ಗ್ರಾಮದ ಜನತೆ ದಿ/ನಡ್ಜ್ ಸಂಸ್ಥೆಯ ಲಾಭ ಪಡೆದುಕೊಳ್ಳಿ ಡಾ. ಸಂಜಯ್ ರೆಡ್ಡಿಅವರ

ಆಳಂದ: ಇಂದು ಆಳಂದ ತಾಲೂಕಿನ ಹೀರೋಳಿ ಗ್ರಾಮದಲ್ಲಿ ದಿ/ನಡ್ಜ್ ಸಂಸ್ಥೆ ಹಾಗೂ ಪಶುಸಂಗೋಪನ ಇಲಾಖೆ ಸಹಯೋಗದೊಂದಿಗೆ 23 ಅತಿ ಕಡು ಬಡತನದಿಂದ ಕೂಡಿರುವ ಕುಟುಂಬಗಳ 36ಆಡುಗಳಿಗೆ ಡಿ ವರ್ಮಿಂಗ್ ಹಾಗೂ ವ್ಯಾಕ್ಸಿನೇಷನ್ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ತಾಲೂಕಿನ ಸಹಾಯಕ ನಿರ್ದೇಶಕರವರ ಆದೇಶದ ಮೇರೆಗೆ ಕಿರಿಯ ಪಶು ವೈದ್ಯಕೀಯ ಪರೀಕ್ಷಕರಾದ್ ಮಾಹಾದೇವ.ಜೀ. ಮಂಠಾಳ ನವರು ಚಾಲನೆ ಕೊಟ್ಟು ಮಾತನಾಡಿದರು. ಅವರು ತಮ್ಮ ಮಾತುಗಳಲ್ಲಿ ಆಡುಗಳಿಗೆ ಕಾಲಕ್ಕೆ ತಕ್ಕಂತೆ ವ್ಯಾಕ್ಸಿನೇಷನ್ ಮಾಡಿಸಬೇಕು, ಅವುಗಳಿಗೆ ಉತ್ತಮವಾದ ಆಹಾರ ನೀಡಬೇಕು. ಆಡುಗಳಿಗೆ ರೋಗ ಬರದಂತೆ ಎಚ್ಚರ ವಹಿಸಬೇಕು, ಸರಿಯಾಗಿ ನೋಡಿಕೊಂಡರೆ ಉತ್ತಮವಾದ ಲಾಭ ಕೊಡಲಿವೆ ಎಂದರು. ದಿ/ನಡ್ಜ್ ಸಂಸ್ಥೆಯು ಕಡು ಬಡತನ ನಿರ್ಮೂಲನೆ ಕಾರ್ಯಕ್ರಮದಲ್ಲಿ ಮಟಕಿ ಗ್ರಾಮದ ಒಟ್ಟು 22 ಕುಟುಂಬಗಳಿಗೆ 36ಆಡುಗಳು ನೀಡಿದ್ದು, ಅವುಗಳ ಲಾಭ ಗ್ರಾಮದ ಜನತೆ ಪಡೆಯಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಿ/ನಡ್ಜ್ ಸಂಸ್ಥೆಯ ಕರ್ನಾಟಕದ ಆಪರೇಷನ್ ಮ್ಯಾನೇಜರ್ ವಿಶ್ವನಾಥ ಎಂ.ಕೆ. ನಡ್ಜ್ ಸಂಸ್ಥೆಯು ತನ್ನ ಗ್ರಾಮೀಣ ಅಭಿವೃದ್ಧಿಯ ಕೇಂದ್ರದ ಭೂರಹಿತ, ಸಣ್ಣ ಮತ್ತು ಅತಿ ಕಡಿಮೆ ಕೃಷಿಕ ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯವನ್ನು ನಿರ್ಮಿಸಲು ಸಹಾಯ ಮಾಡುವ ಮೂಲಕ ಅತ್ಯಂತ ಬಡತನದಲ್ಲಿ ವಾಸಿಸುತ್ತಿರುವ ಕುಟುಂಬಗಳೊಂದಿಗೆ ಕೆಲಸ ಮಾಡುತ್ತಿದೆ. ಭೂರಹಿತ, ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ಸುಧಾರಿಸುವುದು ಗ್ರಾಮೀಣ ಜೀವನೋಪಾಯದಲ್ಲಿ ಮಹಿಳೆಯರ ಏಜೆನ್ಸಿಯನ್ನು ನಿರ್ಮಿಸಿ ಕಡುಬಡವರಿಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುತ್ತಿದೆ.

ಕಳೆದ 3 ವರ್ಷಗಳಿಂದ, 81 ಸಾವಿರಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳ ಜೊತೆಗೆ ಬಡತನ ನಿರ್ಮಲನೆಗೆ ಕೆಲಸ ಮಾಡುತ್ತಿದೆ. ಪ್ರಸ್ತುತ ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿ ಆಳಂದ ಮತ್ತು ಔರಾದ ತಾಲೂಕಿನಲ್ಲಿ ಒಟ್ಟು 710 ಮಹಿಳಾ ಪ್ರಧಾನ ಕುಟುಂಬಗಳ ಕಡುಬಡತನ ನಿರ್ಮೂಲನಾ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕುಟುಂಬದ ಮಹಿಳೆಯರಿಗೆ ಕುರಿ ಸಾಕಾಣಿಕೆ ಮತ್ತು ಸಣ್ಣ ವ್ಯಾಪಾರಕ್ಕೆ ಸಹಕಾರಿ ಮಾಡಿ ಅವರು ಅದರ ಮೂಲಕ ತಮ್ಮ ಬಡತನ ನಿರ್ಮೂಲೆನೆಗೆ ದಾರಿಮಾಡಿಕೊಡಲಾಗುತ್ತಿದೆ. ಇದಲ್ಲದೇ ಸರಕಾರದ ಸಹಕಾರದ ತತ್ವದಡಿಯಲ್ಲಿ ಅನೇಕ ಯೋಜನೆಳಿಗೆ ಸಂಯೋಜಿಸಿ ಉತ್ತಮ ಮತ್ತು ಸ್ವಾಭಿಮಾನದ ಬದುಕಿಗೆ ದಾರಿ ಮಾಡಿಕೊಡಲಾಗುತ್ತಿದೆ ಇದರ ಲಾಭವನ್ನು ಆಯ್ಕೆಯಾದ ಗ್ರಾಮಗಳು ಚೆನ್ನಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಕಲಬುರಗಿ ತಂಡದ ಹಿರಿಯ ಮುಖ್ಯಸ್ಥರಾದ ನಾಗರಾಜ್ ಹೆಂಬಾಡಿ ಮಾತನಾಡಿ ನಮ್ಮ ಸಂಸ್ಥೆಯು ಕೈಗೊಂಡಿರುವ ಪ್ಯಾಟ್ ಸರ್ವೆಯ ಪ್ರಕಾರ ಕುಟುಂಬಗಳ ಆಯ್ಕೆ ಮಾಡಿದ್ದು, ಮೊದಲನೇ ಜೀವನೋಪಾಯ ಕುರಿಸಾಗಾಣಿಕೆ ಹಾಗೂ ಎರಡನೇ ಜೀವನೋಪಾಯ ಸಣ್ಣ ವ್ಯಾಪರವನ್ನು ಆಯ್ಕೆಯಾದ ಕಡುಬಡ ಕುಟುಂಬಗಳಿಗೆ ನೀಡಿ ಅವರ ಆದಾಯದ ಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮವು ಇನ್ನಷ್ಟು ವಿಸ್ತರಿಸಿ, ಸರಕಾರದೊಂದಿಗೆ ಸಂಯೋಜಿಸಿ ಕೆಲಸ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜೀವನೋಪಾಯ ತರಬೇತುದಾರರಾದ ಲಕ್ಷ್ಮಿ ಕುಂಬಾರ್, ಸಮುದಾಯ ಅಭಿವೃದ್ಧಿ ಅಧಿಕಾರಿಗಳಾದ ಸೋಮನಾಥ್ ದಿಗಂಬರ,ಖಜಾಪ್ಪಾ,ಶಾಂತಪ್ಪ, , ಗ್ರಾಮದ ದಯಾನಂದ್, ಶಿವರಾಯ ಹಾಗೂ ಫಲಾನುಭವಿ ಮಹಿಳೆಯರು (ಅಕ್ಕಂದಿರು) ಹಾಗೂ ಗ್ರಾಮದ ಮುಖಂಡರು ಹಿರಿಯರು ಪಂಚಾಯತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

52 mins ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

3 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

3 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

3 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

3 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

3 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420