ಬಿಸಿ ಬಿಸಿ ಸುದ್ದಿ

ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲರ ನುಡಿಮುತ್ತುಗಳು ಜೀವನದಲ್ಲಿ ಅಳವಡಿಸಿಕೊಳ್ಳಿ

ಕಲಬುರಗಿ: ನಗರದ ಜಸ್ಟಿಸ್ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ ಮತ್ತು ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಕಲಬುರಗಿಯಲ್ಲಿ ಶ್ರಾವಣ ಮಾಸ ನಿಮಿತ್ಯ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ ರವರ ಅನುಭಾವದ ನುಡಿಮುತ್ತುಗಳಾದ “ಮುಂಜಾವಿಗೊಂದು ನುಡಿಕಿರಣ” ಪುಸ್ತಕದÀ ಚಿಂತನ-ಮಂಥನದಲ್ಲಿ “ವ್ಯಕ್ತಿತ್ವ ವಿಕಸನ” ಕುರಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಶಂಕರ ದೇವನೂರ ಆಧ್ಯಾತ್ಮಿಕ ಚಿಂತಕರು ಮತ್ತು ವಿಶ್ರಾಂತ ಮುಖ್ಯ ಅಭಿಯಂತರರು ಮೈಸೂರು ಅವರು ಮಾತನಾಡುತ್ತ, “ಇಂದಿನ ಮೂರು ಬೆವರು ಹನಿಗಳು ಮುಂಬರುವ ನೂರು ಕಣ್ಣೀರು ಹನಿಯನ್ನು ತಡೆಯುತ್ತವೆ” ಎಂಬ ನ್ಯಾ. ಶಿವರಾಜ ವಿ ಪಾಟೀಲರ ನುಡಿಯಂತೆ ವಿದ್ಯಾರ್ಥಿಗಳು ಈಗ ಪರಿಶ್ರಮದಿಂದ, ಶ್ರದ್ಧೆಯಿಂದ, ಚಾರಿತ್ರ್ಯನಿಟ್ಪುಕೊಂಡು ತಪಸ್ಸಿನ ಹಾಗೆ ಓದಿದಾಗ ಮುಂದೆ ಆದರ್ಶ ಬದುಕನ್ನು ನಡೆಸಬಹುದೆಂದರು.

ನ್ಯಾ. ಶಿವರಾಜ ವಿ ಪಾಟೀಲರ ಇನ್ನೊಂದು ನುಡಿಮುತ್ತು “ನಾವೇ ನಮ್ಮ ಜೀವನದ ಶಿಲ್ಪಿಗಳು.. ಏನನ್ನು ಸಾಧಿಸದೇ ಕಲ್ಲಾಗಿ ಉಳಿಯಬೇಕೇ? ಅಥವಾ ಗುರುಗಳ ಮಾರ್ಗದರ್ಶನ ಪಡೆದು ಸಾರ್ಥಕ ಜೀವನ ನಡೆಯಿಸಿ ಸಾಕಾರ ಮೂರ್ತಿಗಳಾಗಬೇಕೇ? ಈ ಆಯ್ಕೆ ನಮ್ಮದು” ಎಂಬ ನುಡಿಮುತ್ತು ಬಹಳ ಅರ್ಥಗರ್ಭಿತವಾಗಿದೆ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಂಡರೆ ಮುಂದಿನ ಬದುಕು ತಾನೇ ಹಾಳುಮಾಡಿಕೊಂಡಂತಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮವಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು.

“ನಿಜವಾದ ಶಿಕ್ಷಣವನ್ನು ಕೇವಲ ಪದವಿಗಳು ಮತ್ತು ಪ್ರಮಾಣಪತ್ರಗಳಲ್ಲಿ ನೋಡಲಾಗುವುದಿಲ್ಲ ಅದನ್ನು ಒಬ್ಬರ ವರ್ತನೆ, ನಡವಳಿಕೆ ಮತ್ತು ಕ್ರಿಯೇಗಳಲ್ಲಿ ಕಾಣಬಹುದು” ಎಂಬ ನ್ಯಾ.ಶಿವರಾಜ ವಿ. ಪಾಟೀಲ ರವರ ನುಡಿಮುತ್ತು ನೂರಕ್ಕೆ ನೂರು ಸತ್ಯ. ವಿದ್ಯೆಯೆಂಬುದು ಒಂದು ತಪಸ್ಸು, ಕಠಿಣ ಪರಿಶ್ರಮದಿಂದ ಸಾಧಕರಾಗಿ ಹೊರಹೊಮ್ಮಿ ಜೀವನ ಸಾರ್ಥಕ ಮಾಡಿಕೊಳ್ಳುವುದೇ ನ್ಯಾ. ಶಿವರಾಜ ವಿ. ಪಾಟೀಲ ರವರ ನುಡಿಮುತ್ತುಗಳ ತಾತ್ಪರ್ಯ ಎಂದು ಹೇಳಿದರು.

“ಮಕ್ಕಳು ಮಾನವೀಯ ಮೌಲ್ಯಗಳಿಗೆ, ಉತ್ತಮ ಗುಣಗಳಿಗೆ, ಜ್ಞಾನ ಸಂಪತ್ತಿಗೆ, ಪಠ್ಯಪುಸ್ತಕಕ್ಕೆ ದಾಸರಾದರೆ ಜಗತ್ತನ್ನೇ ಗೆಲ್ಲಲು ಸಾಧ್ಯ. ಅವರು ಬದುಕಿನ ನೋವು, ದುಃಖ, ಅವಮಾನಗಳನ್ನು ಮೆಟ್ಟಿ ಸಾಧಿಸಬೇಕು. ತಾನು ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಲು ಸದಾ ಪ್ರಯತ್ನಿಸಬೇಕು. ಶ್ರಮದಿಂದ ಸತತ ಪ್ರಯತ್ನ, ನಿರಂತರ ಅಧ್ಯಯನದಿಂದ ಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ತಾನು ಹಳ್ಳಿಯಲ್ಲಿ ಹುಟ್ಟಿ, ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ ಮಾಡಿದ್ದನ್ನು ತಿಳಿಸುತ್ತ, ಸಾಧಕರಿಗೆ ಯಾವುದೂ ಅಡ್ಡಿಯಾಗುವದಿಲ್ಲ ಅದಕ್ಕೆ ನಮ್ಮ ಮನಸ್ಸು ಗಟ್ಟಿಯಾಗಿರಬೇಕು. ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ಮಾಡಬಾರದು.

ಮನಸ್ಸು ಚಂಚಲವಾಗಿಸಿಕೊಳ್ಳದೆ ಉತ್ತಮ ಸಂಸ್ಕಾರ ಪಡೆದು ಅಂತಃಕರಣ ಪ್ರೀತಿ ತನ್ನದಾಗಿಸಿಕೊಳ್ಳಬೇಕು. ಪಾಲಕರನ್ನು ಗೌರವದಿಂದ ಕಾಣಬೇಕು. ಅವರ ಶ್ರಮ, ನೋವನ್ನು ಅರ್ಥಮಾಡಿಕೊಳ್ಳಬೇಕು. ಇಂದಿನ ಆಧುನಿಕತೆಯಲ್ಲಿ ಅವರನ್ನು ಮರೆಯಬಾರದು. ಅನ್ನ, ಅರಿವು, ಅಕ್ಷರ ನೀಡಿದವರನ್ನು ಸದಾ ಗೌರವಿಸಬೇಕು. ವಿದ್ಯಾರ್ಥಿಗಳು ಕೆಟ್ಟದಾರಿಯಲ್ಲಿ ನಡೆದು ಬದುಕು ಹಾಳುಮಾಡಿಕೊಳ್ಳದೆ ಸಿಕ್ಕ ಒಳ್ಳೆಯ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯಬೇಕು. ಬದುಕಿನ ವಾಸ್ತವತೆಯನ್ನು ಅರಿಯಬೇಕೆಂದು ಪ್ರೇರೇಪಿಸಿದರು.

ಮುಂದುವರೆದು ಮಾತನಾಡುತ್ತ, ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೆ ಧೈರ್ಯದಿಂದ ಎದುರಿಸಿ ಸಾಧನೆ ಮಾಡುವುದೇ ನಿಜವಾದ ಜೀವನ. ಅಸಾಧ್ಯವಾದುದು ಯಾವುದು ಇಲ್ಲ. ಛಲವಿದ್ದಲ್ಲಿ ಎಲ್ಲವೂ ಸಾಧ್ಯ. ಮೋಡದ ಮಳೆ ಹನಿ ಭೂಮಿಗೆ ಸುರಿದು ಸಮುದ್ರ ಸೇರಿ ಸಾರ್ಥಕವಾಗುವಂತೆ ಮಕ್ಕಳು ಗುರು-ಹಿರಿಯರ ಮಾರ್ಗದರ್ಶನ ಪಡೆದು ಜ್ಞಾನದ ದಾಸರಾಗಿ ಬದುಕು ಸಾರ್ಥಕಗೊಳಿಸಿಕೊಳ್ಳಬೇಕೆಂದು ತಿಳಿಸುತ್ತ ಹಲವಾರು ಸಾಧಕರ ಜೀವನ ಸಾಧನೆಯನ್ನು ತಿಳಿಸಿದರು. ಶಿಕ್ಷಣದ ಮಹತ್ವ ಸಂಸ್ಕಾರಯುತ ಬದುಕು ಮಾನವೀಯ ಮೌಲ್ಯಗಳನ್ನು ಕುರಿತು ತಿಳಿಸಿದರು.

ಕ್ಷಣಿಕ ಸುಖಕ್ಕಾಗಿ ಕೆಟ್ಟ ವಸ್ತುವಿನ ಆಕರ್ಷಣೆಗೆ ಒಳಗಾಗಿ ಜೀವನ ವ್ಯರ್ಥವಾಗಿಸಿಕೊಳ್ಳಬಾರದು. ಸೃಜನಶೀಲತೆಯನ್ನು, ಉತ್ತಮ ಜ್ಞಾನವನ್ನು ಹೊಂದಿರಬೇಕು. ಹೂವು ತನ್ನ ಪರಿಮಳವನ್ನು ಎಲ್ಲೆಡೆ ಪಸರಿಸುವಂತೆ ನಿಮ್ಮ ಸಾಧನೆಯ ಕೀರ್ತಿ ಹರಡಬೇಕು. ಉತ್ಕøಷ್ಟತೆಯನ್ನು ಹೊಂದಬೇಕು. ಬದುಕಿಗೆ ಬೇಕಾದ ಸಂಸ್ಕøತಿಯನ್ನು ಹೊಂದಿರಬೇಕು. ಒಬ್ಬ ಶಿಲ್ಪಿ ಕಲ್ಲಿನಲ್ಲಿನ ಬೇಡವಾದ ಭಾಗವನ್ನು ತೆಗೆದು ಸುಂದರ ಶಿಲ್ಪವನ್ನು ನಿರ್ಮಿಸುವಂತೆ, ವಿದ್ಯಾರ್ಥಿಗಳು ಕೆಟ್ಟ ವಿಚಾರಗಳನ್ನು ತೆಗೆದು ಉತ್ತಮರ ಸಂಘವನ್ನು ಮಾಡಬೇಕು. ಸರ್ವಜ್ಞ ಕಾಲೇಜು ಮಕ್ಕಳಿಗೆ ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಸಂಸ್ಕಾರ ನೀಡುತ್ತಿರುವದು ಶ್ಲಾಘನೀಯವಾದುದು ಎಂದು ಪ್ರೇರೇಪಿಸಿದರು.

ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಮಾತನಾಡುತ್ತ, ನ್ಯಾ. ಶಿವರಾಜ ವಿ ಪಾಟೀಲರ ನುಡಿ ಕಿರಣಗಳನ್ನು ಅಳವಡಿಸಿಕೊಂಡು ಉನ್ನತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅನುಸೂಯಾ ಶಂಕರ, ಕುಮಾರಿ ಮಾಧುರಿ, ಪ್ರಶಾಂತ ಕುಲಕರ್ಣಿ, ವಿನುತಾ ಆರ್.ಬಿ., ಪ್ರಭುಗೌಡ ಸಿದ್ಧಾರೆಡ್ಡಿ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೀಣಾ ಅತಿಥಿಗಳನ್ನು ಪರಿಚಯಿಸಿದರು. ಕು. ನಾಗವೇಣಿ ವಂದಿಸಿದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago