ಶಹಾಬಾದ: ತಮ್ಮೆಲ್ಲರ ಆಶೀರ್ವಾದದಿಂದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ನಂತರ ಐದು ವರ್ಷದ ಅವಧಿಯಲ್ಲಿ ಜನರಿಗೆ ಒಳ್ಳೆಯ ರೀತಿ ಸ್ಪಂದಿಸಿದ್ದೆನೆ.ಅಲ್ಲದೇ ಗ್ರಾಮದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೆನೆ.ಮಾಡಿರುವ ಕೆಲಸ ನೋಡಿ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಮತ್ತಿಮಡು ಮನವಿ ಮಾಡಿದರು.
ಅವರು ರವಿವಾರ ಚುನಾವಣೆಯ ನಿಮಿತ್ತ ತಾಲೂಕಿನ ಗೋಳಾ(ಕೆ), ತೊನಸನಹಳ್ಳಿ(ಎಸ್) ಹಾಗೂ ತರನಳ್ಳಿ ಗ್ರಾಮದ ಮನೆಮನೆಗೆ ಕಾರ್ಯಕರ್ತರೊಂದಿಗೆ ತೆರಳಿ ಮತದಾರರಲ್ಲಿ ಮತಯಾಚಿಸಿದರು.
ತೊನಸನಹಳ್ಳಿ(ಎಸ್) ಹಾಗೂ ತರನಳ್ಳಿ ಗ್ರಾಮದಲ್ಲಿ ಕೋಟಿಗಟ್ಟಲೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ತೊನಸನಹಳ್ಳಿ (ಎಸ್) ಗ್ರಾಮದ ಜನರಿಗೆ ಹಲವು ದಶಕಗಳಿಂದ ಕುಡಿಯುವ ನೀರಿನ ತಲೆದೋರಿತ್ತು.ಗ್ರಾಮಕ್ಕೆ ಹೆಣ್ಣು ಕೊಡಲು ಮುಂದಾಗುತ್ತಿರಲಿಲ್ಲ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು.ಆ ಬೇಡಿಕೆಯನ್ನು ನನ್ನ ಅವಧಿಯಲ್ಲಿ ಬಗೆಹರಿಸಿದ್ದೆನೆ. ಅಲ್ಲದೇ ಮನೆಮನೆಗೆ ನಳದ ವ್ಯವಸ್ಥೆ,ರಸ್ತೆ , ಶಾಲಾ ಕೋಣೆ ಸೇರಿದಂತೆ ಅನೇಕ ಕಾಮಗಾರಿಗಳನ್ನು ಮಾಡಿದ್ದೆನೆ.ನಿಮ್ಮ ಬೇಡಿಕೆಗೆತಕ್ಕಂತೆ ಎಲ್ಲಾ ಕೆಲಸಗಳನ್ನು ಮಾಡಿದ್ದೆನೆ.ಇನ್ನೂ ಹಲವಾರು ಕೆಲಸಗಳನ್ನು ಮಾಡಲು ತಾವು ಅವಕಾಶ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಮುಖಂಡ ಬಸವರಾಜ ಮದ್ರಿಕಿ ಮಾತನಾಡಿ, ಜನರಿಗೆ ಸ್ಪಂದಿಸುವ, ಜನರಿಗೆ ಸಹಾಯ ಹಸ್ತ ತೋರುವ ಹಾಗೂ ಜನರ ಬೇಡಿಕೆಗಳನ್ನು ಈಡೇರಿಸುವ ವ್ಯಕ್ತಿಒಯೆಂದರೆ ಬಸವರಾಜ ಮತ್ತಿಮಡು ಅವರು. ಬಿಜೆಪಿ ಪಕ್ಷದಿಂದಲೇ ರೇವುನಾಯಕ ಬೆಳಮಗಿ ಅವರು ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾದರೂ ಯಾವ ಕಾರ್ಯ ಮಾಡಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿದ್ದಾರೆ.ಕೇವಲ ಒಂದು ಬಾರಿ ಶಾಸಕರಾಗಿ ಆಯ್ಕೆದಾದ ನಂತರ ಮತ್ತಿಮಡು ಅವರು ಐದು ವರ್ಷಗಳ ಅವಧಿಯಲ್ಲಿ ಸುಮಾರು 1500ಕೋಟಿಗೂ ಹೆಚ್ಚು ಅನುದಾನ ತಂದು ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ಮತ್ತಿಮಡು ಅವರನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿ ಕಾಣೋಣ ಎಂದು ಹೇಳಿದರು.
ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದಕ್ಕೆ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬೆಳ್ಳೆಪ್ಪ ಕಣದಾಳ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಸೇರ್ಪಡೆಯಾದರು.
ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಾಗರಾಜ ಮೇಲಗಿರಿ,ನಿಂಗಣ್ಣ ಹುಳಗೋಳಕರ್,ಬಸವರಾಜ ತರನಳ್ಳಿ, ಮಹಾದೇವ ಗೊಬ್ಬೂರಕರ್, ಅವಿನಾಶ ಕೊಂಡಯ್ಯ,ಸದಾನಂದ ಕುಂಬಾರ,ಸಿದ್ರಾಮ ಕುಸಾಳೆ,ಡಿ.ಸಿ.ಹೊಸಮನಿ, ಜಗದೀಶ ಪಾಟೀಲ, ಶಿವುಮಾರ ತಳವಾರ ಸೇರಿದಂತೆ ಅನೇಕ ಜನರು ಇದ್ದರು.
ನನ್ನ ಐದು ವರ್ಷಗಳ ಅವಧಿಯಲ್ಲಿ ಜನರಿಗೋಸ್ಕರ ಫುಲ್ ಟೈಮ್ ಜನಸೇವಕನಾಗಿ ಜನಪರವಾದ ಕೆಲಸ ಮಾಡಿದ್ದೆನೆ.ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡಿರುವುದು ಸಂತೋಷ ತಂದಿದೆ.ಹಗಲು-ರಾತ್ರಿ ಎನ್ನದೇ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೆನೆ. ಚುನಾವಣಾ ಪ್ರಚಾರಕ್ಕೆ ಗ್ರಾಮಕ್ಕೆ ಹೋದಾಗ ಮಹಿಳೆಯರು ಆರತಿ ಎತ್ತಿ ಆಶೀವಾರ್ದಿಸುತ್ತಿದ್ದಾರೆ.ಇದಕ್ಕೆ ಸಂತೋಷ ಬೇರೊಂದಿಲ್ಲ. -ಬಸವರಾಜ ಮತ್ತಿಮಡು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…