ಬಿಸಿ ಬಿಸಿ ಸುದ್ದಿ

ಅಜಯಸಿಂಗ್ ಸಚಿವರಾಗಲಿ ಎಂದು ಬಲಭೀಮನ ಸನ್ನಿಧಾನದಲ್ಲಿ ವಿಶೇಷ ಪೂಜೆ

ಕಲಬುರಗಿ: ಜೇವರ್ಗಿಯ ಶಾಸಕ ಅಜಯಸಿಂಗ್ ಧರ್ಮಸಿಂಗ್ ಅವರು ನೂತನ ಸರ್ಕಾರದಲ್ಲಿ ಮಂತ್ರಿಯಾಗಲಿ ಎಂದು ಪ್ರಾರ್ಥಿಸಿ ಶಕ್ತಿಯ ದೈವ  ಎಂದು ಕರೆಸಿಕೊಳ್ಳುವ ಜೇವರ್ಗಿ ತಾಲೂಕಿನ ನೇಲೋಗಿ ಗ್ರಾಮದ ಬಲಭೀಮೇಶ್ವರ ದೇವಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.

ಅಜಯಸಿಂಗ್ ಅಭಿಮಾನಗಳು ಹನುಮಾನ ದೇವರ ಗುಡಿಯಲ್ಲಿ ಬಲಭೀಮನಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು. ಜನಪರ ಕೆಲಸ ಮಾಡಿಕೊಂಡು ಬಂದಿರುವ ಅವರಿಗೆ ಇನ್ನಷ್ಟು ಶಕ್ತಿ ನೀಡಲಿ, ಸರ್ಕಾರದಲ್ಲಿ ಪ್ರಮುಖ ಸಚಿವ ಸ್ಥಾನ ಲಭಿಸಲಿ ಎಂದು ಎಲ್ಲರು ಪ್ರಾರ್ಥಿಸಿದರು.

ಡಾ.ಅಜಯಸಿಂಗ್ ಅವರು ಸತತವಾಗಿ ಮೂರು ಸಲ ಶಾಸಕರಾಗುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಅವರಿಗೆ  ಈ ಸಲ ಸಚಿವ ಸ್ಥಾನ ನೀಡುವ ಮೂಲಕ ಕಲಬುರಗಿ ಜಿಲ್ಲೆಗೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಆಧ್ಯತೆ ನೀಡಬೇಕು ಎಂದು  ಜಿಪಂ ಮಾಜಿ ಉಪಾಧ್ಯಕ್ಷ  ಗುರುಲಿಂಗಪ್ಪಗೌಡ ಆಂದೋಲಾ,  ಜಿಪಂ ಮಾಜಿ ಸದಸ್ಯ ಸಕ್ರೆಪ್ಪಗೌಡ ಪಾಟೀಲ್ ಹರನೂರ, ಯುವ  ನಾಯಕರಾದ ಬಸವರಾಜ ಬಿರಾದಾರ, ವಿಜಯಕುಮಾರ ಪಾಟೀಲ್ ಹಂಗರಗಿ ಅವರು ಪಕ್ಷದ ನಾಯಕರಿಗೆ ಕೋರಿದರು. ಅಜಯಸಿಂಗ ಅವರು 2013ರಲ್ಲಿಯೇ ಮಂತ್ರಿಯಾಗಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಆಗಲಿಲ್ಲ. ಈ ಸಲ ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದರು.

ಪ್ರಮುಖರಾದ  ಬೈಲಪ್ಪ ನೆಲೋಗಿ, ಚಂದು ಹೊಸಮನಿ, ಭೀಮರಾಯ ಸಂದಿಮನಿ, ಭಗವಂತರಾಯ ಗುಜಗೊಂಡ, ಅಪ್ಪಾಸಾಬ ಹೊಸಮನಿ, ಭೂತಾಳಿ ಭಾಸಗಿ, ಭೀಮು ಕಾಚಾಪುರ, ರವಿ ವಿಭೂತಿ, ಶರಣಕುಮಾರ ಬಿಲ್ಲಾಡ, ಪವನಕುಮಾರ ವಳಕೇರಿ ಇತರರಿದ್ದರು.

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

35 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

43 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

3 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

3 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

3 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

4 hours ago