ಕಲಬುರಗಿ; ಸೋಮವಾರ ರಾತ್ರಿಯ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ನೀತಿ ಸಂಹಿತೆ ಉಲ್ಲಂಘಿಸಿ ಮಧ್ಯ ಮತ್ತು ಹಣ ವಿತರಣೆ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರಿಬ್ಬರನ್ನು ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಅವರಿಗೆ ಬೆನ್ನಟ್ಟಿ ಹಿಡುವ ಮೂಲಕ ಆಕ್ರಮ ಚುನಾವಣೆ ನಡೆಸುವರಿಗೆ ಶಾಕ್ ನೀಡಿದ್ದಾರೆ.
ನಗರದ ಸಂಗಮೇಶ್ವರ ಬಡಾವಣೆ ಹತ್ತಿರ ಅಕ್ರಮವಾಗಿ ಚುನಾವಣ ನೀತಿ ಸಂಹಿತೆ ಉಲ್ಲಂಘಿಸಿ ಮಧ್ಯ ಮತ್ತು ಹಣ ವಿತರಣೆಯಾಗುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದರು.
ಸ್ಥಳದಲ್ಲಿ ಮೂರು ಜನ ಸವಾರರನ್ನು ಹೊಂದಿದ ವಾಹನವೊಂದು (ಬಿಳಿ ಬಣ್ಣದ ಇನ್ನೋವಾ ಕ್ರಿಸ್ಟಾ ವಾಹನ) ಇರುವುದು ಕಂಡುಬಂದಿರುತ್ತದೆ. ವಿಚಾರಿಸಲು ಮುಂದಾದಾಗ ವಾಹನವು ಅತೀ ವೇಗದಲ್ಲಿ ಸ್ಥಳದಿ೦ದ ನಿರ್ಗಮಿಸಿತ್ತು. ಅದರಂತೆ ಸದರಿವಾಹವನ್ನು ಹಿಂಬಾಲಿಸಿ ವಿದ್ಯಾನಗರದ ಹನುಮಾನ ದೇವಸ್ಥಾನದ ಹತ್ತಿರ ತಡೆಗಟ್ಟದಾಗ ವಾಹದಲ್ಲಿದ್ದ ಒಬ್ಬ ವ್ಯಕ್ತಿಯು ಸ್ಥಳದಿ೦ದ ಕೂಡಲೇ ಒಂದು ಬ್ಯಾಗನೊಂದಿಗೆ ಒಡಿಹೋಗಿರುತ್ತಾನೆ ಮತ್ತು ಉಳಿದ ಇನ್ನಿಬ್ಬರನ್ನು ಕಛೇರಿ ವಾಹನ ಚಾಲಕರು ಮತ್ತು ಸಿಬ್ಬಂದಿ ಕೂಡಿಕೊಂಡು ತಡೆಹಿಡಿದು ಪ್ರಶ್ನಿಸಲಾಯಿತು ಎಂದು ಜಿಲ್ಲಾಧಿಕಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಂತರ ಪೋಲಿಸ ಆಯುಕ್ತರು. ನಗರ ಹಾಗೂ ಸಿಟಿ ಪೊಲೀಸ್ ಕಂಟ್ರೋಲ್ ರೂಮ ಇವರ ಗಮನಕ್ಕೆ ತರಲಾಯಿತು. ಆದ ಕಾರಣ ಸದರಿ ಘಟನೆಯ ಕುರಿತು ಐಪಿಸಿ u/s 171 , H 321, 353 ರಡಿ ಹಾಗೂ ಅನ್ವಯಿಸುವ ಸೂಕ್ತ ಕಾನೂನಿನಡಿ ಪ್ರಕರಣವನ್ನು ದಾಖಲಿಸಿಕೊಂಡು ಘಟನೆ ವೇಳೆಯಲ್ಲಿ ಪಲಾಯನಗೈದ ವ್ಯಕ್ತಿಯ ಕುರಿತು ಹಾಗೂ ಯಾವ ಕೃತ್ಯ ಪ್ರಸ್ತಾಪಿಸಿದ ಸ್ಥಳದಲ್ಲಿ ಜರುಗಿದೆ ಎನ್ನುವ ಕುರಿತು ವಿಚಾರಣೆ ಜರುಗಿಸಲು ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…