ಬಿಸಿ ಬಿಸಿ ಸುದ್ದಿ

1 ರಂದು ನವಕಲ್ಯಾಣ ಕಟ್ಟಡ ಕಾರ್ಮಿಕರ ಸಂಘದಿಂದ ವಿಶ್ವ ಕಾರ್ಮಿಕ ದಿನಾಚರಣೆ

ಕಲಬುರಗಿ,: ನವಕಲ್ಯಾಣ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮೇ 01 ರಂದು ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಭೀಮರಾಯ ಎಂ. ಕಂದಳ್ಳಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಮಹಾನಗರ ಪಾಲಿಕೆಯ ಪಕ್ಕದ ಸಾರ್ವಜನಿಕ ಉದ್ಯಾನವನದಲ್ಲಿ  ಮುಂಜಾನೆ 1 ಗಂಟೆಗೆ ಕಲಬುರಗಿ ಮಹಾನಗರದಲ್ಲಿ ಕಟ್ಟಡ ಕಾರ್ಮಿಕರಿಗೆ ಸಂಬಂಧಿಸಿದಂತಹ ಆಯಾ ಕ್ಷೇತ್ರದ ಸುಮಾರು ಐವತ್ತು ಸಾವಿರ ಜನ ಕಾರ್ಮಿಕರು ಇತರೆ ಕ್ಷೇತ್ರದ ಸುಮಾರು 25,000 ಕಾರ್ಮಿಕರು ದುಡಿಯುತ್ತಿದ್ದಾರೆ ಎಂದು ಮಾಹಿತಿ ನೀಡಿದ ಅವರು ಮೇ-1 ಕಾರ್ಮಿಕರಿಗೆ ಹಬ್ಬದ ಪ್ರತೀಕವಾಗಿ ಕಾರ್ಮಿಕ ಕ್ಷೇತ್ರದ ಎಲ್ಲಾ ವರ್ಗದ ಕಾರ್ಮಿಕರು ಈ ಹಬ್ಬವನ್ನು ಆಚರಿಸಲು ಒಂದು ದಿನ ಕೆಲಸ ಕಡ್ಡಾಯವಾಗಿ ಸ್ಥಗಿತಗೊಳಿಸಿ (ಬಂದ್ ಮಾಡಿ) ಈ ಮಹತ್ವದ ದಿನಾಚರಣೆಯಲ್ಲಿ ಭಾಗವಹಿಸುವುದು ಅತಿ ಮಹತ್ವವಾಗಿದೆ ಎಂದು ತಿಳಿಸಿದರು.

ಸರಕಾರಿ ವಲಯ ಈ ದಿನಾಚರಣೆಗೆ ರಜೆ ನೀಡುವ ಮೂಲಕ ಗೌರವಿಸುತ್ತಿದೆ. ಆದರೆ, ಖಾಸಗಿ ಕ್ಷೇತ್ರ ಈ ದಿನಾಚರಣೆಗೆ ದುಡಿಯುವ ವರ್ಗಕ್ಕೆ ಸಂಬಳ ಸಹಿತ ರಜೆ ನೀಡದೇ ಇರುವದು ಖಂಡನೀಯ ವಾಗಿದೆ ಮತ್ತು ಇದು ದುಡಿಯುವ ವರ್ಗಕ್ಕೆ ಅಪಮಾನ ಮಾಡಿದಂತಾಗುತ್ತದೆ. ಖಾಸಗಿ ವಲಯದ ವಾಣಿಜ್ಯೋದ್ಯಮಿಗಳಿಗೆ, ವ್ಯಾಪಾರಿಗಳಿಗೆ, ಗುತ್ತಿಗೆದಾರರಿಗೆ, ವರ್ತಕರಿಗೆ ವಿನಂತಿಸಿಕೊಳ್ಳುವದೇನೆಂದರೆ 1 ರಂದು ಅಧೀನದಲ್ಲಿ ದುಡಿಯುವ ಕೆಲಸಗಾರರಿಗೆ ಸಂಬಳ ಸಹಿತವಾಗಿ ರಜೆ ನೀಡಿ ದುಡಿಯುವ ವರ್ಗಕ್ಕೆ ಮತ್ತು ಕಾರ್ಮಿಕ ದಿನಾಚರಣೆಗೆ ಗೌರವ ಕೊಡಬೇಕೆಂದು ಈ ಮೂಲಕ ಮನವರಿಕೆ ಮಾಡಿಕೊಡಲಾಗುತ್ತದೆ.
ಕಟ್ಟಡ ಕಾರ್ಮಿಕರಿಗೆ ಸರಕಾರ ಸಹಸ್ರಾರು ಕೋಟಿ ಯೋಜನೆಗಳು ರೂಪಿಸಿ ಹಣ ಮಂಜೂರು ಮಾಡಿದರೂ ಸಹ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಇವುಗಳ ಸಮರ್ಪಕ ಅನುಷ್ಠಾನವಾಗದೆ, ಇದರ ಫಲ ಕಾರ್ಮಿಕರಿಗೆ ತಲುಪದೇ ಇರುವುದು ಖೇದಕರವಾಗಿದೆ ಎಂದು ತಿಳಿಸಿದರು.

ದುಡಿಯುವ ವರ್ಗಕ್ಕೆ ಗೌರವ ಸೂಚಿಸುವುದರ ಜೊತೆಗೆ ಸಮಸ್ತ ಕಾರ್ಮಿಕರ ಸಂಘಟನೆಯ ಶಕ್ತಿ ತೋರಿಸುವ ಮುಖಾಂತರ ಈ ದಿನಾಚರಣೆಯನ್ನು ಹಬ್ಬದ ರೂಪದಲ್ಲಿ ಆಚರಿಸುತ್ತೇವೆ. ಅಷ್ಟೇ ಅಲ್ಲದೇ, ಉತ್ಪಾದನಾ ವಲಯದಲ್ಲಿ ಮತ್ತು ಅಭಿವೃದ್ಧಿಯಲ್ಲಿ ಕಾರ್ಮಿಕರ ಹಕ್ಕಿನ ಜಾಗೃತಿ ಮೂಡಿಸುವುದು, ಕಾರ್ಮಿಕರ ಕಲ್ಯಾಣಕ್ಕಾಗಿ ಇರುವ ಯೋಜನೆಗಳ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸುವ ಕಾರ್ಯವೂ ಸಹ ಈ ಸಂದರ್ಭದಲ್ಲಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಮಿಕ ದಿನಾಚರಣೆಗೆ ಉದ್ಘಾಟಕರಾಗಿ ಲಿಂಗರಾಜ ಅಪ್ಪರವರು ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ, ಹಿರಿಯ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ರಾಮಕೃಷ್ಣ ಬಡಶೇಶಿ, ಕುಮಾರ ಬುರಡಕಟ್ಟಿ, ಪ್ರಭುಲಿಂಗ ನೀಲೂರೆ, ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ರಮೇಶ ಕುಂಬಾರ, ರವೀಂದ್ರಕುಮಾರ ಬಲ್ಲೂರ ಸೇರಿದಂತೆ ಕಟ್ಟಡ ಕರ್ಮಿಕ ಸಂಘಟನೆಯಶಹಾಪೂರ ಮುಖಂಡರಾದ, ಪ್ರದೀಪ ಅಣದಿ, ಇಂಜಿನಿಯರ ಅಸೋಸಿಯೇಷನ್ ಅಧ್ಯಕ್ಷರಾದ ಮುರುಳಿಧರ ಜಿ. ಕರಳಿಕರ್, ಅನೀಲಕುಮಾರ ಮೆಂಗಾಣಿ ಸೇರಿದಂತೆ ಆಯಾ ಕ್ಶೇತ್ರದ ಅನೇಕ ಗಣ್ಯರು, ಬುದ್ಧಿ ಜೀವಿಗಳು, ಚಿಂತಕರು, ಕಾರ್ಮಿಕ ಮುಖಂಡರು, ಹೋರಾಟಗಾರರು ಭಾಗವಹಿಸಲಿದ್ದಾರೆ.

2023ನೇ ಮೇ ಕಾರ್ಮಿಕರ ದಿನಾಚರಣೆ ಪ್ರಸ್ತುತ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಬಂದಿರುವುದರಿಂದ ಸಹಜವಾಗಿ ನಮ್ಮ ಈ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಲಬುರಗಿ ಸೇರಿದಂತೆ, ಕಲ್ಯಾಣ ಕರ್ನಾಟಕದ ಲಕ್ಷಾಂತರ ಕಾರ್ಮಿಕರಿಗೆ ತಮ್ಮ ಒಂದೊಂದು ಮತದಾನದ ಶಕ್ತಿಯನ್ನು ಕಡ್ಡಾಯವಾಗಿ ಚಲಾಯಿಸುವುದರ ಬಗ್ಗೆಯೂ ಕೂಡ ಅರಿವು ಮೂಡಿಸಲಾಗುವುದು. ಪಕ್ಷಾತೀತವಾಗಿ, ಧರ್ಮಾತೀತವಾಗಿ, ಜಾತ್ಯಾತೀತವಾಗಿ, ವರ್ಗಾತೀತವಾಗಿ ಶುದ್ಧ ರಾಜಕಿಯೇತರ ತಳಹದಿಯ ಮೇಲೆ ಜರುಗುವ ಈ ಬೃಹತ್ ಕಾರ್ಮಿಕ ದಿನಾಚರಣೆಗೆ ಕಟ್ಟಡ ಕಾರ್ಮಿಕ ಕ್ಷೇತ್ರದ ಎಲ್ಲಾ ಕಾರ್ಮಿಕರು, ಬೇರೆ ಬೇರೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಮಿಕರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಅಂದು ಮುಂಜಾನೆ 11.00 ಗಂಟೆಯ ಒಳಗೆ ಪಬ್ಲಿಕ್ ಗಾರ್ಡನ್ ಆವರಣದಲ್ಲಿ ಸೇರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಭಿಮಾನದ ಪ್ರತೀಕವಾದ ಕಾರ್ಮಿಕ ದಿನಾಚರಣೆ ಯಶಸ್ವಿಗೊಳಿಸಲು ಸಂಘದ ಮುಖಂಡರು ತೋರಿದ್ದಾರೆ.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

8 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

8 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

10 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

10 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

10 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

10 hours ago