ಕಲಬುರಗಿ: 1011 ಹಿರಿಯ ಜೀವಿಗಳು ಮತ್ತು ವಿಶೇಷಚೇತನರಿಂದ ಮತದಾನ

ಕಲಬುರಗಿ: ಶನಿವಾರ ಜಿಲ್ಲೆಯಾದ್ಯಂತ 80 ವರ್ಷ ಮೇಲ್ಪಟ್ಟ 835 ಮತ್ತು 176 ವಿಶೇಷಚೇತನರು ಸೇರಿ ಒಟ್ಟು 1011 ಮತದಾರರು ಮನೆಯಿಂದಲೆ ಅಂಚೆ ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಹೇಳಿದ್ದಾರೆ.

ಮತದಾನ ಪ್ರಮಾಣ ಹೆಚ್ಚಿಸಬೇಕು ಮತ್ತು ಪ್ರಜಾಪ್ರಭುತ್ವ ಹಬ್ಬದಲ್ಲಿ ಸರ್ವರು ಭಾಗಿಯಾಗಬೇಕು ಎಂಬ ಪರಿಕಲ್ಪನೆಯಿಂದ ಚುನಾವಣಾ ಆಯೋಗವು ಈ ಬಾರಿ 80 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನ ಮತದಾರರು ಇಚ್ಚಿಸಿದಲ್ಲಿ ಮನೆಯಿಂದ ಅಂಚೆ ಮತ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇಂದಿನಿಂದ ಅಂಚೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನವೇ ವೃದ್ಧರು ಮತ್ತು ವಿಶೇಷಚೇತನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ಕ್ಷೇತ್ರವಾರು ಮತದಾನದ ವಿವರ: ಆಳಂದನಲ್ಲಿ 80 ವರ್ಷ ಮೇಲ್ಪಟ್ಟ 17 ಮತ್ತು 11 ಜನ ವಿಶೇಷಚೇತನರು ಮತ ಚಲಾಯಿಸಿದರು. ಅದೇ ರೀತಿ ಚಿಂಚೋಳಿಯಲ್ಲಿ 80 ವರ್ಷ ಮೇಲ್ಪಟ್ಟ ಮತ್ತು ವಿಶೇಷಚೇತನರು ಕ್ರಮವಾಗಿ 151 ಮತ್ತು 26, ಚಿತ್ತಾಪುರದಲ್ಲಿ 7 ಮತ್ತು 6, ಗುಲಬರ್ಗಾ ಗ್ರಾಮೀಣದಲ್ಲಿ 106 ಮತ್ತು 26, ಗುಲಬರ್ಗಾ ಉತ್ತರದಲ್ಲಿ 61 ಮತ್ತು 7, ಜೇವರ್ಗಿಯಲ್ಲಿ 118 ಮತ್ತು 42, ಅಫಜಲಪೂರನಲ್ಲಿ 174 ಮತ್ತು 28 ಸೇಡಂನಲ್ಲಿ 147 ಮತ್ತು 23 ಹಾಗೂ ಗುಲಬರ್ಗಾ ದಕ್ಷಿಣದಲ್ಲಿ 54 ಮತ್ತು 7 ಜನ ಮತ ಚಲಾಯಿಸಿದರು.

ಮನೆಯಲ್ಲಿಯೇ ಮತದಾನಕ್ಕೆ ಅವಕಾಶ, ಒಳ್ಳೆದಾಯಿತು.ಅಫಜಲಪೂರ ಕ್ಷೇತ್ರದ ಕೋಗನೂರ ಗ್ರಾಮದ ಸಿದ್ದಪ್ಪ ತಮಗೆ ನಡೆಯಲು ಕಷ್ಟವಾಗುತ್ತದೆ. ಮತದಾನ ದಿನದಂದು ₹ 100 ಕೊಟ್ಟು ಮತದಾನಕ್ಕೆ ತೆರಳಬೇಕಿತ್ತು. ಮನೆಯಿಂದಲೆ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ತುಂಬಾ ಉಪಕಾರಿಯಾಗಿದೆ ಎಂದು ಸಂತಸದ ನುಡಿಗಳನ್ನಾಡಿದರು.

ಇನ್ನು ಇದೇ ಕ್ಷೇತ್ರದ ನೀಲೂರ ಗ್ರಾಮದ ವಯೋವೃದ್ಧೆ ಬಬಲಾಬಾಯಿ ಮತದಾನದ ನಂತರ ಮಾತನಾಡಿ, ತನಗೆ ಕಾಲು ಬೇನೆ ಇದ್ದು, ಮಗಟ್ಟೆಗೆ ಹೋಗಕ್ಕೆ ಆಗ್ತಿರಲಿಲ್ಲ. ಮನೆಯಲ್ಲೆ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು ಅನುಕೂಲವಾಗಿದೆ ಎಂದರು.

ಕಲಬುರಗಿ ಜಿಲ್ಲೆಯಾದ್ಯಂತ 80 ವರ್ಷ ಮೇಲ್ಪಟ್ಟ 42,000 ಜನ ಮತದಾರರಿದ್ದು, ಇದರಲ್ಲಿ 1,387 ಜನ ಮತ್ತು 4,000 ವಿಶೇಷಚೇತನರ ಪೈಕಿ 274 ಜನ ಮನೆಯಿಂದಲೆ ಮತದಾನ ಮಾಡುವುದಾಗಿ ತಿಳಿಸಿದ್ದರಿಂದ ಇಂದು ಬೆಳಿಗ್ಗೆಯೆ ಮತಗಟ್ಟೆ ಅಧಿಕಾರಿಗಳು, ಮೈಕ್ರೋ ವೀಕ್ಷಕರು, ವಿಡಿಯೋಗ್ರಾಪರ್, ಪೆÇಲೀಸ್ ಒಳಗೊಂಡ ಒಟ್ಟು 69 ತಂಡಗಳು 9 ವಿಧಾನಸಭಾ ಕ್ಷೇತ್ರದಲ್ಲಿ 80+ ಮತ್ತು ವಿಶೇಷಚೇತನ ಮತದಾರರ ಮನೆಯತ್ತ ಹೆಜ್ಜೆ ಹಾಕಿ, ಮನೆಯಲ್ಲಿಯೆ ಒಂದು ಕಂಪಾರ್ಟ್ ಮೆಂಟ್ ಮಾಡಿ ಮತದಾರರಿಂದ ಅಂಚೆಮತದಾನ ಮಾಡಿಸಿದರು. ಮತದಾನದ ರಹಸ್ಯವು ಕಾಪಾಡಲಾಯಿತು.

emedialine

Recent Posts

ಕಬ್ಬು ಬೆಳೆಗಾರರ ರಾಜ್ಯ ಸಮ್ಮೇಳನದ ಕರಪತ್ರ ಬಿಡುಗಡೆ

ಶಹಾಬಾದ:ಕಲಬುರಗಿಯಲ್ಲಿ ಸೆಪ್ಟೆಂಬರ್ 29 ಹಾಗೂ 30ರಂದು ನಡೆಯುವ ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರೀಯ ಸಮಿತಿ ಸಭೆ ಹಾಗೂ…

51 mins ago

ಕಾರ್ಮಿಕರು ರಾಜಕೀಯ ಸ್ಥಾನಮಾನ ಪಡೆದರೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ: ನೀಲಾ

ಕಟ್ಟಡ ಕಾರ್ಮಿಕರ 2ನೇ ಶಾಖಾ ಸಮ್ಮೇಳನ : ಕಾಪೆರ್Çರೇಟ್ ಕಂಪೆನಿಗಳಿಗೆ ಧಾರೆ ಎರೆದ ದೇಶದ ಸಂಪತ್ತು ಶಹಾಬಾದ: ರಾಜಕೀಯ ಪಕ್ಷಗಳು…

54 mins ago

ವಿಕಲಚೇತರಿಗೆ ಅನುಕಂಪ ಬೇಡ ಮನುಷ್ಯರಂತೆ ಕಾಣಿ: ಡಾ.ಗವಿಸಿದ್ಧಪ್ಪ ಪಾಟೀಲ

ಬಸವಕಲ್ಯಾಣ: ವಿಕಲಚೇತನರು ತಮ್ಮ ಅಂಗವಿಕಲತೆ ಬಗ್ಗೆ ಅಗೌರವ ತಾಳಲಾರದೇ,ಅನುಕಂಪ ತೋರಿಸದೇ ಸ್ವ ಪ್ರತಿಭೆ ಹೊಂದಿದ ಅವರಿಗೆ ಮೂಲಭೂತ ಸೌಲಭ್ಯ ಗಳನ್ನು…

11 hours ago

ಸತ್ಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ

ಕಲಬುರಗಿ: ಸ್ಥಾಪಿತ ಸಿದ್ಧಾಂತ ಹೊಡೆದು ಹಾಕಿ ಅವೈದಿಕ ವಚನ ಸಾಹಿತ್ಯವನ್ನು ಜನಮಾನಸಕ್ಕೆ ಮುಟ್ಟಿಸಿದ ಡಾ.‌ಎಂ.ಎಂ.‌ಕಲಬುರ್ಗಿ ಯವರು ಸತ್ಯದ ಸಂಶೋಧಕರಾಗಿದ್ದರು ಎಂದು…

12 hours ago

ಮಕ್ಕಳೊಂದಿಗೆ ಹುಟ್ಟ ಹುಬ್ಬ ಆಚರಿಸಿಕೊಂಡ ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗುರುವಾರ ಸಂಜೆ ತಮ್ಮ ಹುಟ್ಟು ಹಬ್ಬವನ್ನು ಕಲಬುರಗಿ ನಗರದ ಆಳಂದ ನಾಕಾ ರಸ್ತೆಯಲ್ಲಿರುವ…

13 hours ago

ಚಿಂಚೋಳಿ ಗ್ರಾಮ ಅಡಳಿತಾಧಿಕಾರಿಗೆ ಡಿ.ಸಿ. ಪ್ರಶಂಸನಾ ಪತ್ರ; ಪಹಣಿಗೆ ಆಧಾರ್ ಜೋಡಣೆಯಲ್ಲಿ ಸಾಧನೆ

ಕಲಬುರಗಿ; ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಪಹಣಿಗೆ ಆಧಾರ್ ಜೋಡಣೆ ಮತ್ತು ಸರ್ಕಾರಿ ಜಮೀನುಗಳ ಸಂರಕ್ಷಣೆಯ ಲ್ಯಾಂಡ್ ಬೀಟ್ ಅಪ್ಲಿಕೇಶನ್ ನಲ್ಲಿ…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420