ಚಿಂಚೋಳಿ: ಕಾಳಗಿ ತಾಲೂಕಿನ ಕೋಡ್ಲಿಯ ಎಮ್ ಎಸ್ ಫಂಕ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಕ್ಷ, ಚಿಂಚೋಳಿ ವಿಧಾನಸಭಾ ಚುನಾವಣೆ ಪ್ರಯುಕ್ತ, ಅಲ್ಪಸಂಖ್ಯಾತರ ಸಮುದಾಯದ ಸಭೆ ಕರೆಯಲಾಯಿತ್ತು, ಈ ಸಭೆಯಲ್ಲಿ ಲೋಕಸಭಾ ಸದಸ್ಯರಾದ ಉಮೇಶ್ ಜಾಧವ ಹಾಗೂ ಚಿಂಚೋಳಿ ಮೀಸಲು ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಅವಿನಾಶ ಜಾಧವ ಅವರ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಸಮುದಾಯದ ಸುಮಾರು 1500ಕ್ಕೂ ಹೆಚ್ಚು ಜನ ಸಮಾವೇಶದಲ್ಲಿ ಅಲ್ಪಸಂಖ್ಯಾತರ ಮಹಿಳೆಯರು ಹೆಚ್ಚಿನ ಸಂಖ್ಯೆಯ್ಲಲಿ ಭಾಗವಹಿಸಿ ಅವಿನಾಶ್ ಜಾಧವ್ ಗೆ ಬೆಂಬಲವ ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರ ಹಲವು ಮುಖಂಡರು ಮಾತನಾಡಿ, ಅಲ್ಪಸಂಖ್ಯಾತರ ನಾಯಕ ದಿನ ದಲಿತರ ಆಶಾಕಿರಣ, ಯಾವುದೇ ಜಾತಿ ಬೇದ ಮಾಡದೇ, ಎಲ್ಲರಲ್ಲಿ ಒಂದೇ ದೃಷ್ಟಿ ಯಿಂದ ನೋಡುವ ಸಹನುಭೂತಿ ಡಾ, ಅವಿನಾಶ ಜಾಧವ, ಹಾಗೂ ಅಲ್ಪಸಂಖ್ಯಾತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿದರೆ , ಖಬರಸ್ತನ ಜಾಗ ಮಾಡಿಕೊಟ್ಟಿದಾರೆ, ಅನೇಕ ಮೂಲಭೂತ ಸೌಕರ್ಯಗಳು ಒದಗಿಸಿಕೊಟ್ಟಿದಾರೆ, ಯುವ ಅಭಿವೃದ್ಧಿಗಾಗಿ ಶಾಸಕ ಡಾ ಅವಿನಾಶ ಜಾಧವವರಿಗೆ ಸಮುದಾಯ ಬೆಂಬಲಿಸುತ್ತದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯನ್ನು ಉದ್ದೇಶಿಸಿ ಚಿಂಚೋಳಿ ಮತ ಕ್ಷೇತ್ರದ ಅಭ್ಯರ್ಥಿಯಾದ ಡಾ. ಅವಿನಾಶ ಜಾಧವ ಅವರು ಮಾತನಾಡಿದರು, ಇಂದು ಬಹುಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಬಿಜೆಪಿಗೆ ಸರ್ಪಡೆ ಆಗ್ತಿರೋದು ತುಂಬಾ ಖುಷಿ ವಿಷಯ, ಅಲ್ಪಸಂಖ್ಯಾತರ ಸಮುದಾಯದ ಮಹಿಳೆಯರು ಯುವಕರು ಹಿರಿಯರು, ಸುಮಾರು 2000 ಕ್ಕೂ ಹೆಚ್ಚು ಜನರು ಸೇರ್ಪಡೆ ಆಗಿದ್ದಕ್ಕೆ ಇವತ್ತಿಂದ ಬೇರೆ ಪಕ್ಷಗಳ ನಿದ್ದೆಗೇಡುತ್ತದೆ . ಇಷ್ಟು ಜನ ತಮ್ಮ ವಿಶ್ವಾಸ ನೀಡಿ ಬೆಂಬಲಸಿತ್ತಿರುವುದಕ್ಕೆ ನನ್ನ ಗೆಲುವು ಖಚಿತ, ಸಾಬ್ ಕಾ ಸಾತ್, ಸಾಬ್ ವಿಕಾಸ್, ಸಾಬ್ ಕಾ ವಿಶ್ವಾಸ, ಸಾಬ್ ಕಾ ಪ್ರಯಾಸ್ ಎನ್ನುವಂತೆ, ನಿಮ್ಮ ಜೊತೆಗೆ ನಾವಿದ್ದೇವೆ, ಚಿಂಚೋಳಿ ತಾಲೂಕದಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿಯನ್ನು ಆಗಿದೆ, ಮೇ 10 ರಂದು ಬಿಜೆಪಿಗೆ ಮತ ನೀಡಿ ಬಹುಮತದಿಂದ ಗೆಲ್ಲಿಸಿ ತರಬೇಕ್ಕಾಗಿ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಅಲ್ಪಸಂಖ್ಯಾತರ ಮುಖಂಡರು, ಯುವಕರು, ಅತೀ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದರು. ಅಲ್ಪಸಂಖ್ಯಾತರ ಮುಖಂಡರಾದ ಸಲ್ಮಾ ಮೇಡಂ ಕೆಎಂ ಬಾರಿ, ಸದ್ದಾಮ್ ವಜೀರಗಾಂವ, ಸಲ್ಲಾವದ್ದೀನ್ ಸಾಬ್, ಅಲಿಂ ಸಾಬ್, ನಾಯ್ಕೋಡಿ ಫಾರಕ್, ರಶೀದ್ ಪಟೇಲ್, ಮುಖರಂಭ ಕಾಸಿಂ ಪಟೇಲ್, ಅಲ್ಲಾ ಪಟೇಲ್, ಇಸ್ಮೈಲ್ ನದಾಫ್, ಮಿರಾಜ್ ಕಾಳಗಿ ಇನ್ನು ಅನೇಕ ಮುಖಂಡರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…