ಬಿಸಿ ಬಿಸಿ ಸುದ್ದಿ

ಮೇ.2ರಂದು ಕಲಬುರಗಿಯಲ್ಲಿ ಮೋದಿ ರೋಡ್ ಶೋ: ಏ.30ಕ್ಕೆ ಯೋಗಿ ಆದಿತ್ಯ ನಾಥ್ ಕಲಬುರಗಿಗೆ

ಕಲಬುರಗಿ:ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ತುಂಬಿದ ಸಪ೯ದ ಜೊತೆಗೆ ಹೋಲಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಹಳೆ ಚಾಡಿಯನ್ನು ಮುಂದುವರೆಸಿದ್ದು, ಖಂಡಿತವಾಗಿಯೂ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮೂಲೆಗುಂಪು ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.

ಶುಕ್ರವಾರ ಬೆಳಿಗ್ಗೆ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸಪ೯ಕ್ಕೆ ಹೋಲಿಸಿದ್ದು,ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರಧಾನಿಯಾಗಿ ಚುನಾಯಿತರಾದ ಮೋದಿ ಅವರನ್ನು ಕಾಂಗ್ರೆಸ್ ಯಾವ ರೀತಿ ಕಾಣುತ್ತಿದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರಾದ ಖಗೆ೯ಯವರು ಹಿಂದೆಯೂ ಮೋದಿಯವರನ್ನು *ರಾವಣ್* ಎಂದು ಸಂಭೋಧಿಸಿದ್ದರು. ಸೋನಿಯಾ ಗಾಂಧಿ ಕೂಡ *ಮೌತ್ ಕಾ ಸೌದಾಗರ್* ಹಾಗೂ ರಾಹುಲ್ ಗಾಂಧಿ *ಚೋರ್* ಎಂದು ಹೇಳುವ ಮೂಲಕ ದೇಶದ ಪ್ರಧಾನಿಯನ್ನು ನಿಂಧಿಸಿ,ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದೀಗ ದೇಶದ ಪ್ರಧಾನಿ ಅವರನ್ನು ವಿಷ ತುಂಬಿದ ಸಪ೯ಕ್ಕೆ ಹೋಲಿಕೆ ಮಾಡಿದ್ದು,ಈ ಎಲ್ಲಾ ವಿಷಯಗಳನ್ನು ಇಡೀ ರಾಜ್ಯದ ಜನರ ಮುಂದೆ ಇಂದಿನಿಂದಲೇ ತೆಗೆದುಕೊಂಡು ಹೋಗುತ್ತೇವೆ.ಯಾರು ವಿಷ ಸಪ೯ ಇದ್ದಾರೆ ಎಂಬುದನ್ನು ಈ ಚುನಾವಣೆಯಲ್ಲಿ ತಾವುಗಳು ತೀಮಾ೯ನ ಮಾಡಬೇಕೆಂದು ಮನವಿ ಮಾಡುತ್ತೇವೆ.ರಾಜ್ಯದಲ್ಲಿ 61 ಲಕ್ಷ ಮನೆಗಳನ್ನು ಬಡವರಿಗೆ ನೀಡಿ,ಅಪ್ಪರ ಭದ್ರಾ ಯೋಜನೆಗೆ 5300 ಕೋಟಿ ಕೊಟ್ಟು,ಕಳಸಾ ಬಂಡೂರಿ ವಿಷಯದಲ್ಲಿ ಐತಿಹಾಸಿಕ ನಿಣ೯ಯವನ್ನು ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿಯ ಹೈವೇ ಯನ್ನು ಬಿಜೆಪಿ ಸಕಾ೯ರ ನಿಮಾ೯ಣ ಮಾಡುತ್ತಿದೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಧಮ೯ವನ್ನು ಒಡೆಯುವುದಕ್ಕೆ ಕೈ ಹಾಕಿದ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರೆನೂ ಸತ್ಯ ಹರಿಶ್ಚಂದ್ರರಾ ?ಎಂದು ಪ್ರಶ್ನಿಸಿದ ಅವರು,ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಾನ ಮಾನ ಗೌರವದ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ನಿಮಗೆ ಎಷ್ಟು ಶೋಭೆ ತರುತ್ತದೆ ಎಂದು ರವಿಕುಮಾರ್ ಪ್ರಶ್ನೆ ಮಾಡಿದರು.

ಮೇ.2ರಂದು 6 ಕಿ.ಮೀ. ಮೋದಿ ರೋಡ್ ಶೋ: ಮುಂಬರುವ ಮೇ.2ರಂದು ಕಲಬುರಗಿ ನಗರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ 6 ಕೀ.ಮೀ.ಕಲರ್ ಪುಲ್ ರೋಡ್ ಶೋ ಹಮ್ಮಿಕೊಳ್ಳಲಾಗಿದ್ದು,ನಗರದ ಕೆ.ಎಂ.ಎಫ್.ರಸ್ತೆಯಿಂದ ಕಲಬುರಗಿ ನಗರದ ಬಸ್ ನಿಲ್ದಾಣದ ವರೆಗೆ ರೋಡ್ ಶೋ ಆಯೋಜನೆ ಮಾಡಲಾಗಿದೆ. ಈ ರೋಡ್ ಶೋ, ನೋಡಲು ಕಲಬುರಗಿ ಜಿಲ್ಲೆಯ ಉತ್ತರ,ದಕ್ಷಿಣ ಹಾಗೂ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಅತೀ ಜನರು ಆಗಮಿಸಲಿದ್ದು,ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರದ ಜನರು ಕೂಡ ಬರಲಿದ್ದಾರೆ ಎಂದು ಹೇಳಿದರು.

ಏ.30 ರಂದು ಯೋಗಿ ಆದಿತ್ಯ ನಾಥ್ ಕಲಬುರಗಿಗೆ:ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಆಗಮಿಸಲಿದ್ದು, ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರ ಹಾಗೂ ಚಿತ್ತಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಸಾವ೯ಜನಿಕ ಸಭೆಯಲ್ಲಿ ಭಾಗವಹಿ‌ಸಲಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಹುಸಿ ಭರವಸೆಗಳನ್ನು ಜನರು ನಂಬಲು ಹೋಗುವುದಿಲ್ಲ. ಸುಳ್ಳು ಭರವಸೆ ನೀಡುತ್ತಿರುವ ಕಾಂಗ್ರೆಸ್ ಎಲ್ಲವನ್ನೂ ಹೇಗೆ ಉಚಿತವಾಗಿ ನೀಡುತ್ತಿರಾ ಎಂಬುದರ ಬಗ್ಗೆ ಚಚೆ೯ಗೆ ಬನ್ನಿ. ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು,ಡಬಲ್ ಇಂಜಿನ್ ಸಕಾ೯ರದಿಂದ ರಾಜ್ಯದಲ್ಲಿ ಅಭಿವೃದ್ಧಿ ಹೈವೇ ನಿಮಾ೯ಣವಾಗಲಿದೆ.

ಸುದ್ದಿಗೋಷ್ಠಿಯಲ್ಲಿ ವೆಂಕಟಪ್ರಸಾದ್ ಮಾಲೇಪಾಟಿ, ನಾಗರಾಜ್ ಮಹಾಗಾಂವಕರ್, ಬಾಬುರಾವ್ ಹಾಗರಗುಂಡಗಿ, ಸಂತೋಷ್ ಹಾದಿಮನಿ ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago