ಬಿಸಿ ಬಿಸಿ ಸುದ್ದಿ

ಮತ್ತೆ ಕಲ್ಯಾಣ ಅಭಿಯಾನ: ಕನ್ನಡದ ಧರ್ಮವನ್ನು ಕಟ್ಟಿದ ಬಸವಣ್ಣನವರು

ಶಹಾಪುರ: ವರ್ಗ ರಹಿತ, ವರ್ಣ ರಹಿತ ಸಮಾಜವನ್ನು ಕಟ್ಟಲು ಬಸವಣ್ಣನವರು ಕನ್ನದ ಧರ್ಮವನ್ನು ಕಟ್ಟಿದರು ಎಂದು ಸಾಹಿತಿ ಸಿದ್ಧರಾಮ ಹೊನ್ಕಲ್ ನುಡಿದರು.

ನಗರದ ಡಿ.ದೇವರಾಜು ಅರಸು ಪದವಿ ಪೂರ್ವ ಮಹಾವಿದ್ಯಾಲಯ ಏರ್ಪಡಿಸಿದ್ದ ಸಹಮತ ವೇದಿಕೆಯ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ವಿಚಾರಗಳಿಂದ ಅಧಿಕ ಸಹಾಯಿಗಳಿಲ್ಲ ಎಂಬ ಸಕಲೇಶ ಮಾದರಸ ಆಶಯದಂತೆ ನೂರಾರು ಜನ ಶರಣರು ಒಂದೆಡೆ ಸೇರಿ ಅನುಭವ ಮಂಟಪ ಎಂಬ ಸಂಸ್ಥೆಯನ್ನು ಕಟ್ಟಿದರು. ವಿಶ್ವವೇ ಮೆಚ್ಚುವಂತಹ, ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬಲ್ಲ ಶಕ್ತಿ ವಚನ ಸಾಹಿತ್ಯಕ್ಕೆ ಇದೆ. ಆಶೆಯೆಂಬುದು ಅರಸಿಂಗಲ್ಲದೆ ಶಿವಭಕ್ತಿರಿಗೆ ಉಂಟೆ ಅಯ್ಯಾ ? ಎಂದು ತನ್ನ ಗಂಡನನ್ನೆ ಪ್ರಶ್ನಿಸುವ ಮೂಲಕ ಆಯ್ದಕ್ಕಿ ಲಕ್ಕಮ್ಮ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾಳೆ. ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯ ! ಎಂಬ ವಚನದ ಮೂಲಕ ಬಸವಣ್ಣನವರು ದೇವಾಲಯಗಳಿಲ್ಲ ದೇಹವೇ ದೇಗುಲವಾಗುವ ಅವಕಾಶವನ್ನು ನಮಗೆಲ್ಲ ಒದಗಿಸಿಕೊಟ್ಟರು ಎಂದು ಮಾರ್ಮಿಕವಾಗಿ ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು , ದೇಹವನ್ನು ದೇವಾಲಯಗೊಳಿಸುವ ಮೂಲಕ ಅದುವರೆಗೆ ನಮ್ಮನ್ನೆಲ್ಲ ನಂಬಿಸಿಕೊಂಡು ಬಂದಿದ್ದ ಸ್ವರ್ಗ ತಂತಾನೆ ಬಿದ್ದು ಹೋಯಿತು. ಜೀವನ ಸತ್ಯ, ಬದುಕು ಸತ್ಯ, ನಾವು ಯಾರೂ ಕಾಣದೆ ಇರುವ ಸ್ವರ್ಗ ನರಕಗಳೆಲ್ಲ ಭ್ರಮೆ ಎಂಬುದು ಖಚಿತ ಪಡಿಸಿದರು ಎಂದು ವಿವರಿಸಿದರು.
ಅತಿಥಿಗಳಾಗಿ ಮಾತನಾಡಿದ ಬಸವಮಾರ್ಗ ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ , ವೇದ ಶಾಸ್ತ್ರ ಆಗಮಗಳ ಮೂಲಕ ನಮ್ಮ ಭಾರತೀಯ ಮನಸ್ಸುಗಳನ್ನು ಆಳಲ್ಪಟ್ಟಿದ್ದ ವೈದಿಕರ ಅಟಾಟೋಪವನ್ನು ಬಟಾಬಯಲು ಗೊಳಿಸಿದರು. ವೇದ ಆಗಮ ಶಾಸ್ತ್ರ ಪುರಾಣಗಳು ಅನೃತದ ನುಡಿಗಳು ಎಂಬ ಸತ್ಯವನ್ನು ಶರಣರು ಹಲವಾರು ನಿದರ್ಶನಗಳನ್ನು ಕೊಡುವ ಮೂಲಕ ಜನತೆಯನ್ನು ಎಚ್ಚರಿಸಿದರು.

ನಮ್ಮ ಉದ್ದಾರವನ್ನು ನಾವೇ ಮಾಡಿಕೊಳ್ಳಬೇಕು. ನಮ್ಮ ಬೆಳವಣಿಗೆ ಏಳ್ಗೆ ನಮ್ಮ ಕೈಯಲ್ಲಿಯೆ ಇದೆ. ಯಾರನ್ನೋ ನೆನೆಯುವ ಮೂಲಕ ಪೂಜಿಸುವ ಮೂಲಕ ಏನಾದರೂ ಪಡೆದುಕೊಳ್ಳುತ್ತೇನೆ ಎಂದು ಭಾವಿಸುವುದು ಹುಸಿ. ಹೆಣ್ಣು ಗಂಡು , ಬಡವ ಬಲ್ಲಿದ, ಮೇಲು ಕೀಳು ಎಂಬ ಭ್ರಮೆಯನ್ನು ಕಿತ್ತೊಗೆದ ಶರಣರು ಮನುಷ್ಯರೆಲ್ಲರೂ ಸಮಾನರು ಎಂಬುದನ್ನು ಹಲವಾರು ವಚನಗಳ ಮೂಲಕ ಸಭೆಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿ.ದೇವರಾಜು ಅರಸು ಪದವಿಪೂರ್ವ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ್ಯ ಭೀಮಣ್ಣ ಮೇಟಿ ಮಾತನಾಡಿ, ಮನುಷ್ಯನ ಅಹಂಕಾರ ಅಳಿಯಲು ವಚನ ಸಾಹಿತ್ಯ ಬಹಳ ಸಮರ್ಪಕ ಕೆಲಸ ಮಾಡುತ್ತದೆ. ಸತ್ಯ ಶುದ್ಧವಾದ ಕಾಯಕವನ್ನು ಮಾಡುತ್ತಿದ್ದರೆ ಯಾರಿಗೂ ಹೆದರುವ ಪ್ರಮೇಯವೆ ಬರುವುದಿಲ್ಲ. ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಶರಣರ ವಚನಗಳ ಆಶಯಗಳನ್ನು ಇಟ್ಟುಕೊಂಡು ನಡೆದರೆ ನಾವೆಲ್ಲ ಬಂಡೆಗಲ್ಲಿನಂತೆ ಗಟ್ಟಿಯಾಗಿ ನಿಲ್ಲಬಹುದು ಎಂದು ವಿವರಿಸಿದರು.
ಶಿವಣ್ಣ ಇಜೇರಿ ಮತ್ತೆ ಕಲ್ಯಾಣದ ಅವಶ್ಯಕತೆಯ ಕುರಿತು ಮಾರ್ಮಿಕವಾಗಿ ಹೇಳಿದರು.

ಸಭೆಯ ಆರಂಭದಲ್ಲಿ ಕು.ಸೌಮ್ಯ, ಕು.ತ್ರಿವೇಣಿ ವಚನ ಪ್ರಾರ್ಥನೆ ಮಾಡಿದರು. ರೆಹಮಾನ ಸರ್ ಸ್ವಾಗತಿಸಿದರು.ಅಯ್ಯಣ್ಣ ಖಾನಾಪುರ ವಂದಿಸಿದರು. ಚಂದ್ರಶೇಖರ ಕರ್ನಾಳ ಸಭೆಯನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಡಿ.ಡಿ.ಯು ಶಿಕ್ಷಣ ಸಂಸ್ಥೆಯ ಅಧ್ಯಾಪಕರು, ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago