ಲಿಂಗಸ್ಗೂರು: ಚುಕ್ಕನಟ್ಟಿ ಸಿವಾರದಲ್ಲಿರುವ ಗೈರಾಣಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ವೀರಾಪೂರು ಗ್ರಾಮ ಘಟಕದಿಂದ ಇಂದು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಚುಕ್ಕನಟ್ಟಿ ಸಿವಾರದ ಸರ್ವೇ ನಂಬರ್ 55 ಇಸ್ಸಾ 2 ರಲ್ಲಿ ಚುಕ್ಕನಟ್ಟಿ ಗ್ರಾಮದ ವಿರುಪಮ್ಮ ಗಂ ಶಂಕ್ರಪ್ಪ, ವೀರಪ್ಪ, ಗುಂಡಪ್ಪ, ಬಸವರಾಜ, ಚನ್ನಮ್ಮ, ಜಂಟಿ ಮಾಲೀಕತ್ವದ ಮತ್ತು ಚುಕ್ಕನಟ್ಟಿ ಸಿವಾರದ 53** ತಿಮ್ಮನಗೌಡ ತಂದೆ ಆದನಗೌಡ ಮತ್ತು ಹನುಂತರೆಡ್ಡಿ ಇವರ ಜಂಟಿ ಮಾಲೀಕತ್ವದ ಒಟ್ಟು 25 ಎಕರೆ 5 ಗುಂಟೆ, ಹಾಗೂ ಗದ್ದೆಮ್ಮೆ ಗಂಡ ಶಿವಣ್ಣ ಹೊರಪೇಟೆ ಸಾಕೀನ್ ಚುಕ್ಕನಟ್ಟಿ ಇವರ ಮಾಲೀಕತ್ವದ ಜಮೀನಿನ ಮಧ್ಯದ ಮಧ್ಯದಲ್ಲಿರುವ ಯತಗಲ್ ಗೆ ಹೋಗುವ ದಾರಿಯನ್ನು ಒತ್ತುವರಿ ಮಾಡಿದ್ದು ಅಲ್ಲದೇ ರಸ್ತೆ ಪಕ್ಕದ ಗೈರಾಣಿ ಭೂಮಿ ಒತ್ತುವರಿ ಮಾಡಿದ್ದಾರೆ.
ಆದ್ದರಿಂದ ವೀರಾಪೂರು, ಚುಕ್ಕನಟ್ಟಿ, ಹೀರೇನಗನೂರು ಗ್ರಾಮದ ಜಮೀನುಗಳಿಗೆ ಹೋಗಲು ಹಾಗೂ ಜಾನುವಾರು ಮೇಯಿಸಲು ಗುಡ್ಡಕ್ಕೆ ಹೋಗಲು ತೊಂದರೆಯಾಗಿದೆ. ಕೂಡಲೇ ಈ ಈ ರಸ್ತೆ ಹಾಗೂ ಸುತ್ತಮುತ್ತಲಿನ ಗೈರಾಣು ಭೂಮಿ ಒತ್ತುವರಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕೆಂದು ಕೆಪಿಆರ್‌ಎಸ್ ವೀರಾಪೂರು ಗ್ರಾಮ ಘಟಕ ಒತ್ತಾಯಿಸಿದೆ. ನಿರ್ಲಕ್ಷ್ಯ ಧೋರಣೆ ತಾಳಿದರೆ ತಹಶೀಲ್ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಕೆಪಿಆರ್ ಎಸ್ ಜಿಲ್ಲಾ ಸಮಿತಿ ಸದಸ್ಯ ರಮೇಶ ವೀರಾಪೂರ, ತಾಲೂಕು ಸಹ ಸಂಚಾಲಕ ನಿಂಗಪ್ಪ ಎಂ., ಗ್ರಾಮ ಘಟಕದ ಸದಸ್ಯರಾದ ಅಮರಪ್ಪ ಬೊಂಬಾಯಿ, ಹಸನಸಾಬ್ ಅಯ್ಯಪ್ಪ ದೊಡ್ಡಮನಿ, ಫಕೀರಪ್ಪ ಹೊಸಳ್ಳಿ, ಮಲ್ಲಪ್ಪ ಮಸ್ಕಿ, ಸುರೇಶ ಯಲಬುರ್ಗ ಸೇರಿದಂತೆ ಹಲವರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…