ಬಿಸಿ ಬಿಸಿ ಸುದ್ದಿ

‘ಸಾಮಾಜಿಕ ಸಮಸ್ಯೆ-ಪರಿಹಾರದ ಮೇಲೆ ಬೆಳಕು ಚೆಲ್ಲುವ ಸಾಹಿತ್ಯ ಹೊರಹೊಮ್ಮಲಿ’

ಕಲಬುರಗಿ: ಕವಿಯಾದವನು ಆದರ್ಶ ವ್ಯಕ್ತಿತ್ವವನ್ನು ಹೊಂದಿರಬೇಕು. ಕೇವಲ ಕಲ್ಪನೆ ಆಧಾರಿತ ಸಾಹಿತ್ಯ ರಚಿಸಿದರೆ, ಅದರಿಂದ ಸಮಾಜಕ್ಕೆ ಪ್ರಯೋಜನೆಯಿಲ್ಲ. ಬದಲಿಗೆ ಸಮಾಜದಲ್ಲಿರುವ ರೈತ, ಜನ ಸಾಮಾನ್ಯರು, ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ,ಅವುಗಳಿಗೆ ಪರಿಹಾರಗಳನ್ನು ಸೂಚಿಸುವ ಸಮಾಜಮುಖಿ ಸಾಹಿತ್ಯ ರಚನೆ ಮಾಡುವುದು ಪ್ರಸ್ತುತ ಸಂದರ್ಭದಲ್ಲಿ ಅವಶ್ಯಕವಾಗಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಆರ್.ಕೆ.ಹುಡಗಿ ಆಶಯ ವ್ಯಕ್ತಪಡಿಸಿದರು.

ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ಕೆ.ಎಚ್.ಬಿ ಗೀನ್ ಪಾರ್ಕ ಬಡಾವಣೆಯ ದಕ್ಷಿಣಮುಖಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ‘ಗಿರಿಜಾ ಪ್ರಕಾಶನ’ದ ವಿಜಯಕುಮಾರ ಮಾಲಿಪಾಟೀಲ ರಚಿತ ‘ಅಂತರಂಗದ ಮೃದಂಗ’ ಕವನ ಸಂಕಲನವನ್ನು ಮಂಗಳವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಭಾಗದಲ್ಲಿ ಅನೇಕ ಪ್ರತಿಭಾವಂತರಿದ್ದು, ಅವರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ. ಇಲ್ಲಿನ ಮಾಧ್ಯಮಗಳು ಸಮಾಜ ಸೇವಕರು, ಸಾಹಸಿ ಕವಿಗಳು, ಚಿಂತಕರು, ಸಾಧಕರನ್ನು ಗುರ್ತಿಸಿ, ಬೆಳೆಸುವ ಕಾರ್ಯ ಮಾಡಬೇಕಾಗಿದೆ. ನಮ್ಮ ಭಾಗದಲ್ಲಿ ಸಾಹಸಿ ಕವಿಗಳ ಸಂಖ್ಯೆ ಹೆಚ್ಚಾಗಬೇಕು. ಸೂಕ್ಷ್ಮತೆ ಅಥವಾ ಸಂವೇದನಾಶೀಲ ಗುಣ ಬೆಳೆಸಿಕೊಳ್ಳಬೇಕು. ಕವಿಯಲ್ಲಿ ಮಾನವೀಯತೆ, ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಬೇಕೆಂಬ ಹಠಮಾರಿತನ, ಜಿದ್ದು ಇದ್ದರೆ, ಆಗ ಸಮಜಮುಖಿ ಕವಿಯಾಗಲು ಸಾಧ್ಯವಿದೆ ಎಂದು ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದರು.

ಸಾಹಿತಿ ಪ್ರೊ.ಕಲ್ಯಾಣರಾವ ಪಾಟೀಲ ಮಾತನಾಡಿ, ಬದುಕಿನ ವಾಸ್ತವಿಕತೆಯನ್ನು ಹೊಂದಿರುವ ಸಾಹಿತ್ಯ ರಚನೆಗೆ ಆದ್ಯತೆ ನೀಡಬೇಕು. ಈ ಕೃತಿಯು 123 ಕವನಗಳನ್ನು ಹೊಂದಿರುವ, ಸಮಾಜಕ್ಕೆ ಅಗತ್ಯವಾದ ವಿಷಯಗಳನ್ನು ಒಳಗೊಂಡ ಮೌಲಿಕ, ಬೃಹತ ಕವನ ಸಂಕಲನವಾಗಿದ್ದು, ಎಲ್ಲರು ಓದುವಂತ ಕೃತಿ ಇದಾಗಿದೆ ಎಂದರು.

ಹಿರೇನಂದೂರ ಶಿವಸಾಂಭ ಸ್ವಾಮೀಜಿ, ಡಾ.ಶಿವರಾಜ ಶಾಸ್ತ್ರಿ ಎನ್.ಹೇರೂರ್, ಶರಣಗೌಡ ಡಿ.ಪಾಟೀಲ, ಸಂಜೀವಕುಮಾರ ಶೆಟ್ಟಿ, ಎಚ್.ಬಿ.ಪಾಟೀಲ, ಪೃತ್ವಿರಾಜ ವಿ.ಮಾಲಿಪಾಟೀಲ, ಶರಣಗೌಡ ಬಿ.ಪಾಟೀಲ, ಡಾ.ವಿಜಕುಮಾರ ಪರೂತೆ, ವೈಜನಾಥ ಗೋಳೆ, ವಿಜಯಕುಮಾರ ಮಾಲಿಪಾಟೀಲ, ಗಿರಿಜಾ ವಿ.ಮಾಲಿಪಾಟೀಲ, ಆರ್.ಜೆ.ವಾಣಿ ವೇದಿಕೆ ಮೇಲಿದ್ದರು.

ಪ್ರೊ.ರವೀಂದ್ರ ವಿ.ಪಾಟೀಲ ಪುಸ್ತಕ ಪರಿಚಯಿಸಿದರು. ಸಂಗಮೇಶ್ವರ ಸರಡಗಿ ಲೇಖಕರ ಪರಿಚಯ ಮಾಡಿಕೊಟ್ಟರು. ಶಿವಕಾಂತ ಚಿಮ್ಮಾ ಸ್ವಾಗತಿಸಿದರು. ಮೋಹನ ಎಂ.ಕಟ್ಟಿಮನಿ ನಿರೂಪಿಸಿದರು. ವೀರೇಶ ಬೋಳಶೆಟ್ಟಿ ನರೋಣಾ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಿಸಲಾಯಿತು.

emedialine

Recent Posts

ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲರ ನುಡಿಮುತ್ತುಗಳು ಜೀವನದಲ್ಲಿ ಅಳವಡಿಸಿಕೊಳ್ಳಿ

ಕಲಬುರಗಿ: ನಗರದ ಜಸ್ಟಿಸ್ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಮತ್ತು ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಕಲಬುರಗಿಯಲ್ಲಿ ಶ್ರಾವಣ…

13 hours ago

ಛಾಯಾಚಿತ್ರ ಪ್ರದರ್ಶನ ಭಾಷೆಯಷ್ಟೇ ಪ್ರಬಲ ಮಾಧ್ಯಮ

ಕಲಬುರಗಿ : ಒಂದು ಛಾಯಾಚಿತ್ರ ನೂರು ಪದಗಳಲ್ಲಿ ಹೇಳಬಹುದಾದೊಂದನ್ನು ಪರಿಣಾಮಕಾರಿ ಹೇಳುತ್ತದೆ, ಅದು ಭಾಷೆಯಷ್ಟೇ ಪ್ರಬಲ ಮಾಧ್ಯಮ ಎಂದು ಹಿರಿಯ…

13 hours ago

ಕಲಬುರಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು 29 ರಂದು: ಸರ್ವಾಧ್ಯಕ್ಷೆ ಲೇಖಕಿ ಪ್ರಮೀಳಾ ಜಾನಪ್ಪಗೌಡಗೆ ಸನ್ಮಾನ

ಕಲಬುರಗಿ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಗಷ್ಟ್ 29 ರಂದು ಹಮ್ಮಿಕೊಂಡಿರುವ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ…

13 hours ago

18 ವರ್ಷ ಮೇಲ್ಪಟ್ಟ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಡಿ.ಸಿ.ಮನವಿ

ಕಲಬುರಗಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿ.01-01-2025 ಅರ್ಹತಾ ದಿನವನ್ನಾಗಿ ಪರಿಗಣಿಸಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವು ಇದೇ…

14 hours ago

ನಾಳೆ ಕಲಬುರಗಿಗೆ ಉಪ ಮುಖ್ಯಮಂತ್ರಿ ಆಗಮನ: ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ಕಲಬುರಗಿ: ರಾಜ್ಯದ "ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ಪಿ.ಡಿ.ಎ.…

14 hours ago

ಪ್ರಜ್ವಲ್‍ಗೆ ಸನ್ಮಾನ

ಕಲಬುರಗಿ: ಕಲ್ಯಾಣ ಕರ್ನಾಟಕದ ಮಹಾನಗರದಲ್ಲಿ ಬುದ್ಧ ಬಸವ ಅಂಬೇಡ್ಕರ್ ಕಂಪ್ಯೂಟರ್ ಬೆರಳಚ್ಚುಗಾರರ ಹಾಗೂ ಜೆರಾಕ್ಸ್ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳ ಸಂಘದ…

14 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420