಚನ ಅವಧಿಗೆ ಅಪಘಾತ ರಹಿತ ಬಸ್ ಚಾಲನೆ ಮಾಡಿದ 42 ಚಾಲಕರುಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ದೇಶದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಧೆಯಲ್ಲಿ ಸುರಕ್ಷಿತ ಬಸ್ ಚಾಲನೆಯನ್ನು ಉತ್ತೇಜಿಸಲು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟ ಎ.ಎಸ್.ಆರ್.ಟಿ.ಯು. (ಂSಖಖಿU) ವತಿಯಿಂದ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ವಿವಿಧ ರಾಜ್ಯಗಳ ಸಾರಿಗೆ ನಿಗಮಗಳಲ್ಲಿ ಸೇವಾ ಅವಧಿಯಲ್ಲಿ ದೂರು, ಅಪರಾಧಗಳಿಲ್ಲದ ಅಪಘಾತ ರಹಿತ ಚಾಲಕರುಗಳನ್ನು ಆಯ್ಕೆ ಮಾಡಲಾಗಿರುತ್ತದೆ. ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಗಿಫ್ಟ್ ಹ್ಯಾಂಪರ್ ಹಾಗೂ 10,000 ರೂ. ನಗದು ಪುರಸ್ಕಾರ ಒಳಗೊಂಡಿದೆ.
ಚಾಲಕರಾದ ಎಸ್.ಎಸ್.ಸೋಮನಕಟ್ಟಿ ಅವರು 31 ವರ್ಷ ಸೇವೆ ಸಲ್ಲಿಸಿದ್ದುಮ ಪ್ರಸ್ತುತ ಹೊಸಪೇಟೆ ವಿಭಾಗದ ಹೂವಿನ ಹಡಗಲಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಪಘಾತ ರಹಿತ ಬಸ್ ಚಾಲನೆಗಾಗಿ ಸಾರಿಗೆ ನಿಗಮದಲ್ಲಿ 1998ರಲ್ಲಿ ಬೆಳ್ಳಿ ಪದಕ ಹಾಗೂ 2016ರಲ್ಲಿ ಚಿನ್ನದ ಪದಕ ಲಭಿಸಿದೆ. ಇದಲ್ಲದೇ ಇನ್ನೋರ್ವ ಚಾಲಕರಾದ ಶ್ರಾವಣ ಅವರು 24 ವರ್ಷ ಸೇವೆ ಸಲ್ಲಿಸಿದ್ದು, ಪ್ರಸ್ತುತ ಕಲಬುರಗಿ ವಿಭಾಗ-01 ಮತ್ತು ಕಲಬುರಗಿ ಘಟಕ-04ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಪಘಾತ ರಹಿತ ಬಸ್ ಚಾಲನೆಗಾಗಿ ಸಾರಿಗೆ ನಿಗಮದಲ್ಲಿ 2006ರಲ್ಲಿ ಬೆಳ್ಳಿ ಪದಕ ಹಾಗೂ 2016ರಲ್ಲಿ ಚಿನ್ನದ ಪದಕ ಲಭಿಸಿರುತ್ತದೆ ಎಂದು ಕಲಬುರಗಿ ಕೇಂದ್ರ ಕಚೇರಿಯ ಮುಖ್ಯ ಸಂಚಾರ ವ್ಯವಸ್ಧಾಪಕರಾದ ವ್ಹಿ ಹೆಚ್ ಸಂತೋಷಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನದಿಂದ ದಿನಕ್ಕೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಅಪಘಾತರಹಿತ ಸುರಕ್ಷಿತ ಬಸ್ ಚಾಲನೆ ಸವಾಲಿನ ಕೆಲಸ. ಇಬ್ಬರೂ ಚಾಲಕರು ತಮ್ಮ ಸುಧೀರ್ಘ ಸೇವಾವಧಿಯಲ್ಲಿ ಯಾವುದೇ ಅಪರಾಧ, ದೂರುಗಳಿಗೆ ಅವಕಾಶ ನೀಡದೆ ಅಪಘಾತ ರಹಿತ ಚಾಲನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago