ಬಿಸಿ ಬಿಸಿ ಸುದ್ದಿ

ಸಂಗೊಳ್ಳಿ ರಾಯಣ್ಣ ದೇಶಪ್ರೇಮಿಗಳಿಗೆ ಸ್ಪೂರ್ತಿ: ಜೆ.ಎಂ.ಕೊರಬು

ಅಫ್ಜಲಪುರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶ್ರೇಷ್ಟ ವೀರಯೋಧ. ಬ್ರೀಟಿಷ್ ರನ್ನು ದೇಶದಿಂದ ಓಡಿಸುವಲ್ಲಿ ಸಂಗೊಳ್ಳಿ ರಾಯಣ್ಣ ಅವರ ಕೊಡುಗೆ ಅಪಾರವಾಗಿದೆ ಎಂದು ನಿವ್ರತ್ತ ಕಾರ್ಯನಿರ್ವಾಹಕ ಅಭಿಯಂತರ ಜೆ.ಎಂ.ಕೊರಬು ಅಭಿಪ್ರಾಯಪಟ್ಟರು. ತಾಲೂಕಿನ ಬಳೂರ್ಗಿ ಗ್ರಾಮದ ಜಗದಂಬಾ ವಿದ್ಶಾವರ್ಧಕ ಸಂಘದ ಆವರಣದಲ್ಲಿ ಗುರುವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಶುತ್ಸವದ ಅಂಗವಾಗಿ 1001 ಸಸಿ ನೆಡುವ ಕಾರ್ಯಕ್ರಮ ಮತ್ತು ಕೆ.ಆರ್.ಐ.ಡಿ.ಎಲ್ ಎಇಇ ಜೆ.ಎಮ್. ಕೊರಬು ಅವರ ವಯೋನಿವ್ರತ್ತಿ ಹಾಗೂ ವೀರ ಯೋಧರಿಗೆ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಸಂಗೊಳ್ಳಿ ರಾಯಣ್ಣನವರು
ತನ್ನ ಜೀವನವನ್ನೇ ಪಣಕ್ಕಿಟ್ಟು ಬ್ರೀಟಿಷರ ವಿರುದ್ಧ ಹೋರಾಡಿದ್ದಾರೆ ಎಂದರು.

ಕೆಂಚಮ್ಮನ ಉದರದಲ್ಲಿ ಜನಿಸಿದ ರಾಯಣ್ಣ ದೇಶದ ಕೀರ್ತಿ ಹೆಚ್ಚಿಸಿದ ಮಹಾನ್ ದೇಶಪ್ರೇಮಿ. ಸಾಮಾನ್ಶ ಸೈನಿಕನಾಗಿದ್ದು ಬ್ರೀಟಿಷ್ ರ ಎದೆನಡುಗಿಸಿದ್ದ. ಕಪ್ಪಕಾಣಿಕೆ ಕೊಡುವದನ್ನು ಪ್ರತಿಭಟಿಸಿ ಬ್ರೀಟಿಷ್ ರನ್ನು ದೇಶಬಿಟ್ಟು ಓಡಿಸಲು ಕರೆ ನೀಡಿದ್ದು ರಾಯಣ್ಣ. ಇಡೀ ದೇಶ ಸಂಗೊಳ್ಳಿ ರಾಯಣ್ಣನವರ ಹುಟ್ಟು ಮತ್ತು ಸಾವು ನೆನೆಸಿಕೊಳ್ಳುತ್ತದೆ. ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ ರಾಯಣ್ಣನವರ ದೇಶಪ್ರೇಮಿಗಳಿಗೆ ಸ್ಪೂರ್ತಿ ಎಂದರು. ಅಲ್ಲದೆ ಸದ್ಶ ರಾಜ್ಯದಲ್ಲಿ ಪ್ರವಾಹದಿಂದ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅವರಿಗೆ ತಮ್ಮ ಕೈಲಾದಷ್ಟರ ಮಟ್ಟಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು.

ಶಾಸಕ ಎಂ.ವೈ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗೌರ್ (ಬಿ) ಗ್ರಾಮದ ಅಭಿನವ ಯಲ್ಲಾಲಿಂಗ ಮಹಾರಾಜರು ದಿವ್ಶ ಸಾನಿಧ್ಶ ವಹಿಸಿದ್ದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕಾಧ್ಶಕ್ಷ ಯಲ್ಲಾಲಿಂಗ ಕೆ. ಪೂಜಾರಿ ಅಧ್ಶಕ್ಷತೆ ವಹಿಸಿದ್ದರು. ಯುವ ಮುಖಂಡ ಬೀರಣ್ಣ ಆರ್. ಕಲ್ಲೂರ್ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಮಾಜಿ ಜಿಪಂ ಸದಸ್ಶ ಪ್ರಕಾಶ ಜಮಾದಾರ ಪೋಟೋ ಪೂಜೆ ನೆರವೇರಿಸಿದರು. ಬಳೂರ್ಗಿ ಗ್ರಾಪಂ ಅಧ್ಶಕ್ಷೆ ಕಸ್ತೂರಿಬಾಯಿ ದತ್ತು ಪೂಜಾರಿ ಜ್ಶೋತಿ ಬೆಳಗಿಸಿದರು. ಸಂಪನ್ಮೂಲ ವ್ಶಕ್ತಿಗಳಾಗಿ ವಕೀಲ ಕೆ.ಜಿ ಪೂಜಾರಿˌ ಅರಣ್ಶಾಧಿಕಾರಿ ಡಾ.ರಮೇಶ ಭಾಗವಹಿಸಿದ್ದರು.

ಮುಖ್ಶಅತಿಥಿಗಳಾಗಿ ಮಾಜಿ ಜಿಪಂ ಸದಸ್ಶರಾದ ಸಿದ್ದಾರ್ಥ ಬಸರಿಗಿಡˌ ಮತೀನ ಪಟೇಲˌ ಕಾಂಗ್ರೆಸ್ ಮುಖಂಡ ಪಪ್ಪು ಪಟೇಲˌ ಗುತ್ತಿಗೆದಾರ ದಯಾನಂದ ದೊಡ್ಮನಿˌ ದಸಂಸಮಿತಿಯ ಅಧ್ಯಕ್ಷ ಮಹಾಲಿಂಗ ಅಂಗಡಿˌ ವಕೀಲ ಪದ್ಮರಾಜ ಪೂಜಾರಿ ಭಾಗವಹಿಸಿದ್ಡರು. ಅತಿಥಿಗಳಾಗಿ ಫಲಾಸಿಂಗ್ ರಾಠೋಡˌ ಅರವಿಂದ ದೊಡ್ಮನಿˌ ಶ್ರೀಕಾಂತ ದಿವಾರಾಜˌ ಕುಪೇಂದ್ರ ಸಿಂಗೆ ಭಾಗವಹಿದ್ದರು. ಅಣ್ಣಾರಾಯ ಪಾಟೀಲ ನಿರುಪಿಸಿದರು. ತಾಲೂಕಿನ ಸಂಗೊಳ್ಳಿ ರಾಯಣ್ಣನವರ ಅಭಿಮಾನಿಗಳುˌ ಹಿತೈಸಿಗಳುˌ ಪ್ರಗತಿಪರರು ಹೆಚ್ಚಿನ ಸಂಖ್ಶೆಯಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago