ಬಿಸಿ ಬಿಸಿ ಸುದ್ದಿ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಸೋಲುವ ಭೀತಿ: ಅಷ್ಟಗಿ

ಕಲಬುರಗಿ: ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಬಗ್ಗೆ ಕಾಂಗ್ರಸ್ ನವರು ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ. ಚುನಾವಣಾ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ  ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಸಂತೋಷ ಅವರು ಎಲ್ಲಾ ಸಮಾಜದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡತಿದಾರೆ. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿಸುವ ಮೂಲಕ ಪಕ್ಷಕ್ಕೆ ಹಗಲಿರುಳು ದುಡಿಯುವ ವ್ಯಕ್ತಿ ಅವರು, ರಾಷ್ಟ್ರಕ್ಕೆ ಸಮಪಿ೯ತವಾದ ರಾಷ್ಟ್ರ ಪ್ರೇಮಿ ಸಂತೋಷ ಲಿಂಗಾಯತ ವಿರೋಧಿ ಎಂಬ ಪಟ್ಟವನ್ನು ಕಾಂಗ್ರೆಸ್ ಕಟ್ಟುತ್ತಿದೆ ಎಂದು ರಾಜ್ಯ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಅಂಬಾರಾಯ ಅಷ್ಟಗಿ ಹೇಳಿದರು.

ನಗರದ ಬಿಜೆಪಿ ವಿಭಾಗೀಯ ಮಾಧ್ಯಮ ಕೇಂದ್ರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು  ಜಿಲ್ಲೆಯಲ್ಲಿ ಸಹ ಕಾಂಗ್ರೆಸ್ ಪಕ್ಷ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆಡಿಯೋ ರಿಲೀಸ್ ಮಾಡಿ, ಚಿತಾಪುರ ಅಭ್ಯರ್ಥಿ ಮಣಿಕಂಠ ಹೆಸರು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ನಲ್ಲಿ ದೂರು ದಾಗಲಾಗಿದ್ದು, ಆಡಿಯೋ ಸತ್ಯಕ್ಕೆ ದೂರವಾದ ಮಾತು.  ಅವರ ತೆಜೋವಧೆಗೆ ಕಾಂಗ್ರೆಸ್ ಮುಂದಾಗಿದೆ. ಮಣಿಕಂಠ್ ರಾಠೋಡ್ ಅವರ ಮೇಲೆ ಆರೋಪ ಮಾಡಿರುವ ಆಡಿಯೋ ಕ್ರಿಯೆಟೆಡ್ ಆಡಿಯೋ ಇದ್ದು, ಅದರಲ್ಲಿ ಯಾವ ಸತ್ಯವೂ ಇಲ್ಲ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆ ಚುನಾವಣೆಯಲ್ಲಿ ಸೋಲುವ ಭೀತಿ ಮನಗಂಡು, ಆರೋಪ ಮಾಡತಿದೆ. ಲಿಂಗಾಯತ ವಿರೋಧಿ ಧೋರಣೆಯನ್ನು ಸಿದ್ದರಾಮಯ್ಯ ಇದ್ದಾರೆ. ಇಡೀ ವಿಶ್ವವೇ ತಿರುಗಿ ನೋಡುವ ವ್ಯಕ್ತಿ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡತಿದೆ. ಸೋಲಿನ ಭೀತಿಯಿಂದ ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡತಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ 130 ಕ್ಕಿಂತ ಅಧಿಕ ಸ್ಥಾನಗಳನ್ನು ಗೆದ್ದು,ಮತ್ತೆ ಅಧಿಕಾರಕ್ಕೆ ಬರಲಿದ್ದೇವೆ. ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿ ಅವರ ಜನಮಣ್ಣನೆ ನೋಡಿ ವಿಚಲೀತವಾಗಿದೆ.

ಈ ಬಾರಿ ಚುನಾವಣೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ. ರಾಜ್ಯದಲ್ಲಿ ಬಿಜೆಪಿ ಅಲೆಯಿದ್ದು, ಮೋದಿ ಅವರ ರೋಡ್ ಶೋ ನಲ್ಲಿ ಸುನಾಮಿ ರೀತಿಯಲ್ಲಿ ಜನರು ಸೇರತಿದಾರೆ. ಜಿಲ್ಲೆಯಲ್ಲಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಅತೀ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ, ಎಡಗೈ ಹಾಗೂ ಬಲಗೈ ಸಮುದಾಯದ ನಾವು ಎಲ್ಲರೂ ಬಿಜೆಪಿ ಪಕ್ಷಕ್ಕೆ  ಬೆಂಬಲ ನೀಡಲಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಬಾರಾಯ ಅಷ್ಟಗಿ, ರಾಜು ವಾಡೆಕರ್ ,ಗಣೇಶ್ ವಳಕೇರಿ, ನಾಗರಾಜ್ ಸೋಲಾಪುರ್ ,ಅಂಬರಾಯ ಚಳಗೇರಾ ,ಮಹೇಶ್ ವಾಡೆಕರ್ ,ಬಸವರಾಜ್ ಚಿತ್ತೂರ್, ಶಿವು ಅಷ್ಟಗಿ, ಅಂಬಾರಾಯ ಬೆಳಕೋಟಾ ,ಬಸವರಾಜ್ ಬೆಣ್ಣೂರ್ ಕರ್ ಉಪಸ್ಥಿತರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

14 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

14 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

16 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

17 hours ago