ಕಲಬುರಗಿ:ವಚನ ಚಳುವಳಿಯ ನೇತಾರ ವಿಶ್ವಗುರು ಬಸವಣ್ಣನವರದು ಆಯಸ್ಕಾಂತದ ವ್ಯಕ್ತಿತ್ವ ಎಂದು ಲೇಖಕ -ಪತ್ರಕರ್ತ ಡಾ.ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಇಲ್ಲಿನ ಜಯನಗರದ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಬಸವ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಜಯಂತಿ ಆಚರಣೆಯನ್ನು 1913ರಲ್ಲಿ ಹರ್ಡೇಕರ್ ಮಂಜಪ್ಪನವರು ಆರಂಭ ಮಾಡಿದರು ಎಂದು ತಿಳಿಸಿದರು.
ದೇಶದ ಇಂದಿನ ಸಂಕಟ ಮತ್ತು ಬಿಕ್ಕಟ್ಟುಗಳಿಗೆ ಹಾಗೂ ಉದ್ಧಾರಕ್ಕೆ ಬಸವ ಮಾರ್ಗವೊಂದೇ ಪರಿಹಾರವಾಗಿದ್ದು, ಬಸವಾದಿ ಶರಣರ ವಚನಗಳನ್ನು ಓದುವುದಕ್ಕೆ ಮತ್ತು ಹಾಡುವುದಕ್ಕೆ ಸೀಮಿತ ಮಾಡದೆ ವಚನ ಜೀವನ ಬದುಕಬೇಕು,ಬಸವಣ್ಣ ಲೋಕಸೂರ್ಯ .ಬೆಳಕು ಇದ್ದಲ್ಲಿ ಕತ್ತಲೆ ಕಾಲ್ತೆಗೆಯುವಂತೆ ಬಸವಣ್ಣನವರಿದ್ದಲ್ಲಿ ಜಾತಿ,ಮತಗಳಿಲ್ಲ,ಮೇಲು ಕೀಳಿಲ್ಲ , ಸಮಭಾವ ಸಮಜೀವ.ಬಸವಣ್ಣ ಅಂತರಂಗದ ಬೆಳಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಸವ ಕೇಂದ್ರದ ಮಲ್ಲಣ್ಣ ನಾಗರಾಳ ಮಾತನಾಡಿ, ಬಸವಣ್ಣನವರು ಹಾಗೂ ಅವರ ವಚನಗಳು ಕಾಲ ಕಾಲದ ಎಚ್ಚರಿಕೆಯ ಗಂಟೆಯಾಗಿದ್ದು, ವಚನಗಳನ್ನು ಪಚನ ಮಾಡಿಕೊಳ್ಳಬೇಕು ಎಂದರು.
ಬಸವರಾಜ ಅನ್ವರಕರ,ಎಂ.ಡಿ.ಮಠಪತಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿ ,ವಚನಗಳಲ್ಲಿ ವಿವೇಕವಿದ್ದು,ವಚನಗಳ ಅನುಸರಣೆ ಅಗತ್ಯ ಎಂದು ಹೇಳಿದರು.
ವೇದಿಕೆ ಮೇಲೆ ಟ್ರಸ್ಟ್ ಉಪಾಧ್ಯಕ್ಷ ವಿರೇಶ ದಂಡೋತಿ, ವಿರುಪಾಕ್ಷಿ ವಾಲಿ ಇದ್ದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ನಿರೂಪಿಸಿದರು.ಹಿರಿಯ ಸದಸ್ಯರಾದ ಭೀಮಾಶಂಕರ ಶೆಟ್ಟಿ,ಎಸ್.ಡಿ.ಸೇಡಂಕರ, ಬಂಡೆಪ್ಪ ಕೇಸೂರ, ನಾಗರಾಜ ಖೂಬಾ, ಬಸವರಾಜ ಪುರ್ಮಾ, ಮಲ್ಲಯ್ಯ ಸ್ವಾಮಿ ಬಿದಿಮನಿ, ಅನುರಾಧ ಕುಮಾರಸ್ವಾಮಿ, ಸುನಿಲ್ ಬಿಡಪ್, ಮಲ್ಲಿನಾಥ ಸಂಗಶೆಟ್ಟಿ ಗುರು ಮುಕ್ರಂಬಿ, ಸಿದ್ಧಲಿಂಗ ಗುಬ್ಬಿ, ವೀರಣ್ಣ ಹುಡುಗಿ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…