ಬಿಸಿ ಬಿಸಿ ಸುದ್ದಿ

ಜನತೆ ದಿ/ನಡ್ಜ್ ಸಂಸ್ಥೆಯ ಲಾಭ ಪಡೆದುಕೊಳ್ಳಿ: ವಿಶ್ವನಾಥ ಎಂ.ಕೆ

ಔರಾದ್(ಬಿ): ಔರಾದ ತಾಲೂಕಿನ ಬೋರಾಳ ಗ್ರಾಮದಲ್ಲಿ ದಿ/ನಡ್ಜ್ ಸಂಸ್ಥೆ ಹಾಗೂ ಪಶುಸಂಗೋಪನ ಇಲಾಖೆ ಸಹಯೋಗದೊಂದಿಗೆ 15 ಅತೀ ಕಡು ಬಡತನದಿಂದ ಕೂಡಿರುವ ಕುಟುಂಬಗಳ 3೦ ಆಡುಗಳಿಗೆ ಡಿ ವಾರ್ಮಿಗ್ ಹಾಗೂ ವ್ಯಾಕ್ಸಿನೇಷನ್ ಕ್ಯಾಂಪ್ ಹಮ್ಮಿಕೊಳ್ಳಲಾಯಿತು.

ದಿ/ನಡ್ಜ್ ಸಂಸ್ಥೆಯ ಕರ್ನಾಟಕದ ಆಪರೇಷನ್ ಮ್ಯಾನೇಜರ್ ವಿಶ್ವನಾಥ ಎಂ.ಕೆ. ಮಾತನಾಡಿ, ನಡ್ಜ್ ಸಂಸ್ಥೆಯು ತನ್ನ ಗ್ರಾಮೀಣ ಅಭಿವೃದ್ಧಿಯ ಕೇಂದ್ರದ ಭೂರಹಿತ, ಸಣ್ಣ ಮತ್ತು ಅತಿ ಕಡಿಮೆ ಕೃಷಿಕ ಕುಟುಂಬಗಳಿಗೆ ಸುಸ್ಥಿರ ಜೀವನೋಪಾಯವನ್ನು ನಿರ್ಮಿಸಲು ಸಹಾಯ ಮಾಡುವ ಮೂಲಕ ಅತ್ಯಂತ ಬಡತನದಲ್ಲಿ ವಾಸಿಸುತ್ತಿರುವ ಕುಟುಂಬಗಳೊಂದಿಗೆ ಕೆಲಸ ಮಾಡುತ್ತಿದೆ. ಭೂರಹಿತ, ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯವನ್ನು ಸುಧಾರಿಸುವುದು ಗ್ರಾಮೀಣ ಜೀವನೋಪಾಯದಲ್ಲಿ ಮಹಿಳೆಯರ ಏಜೆನ್ಸಿಯನ್ನು ನಿರ್ಮಿಸಿ ಕಡುಬಡವರಿಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುತ್ತಿದೆ ಎಂದರು.

ಕಳೆದ 3 ವರ್ಷಗಳಿಂದ, 81 ಸಾವಿರಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳ ಜೊತೆಗೆ ಬಡತನ ನಿರ್ಮಲನೆಗೆ ಕೆಲಸ ಮಾಡುತ್ತಿದೆ. ಪ್ರಸ್ತುತ ಕಲಬುರಗಿ ಮತ್ತು ಬೀದರ ಜಿಲ್ಲೆಗಳಲ್ಲಿ ಆಳಂದ ಮತ್ತು ಔರಾದ ತಾಲೂಕಿನಲ್ಲಿ ಒಟ್ಟು 710 ಮಹಿಳಾ ಪ್ರಧಾನ ಕುಟುಂಬಗಳ ಕಡುಬಡತನ ನಿರ್ಮೂಲನಾ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕುಟುಂಬದ ಮಹಿಳೆಯರಿಗೆ ಕುರಿ ಸಾಕಾಣಿಕೆ ಮತ್ತು ಸಣ್ಣ ವ್ಯಾಪಾರಕ್ಕೆ ಸಹಕಾರಿ ಮಾಡಿ ಅವರು ಅದರ ಮೂಲಕ ತಮ್ಮ ಬಡತನ ನಿರ್ಮೂಲೆನೆಗೆ ದಾರಿಮಾಡಿಕೊಡಲಾಗುತ್ತಿದೆ. ಇದಲ್ಲದೇ ಸರಕಾರದ ಸಹಕಾರದ ತತ್ವದಡಿಯಲ್ಲಿ ಅನೇಕ ಯೋಜನೆಳಿಗೆ ಸಂಯೋಜಿಸಿ ಉತ್ತಮ ಮತ್ತು ಸ್ವಾಭಿಮಾನದ ಬದುಕಿಗೆ ದಾರಿ ಮಾಡಿಕೊಡಲಾಗುತ್ತಿದೆ ಇದರ ಲಾಭವನ್ನು ಆಯ್ಕೆಯಾದ ಗ್ರಾಮದ ಮಹಿಳೆಯರು ಚೆನ್ನಾಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಸಮುದಾಯ ಅಭಿವೃದ್ಧಿ ಅಧಿಕಾರಿಗಳು ರತಿಕಾಂತ ಸ್ವಾಮಿ ಮಾತನಾಡಿ, ಆಡುಗಳಿಗೆ ಕಾಲಕ್ಕೆ ತಕ್ಕಂತೆ ವ್ಯಾಕ್ಸಿನೇಷನ್ ಮಾಡಿಸಬೇಕು, ಅವುಗಳಿಗೆ ಉತ್ತಮವಾದ ಆಹಾರ ನೀಡಬೇಕು. ಆಡುಗಳಿಗೆ ರೋಗ ಬರದಂತೆ ಎಚ್ಚರ ವಹಿಸಬೇಕು, ಸರಿಯಾಗಿ ನೋಡಿಕೊಂಡರೆ ಉತ್ತಮವಾದ ಲಾಭ ಕೊಡಲಿವೆ ಎಂದರು.

ದಿ/ನಡ್ಜ್ ಸಂಸ್ಥೆಯು ಕಡು ಬಡತನ ನಿರ್ಮೂಲನೆ ಕಾರ್ಯಕ್ರಮದಲ್ಲಿ ಬೋರಾಳ ಗ್ರಾಮದ ಒಟ್ಟು 15 ಕುಟುಂಬಗಳಿಗೆ ಆಡುಗಳನ್ನು ನೀಡಿದು, ಅವುಗಳ ಲಾಭ ಗ್ರಾಮದ ಜನತೆ ಪಡೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಗಳಾದ ಅನೀಲ ಸ್ವಾಮಿ, ಮಾಹಾದೇವ ಸ್ವಾಮಿ ಗ್ರಾಮದ ಫಲಾನುಭವಿ ಮಹಿಳೆಯರು ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಇತರರು ಹಾಜರಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

6 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

6 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

8 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

8 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

8 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

9 hours ago