ಕಲಬುರಗಿ: ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಒಂಭತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜರುಗಿದ ಶಾಂತಿಯುತವಾಗಿ ಮತದಾನವು ನಡೆದಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆದಿರುವುದಿಲ್ಲ. ಜಿಲ್ಲೆಯಲ್ಲಿ ಒಟ್ಟಾರೆ ಅಂದಾಜು ಶೇ 66 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ಪ್ರತಿಷತ ಅಂದಾಜು ಮತದಾನ ವಿವರ ಇಂತಿದೆ: 34-ಅಫಜಲಪುರ ಶೇ.69.94, 35-ಜೇವರ್ಗಿ ಶೇ.69.40, 40-ಚಿತ್ತಾಪುರ(ಮೀಸಲು) ಶೇ.64.32, 41-ಸೇಡಂ ಶೇ.77.03, 42-ಚಿಂಚೋಳಿ(ಮೀಸಲು) ಶೇ. 72.94, 43-ಗುಲಬರ್ಗಾ ಗ್ರಾಮೀಣ(ಮೀಸಲು) ಶೇ.60.80, 44-ಗುಲಬರ್ಗಾ ದಕ್ಷಿಣ ಶೇ.55.79, 45-ಗುಲಬರ್ಗಾ ಉತ್ತರ ಶೇ.57.79, 46-ಆಳಂದ ಶೇ.65.02 ರಷ್ಟು ಮತದಾನವಾಗಿದೆ.
ಜಿಲ್ಲೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿ ಬೆಳಿಗ್ಗೆ 9 ಗಂಟೆಗೆ 6.56 ರಷ್ಟು, 11 ಗಂಟೆಗೆ ಶೇ. 17.95, ಮಧ್ಯಾಹ್ನ 1 ಗಂಟೆಗೆ ಶೇ. 30.94, ಮಧ್ಯಾಹ್ನ 3 ಗಂಟೆಗೆ 46.46, ಸಾಯಂಕಾಲ 5 ಗಂಟೆಗೆ ಶೇ. 58.34, ಕೊನೆಯದಾಗಿ ಮತದಾನ ಮಗಿದ ನಂತರ ಅಂದಾಜು ಒಟ್ಟಾರೆ ಶೇ. 66 ರಷ್ಟು ಮತದಾನವಾಗಿದೆ.
ಆಕರ್ಷಿಸಿದ ಸಖಿ, ಥೀಮ್ ಮತಗಟ್ಟೆಗಳು: ಮಹಿಳೆಯರು, ವಿಶೇಷಚೇತನರು ಹಾಗೂ ಯುವ ಸಮೂಹವನ್ನು ಮತಗಟ್ಟೆಯತ್ತ ಆಕರ್ಷಿಸಲು ಈ ಬಾರಿ ಜಿಲ್ಲೆಯಾದ್ಯಂತ 72 ವೈವಿಧ್ಯಮಯ ಮಾದರಿ ಮತಗಟ್ಟೆಗಳು ಸ್ಥಾಪಿಸಿದ್ದು, ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ಈ ಮತಗಟ್ಟೆಗಳು ಯಶಸ್ವಿಯಾಗಿವೆ. ವಿಶೇಷವಾಗಿ ಮಹಿಳಾ ಮತದಾರರನ್ನು ಆಕರ್ಷಿಸಲು ಪ್ರತಿ ವಿಧಾನಸಬಾ ಕ್ಷೇತ್ರಕ್ಕೆ 5 ರಂತೆ ಜಿಲ್ಲೆಯಾದ್ಯಂತ 45 ಮಹಿಳಾ ಸಖಿ ಪಿಂಕ್ ಬೂತ್ ಸ್ಥಾಪಿಸಿದ್ದು, ಮಹಿಳಾ ಸಿಬ್ಬಂದಿಗಳೇ ಇಲ್ಲಿ ಕಾರ್ಯನಿರ್ವಹಿಸಿದರು. ಮತಗಟ್ಟೆ ಬಲೂನ್‍ಗಳಿಂದ ಸಿಂಗರಿಸಿದಲ್ಲದೇ ಕೊಠಡಿ, ಗೋಡೆಗಳ ಮೇಲೆ ವಿವಿಧ ಬಣ್ಣ ಬಣ್ಣದ ಚಿತ್ರಕಲೆಗಳು ವಿಶೇಷವಾಗಿ ಮಹಿಳಾ ಮತದಾರರನ್ನು ತನ್ನತ್ತ ಸೆಳೆದವು.
ಇದಲ್ಲದೇ ಪ್ರತಿ ವಿಧಾನಸಭೆಗೆ ತಲಾ ಒಂದರಂತೆ ಸ್ಥಳೀಯ ಇತಿಹಾಸ, ಮಹಿಮೆ ಸಾರುವ 9 ಥೀಮ್ ಬೂತ್ ಸ್ಥಾಪಿಸಲಾಗಿತ್ತು. ಈ ಮತಗಟ್ಟೆಗಳ ಗೋಡೆಗಳ ಮೇಲೆ ಕಲಬುರಗಿ ಕೋಟೆ, ಮಳಖೇಡ ಕೋಟೆ, ಭೀಮಾ ನದಿ, ತೊಗರಿ, ಹತ್ತಿ, ಕೆಂಬಾಳೆ ಚಿತ್ರಕಲೆಗಳು ಮತದಾರರಿಗೆ ಉಲ್ಲಾಸ ತರಿಸಿದವು. ಇದಲ್ಲದೇ ಕ್ಷೇತ್ರಕ್ಕೊಂದು ಯುವ ಬೂತ್, ವಿಶೇಷಚೇತನ ಬೂತ್ ಸಹ ಸ್ಥಾಪಿಸಲಾಗಿತ್ತು.
ವ್ಹೀಲ್ ಚೇರ್ ಸಹಾಯದಿಂದ ಮತದಾನ: ಪ್ರತಿ ಮತಗಟ್ಟೆಯಲ್ಲಿ ವಯೋವೃದ್ಧರ ಮತದಾರರ ನೆರವಿಗೆ ಚುನಾವಣಾ ಅಯೋಗವು ವ್ಹೀಲ್ ಚೇರ್ ಒದಗಿಸಿದ್ದರಿಂದ ವೃದ್ಧರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ವ್ಹೀಲ್ ಚೇರ್ ಸಹಾಯದಿಂದ ಮತದಾನ ಮಾಡಿದರು. ಈ ಬಾರಿ ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಾಹನ ಪಾರ್ಕಿಂಗ್, ನೆರಳು, ವಿಶ್ರಾಂತಿ ಕೋಣೆದಂತಹ ಮೂಲಸೌಕರ್ಯದ ಜೊತೆಗೆ ವಿಶೇಷಚೇತನರಿಗೆ ರ್ಯಾಂಪ್ ವ್ಯವಸ್ಥೆ ಸಹ ಮಾಡಲಾಗಿತ್ತು.
ಪತ್ನಿಯೊಂದಿಗೆ ಡಿ.ಸಿ. ಮತದಾನ: ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ.ಗುರುಕರ್ ಅವರು ತಮ್ಮ ಪತ್ನಿ ಇಂಧುಶ್ರೀ ಗುರುಕರ್ ಅವರೊಂದಿಗೆ ಗುಲಬರ್ಗಾ ದಕ್ಷಿಣ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 61ರಲ್ಲಿ ಮತ ಚಲಾಯಿಸಿದರು.
ಯುವ ಮತದಾರರಿಂದ ಮತ ಚಲಾವಣೆ: ಈ ಬಾರಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾದ ಯುವಕ, ಯುವತಿಯರು ಎಪಿಕ್ ಡಿಜಿಟಲ್ ಕಾರ್ಡ್‍ದೊಂದಿಗೆ ಮತಗಟ್ಟೆಗೆ ಆಗಮಿಸಿ ತುಂಬಾ ಉತ್ಸಾಹದಿಂದ ಮತ ಚಲಾವಣೆ ಮಾಡಿದ್ದು ಅಲ್ಲಲ್ಲಿ ಕಂಡು ಬಂತು.
ಪ್ರಜಾ ಸರ್ಕಾರಕ್ಕೆ ನನ್ನ ಮತ: ಆಳಂದ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 9 ರಲ್ಲಿ ಮೊದಲನೇ ಬಾರಿಗೆ ಮತ ಮತÀ ಚಲಾಯಿಸಿ ಮಾತನಾಡಿದ ಯುವ ಮತದಾರರಾಗಿರುವ ಕು. ಶ್ರದ್ಧಾ ಗುಂಡಪ್ಪ ಬನಶೆಟ್ಟಿ, ಪ್ರಜೆಗಳಿಂದ ಆಯ್ಕೆಯಾಗುವ ಪ್ರಜಾ ಸರ್ಕಾರಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡಲು ನಾನು ನನ್ನ ಮತ ಚಲಾಯಿಸಿದ್ದೇನೆ. ಮೊದಲನೇ ಬಾರಿಗೆ ಮತ ಚಲಾಯಿಸಿದ್ದು ನನಗೆ ಖುಷಿ ತಂದಿದೆ ಎಂದಳು.
ಅಫಜಲಪುರ ಮತಕ್ಷೇತ್ರದ ಫೀರೋಜಾಬಾದ ಗ್ರಾಮದ ಮತಗಟ್ಟೆ ಸಂಖ್ಯೆ 241 ರಲ್ಲಿ ಅಬ್ದುಲ್ ಮಶಾಕ ಹಾಗೂ ಜೇವರ್ಗಿ ವಿಧಾನಸಭಾ ಮತಕ್ಷೇತ್ರದ ಮತಗಟ್ಟೆ ಸಂಖ್ಯೆ 81 ರಲ್ಲಿ ಮೋನಿಕಾ ಅವರು ಮೊದಲನೇ ಬಾರಿಗೆ ತಮ್ಮ ಮತ ಚಲಾಯಿಸಿ ಖುಷಿ ಪಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…