ಕಲಬುರಗಿ: ಜಾತ್ರೆಗಳು ಮನುಷ್ಯನಿಗೆ ಸನ್ಮಾರ್ಗದ ದಾರಿ ತೋರುವುದಲ್ಲದೆ ಒಬ್ಬರಿಗೊಬ್ಬರ ಮನಸ್ಸು ಗಟ್ಟಿಗೊಳಿಸುತ್ತವೆ ಎಂದು ಪುರಾಣ ಪುಟಗಳಾದ ಸಂಗಮೇಶ ಶಾಸ್ತ್ರಿ ಮಾಶಾಳ ಹೇಳಿದರು.
ತಾಜ ಸುಲ್ತಾನಪುರ ಗ್ರಾಮದಲ್ಲಿ ಶ್ರೀ ರಾಮಲಿಂಗ ಚೌಡೇಶ್ವರಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ಹಾಗೂ ಅಧ್ಯಾತ್ಮಿಕ ಚಿಂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಆಧುನಿಕ ಯುಗದಲ್ಲಿ ಮನುಷ್ಯನು ದುಡ್ಡಿನಿಂದ ಶ್ರೀಮಂತನಾದರೂ ಸಂಸ್ಕಾರದ ಕೊರತೆಯಿಂದ ಜೀವನ ಅದೋಗತಿಗೆ ತಲುಪಿ ಅತೃಪ್ತಿಯ ಜೀವನ ಸಾಗಿಸುತ್ತಿದ್ದಾನೆ. ಗ್ರಾಮೀಣ ಪ್ರದೇಶದಲ್ಲಿ ಜಾತ್ರೆ, ಆಧ್ಯಾತ್ಮಿಕ ಕಾರ್ಯಕ್ರಮಗಳು ಮನುಷ್ಯನನ್ನು ಒಂದುಗೂಡಿಸಿ ಜಾತ್ಯಾತೀತ, ಪಕ್ಷಾತೀತ ಸಮಾಜ ಕಟ್ಟಲು ಪ್ರೇರಣೆಯಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಇದೆ ಸಂದರ್ಭದಲ್ಲಿ ಕಲಾವಿದರಾದ ಸಂಗಮೇಶ ಶಾಸ್ತ್ರಿ ಮಾಶಾಳ, ನಾಗರಾಜ ಪಾಟೀಲ, ಜನಪದ ಕಲಾವಿದ ರಾಜು ಹೆಬ್ಬಾಳ, ಶಿವಾನಂದ ಹಿತ್ತಲಶಿರೂರ, ವಿನೋದಕುಮಾರ ದಸ್ತಾಪುರ ಅವರಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ, ಮಾಜಿ ಶಾಸಕಿಯರಾದ ಅರುಣಾದೇವಿ ಸಿ ಪಾಟೀಲ ರೇವೂರ,ಗ್ರಾಮ ಪಂಚಾಯತ ಅಧ್ಯಕ್ಷರಾದ ವಿನೋದ ಕುಮಾರ ಸಂಘ, ಕಮಿಟಿಯ ಅಧ್ಯಕ್ಷರಾದ ಗುರುರಾಜ ಚಿಮದಿ, ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ, ಗ್ರಾಮ ಪಂಚಾಯತ ಸದಸ್ಯರಾದ ರವಿಕುಮಾರ ಶಹಾಪುರ ಕರ, ಗುರುಶಾಂತ ಹಾಂವಾ, ಶಾಂತಕುಮಾರ ಮದನಕರ, ಗುರು ಮಗಿ, ಭಾಗಣ್ಣ ಜವರಕರ, ಸಂಜೀವಕುಮಾರ ಜವರಕರ, ಭರತ ಹೊಳಕುಂದಿ ಪ್ರಮುಖರಾದ ಅಣ್ಣಪ್ಪಾ ಕಂತಿ, ಭೀಮಣ್ಣ ಕುದುರಿ, ಶಿವಕುಮಾರ ಧಾನಪಗೋಳ, ಚಂದ್ರಶೇಖರ ಪಾಟೀಲ, ಸುಭಾಷ ಓಗಿ, ಚಂದ್ರಶೇಖರ ಅಂಬಲಗಿ, ಸೂರ್ಯಕಾಂತ ಚನ್ನಬಟ್ಟಿ, ಶರಣು ಕುದುರಿ, ಅರ್ಜುನ ಗೊಬ್ಬುರಕರ,ಯಲ್ಲಾಲಿಂಗ ಖೇಳಗಿ ಸೇರಿದಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕ ಜನರು ಭಾಗವಹಿಸಿದ್ದರು. ಶ್ರೀ ರಾಮಲಿಂಗ ಚೌಡೇಶ್ವರಿ ಜಾತ್ರಾ ಮಹೋತ್ಸವ ನಿಮಿತ್ಯ ಚೌಡೇಶ್ವರಿ ಮೂರ್ತಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅನೇಕ ವಾದ್ಯಗಳೊಂದಿಗೆ ಭವ್ಯವಾದ ಮೆರವಣಿಗೆ ಜರುಗಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…