ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಶಾಂತನಗರ ಮಜ್ಜಿದ್ ವೃತ್ತದಿಂದ ಬಸವನಗರದವರೆಗೆ ವಿದ್ಯುತ್ ಕಂಬ ಹಾಗೂ ದೀಪಗಳನ್ನು ಸಮಾಜ ಸೇವಕ ಮಣಿಕಂಠ ರಾಠೋಡ ಅಳವಡಿಸಿದ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ಬಸವ ನಗರದ ನಿವಾಸಿಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಈರಣ್ಣ ಕಾರ್ಗಿಲ್, ವಿಧಾನಸಭೆ ಚುನಾವಣೆಯ ಮುಂಚೆಯೇ ಶಾಂತನಗರ ಮಜ್ಜಿದ್ ವೃತ್ತದಿಂದ ಬಸವನಗರದವರೆಗೆ ವಿದ್ಯುತ್ ದೀಪವಿಲ್ಲದೇ ಇಲ್ಲಿನ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.ಅಲ್ಲದೇ ಜನರು ಭಯಬೀತರಾಗುತ್ತಿದ್ದಾರೆ.ಆದ್ದರಿಂದ ಬೀದಿ ದೀಪಗಳ ಕೆಲಸ ಮಾಡಿ ಕೊಡಬೇಕೆಂದು ಮನವಿ ಮಾಡಿದರು.
ಆನರ ಮನವಿಗೆ ಸ್ಪಂದಿಸಿದ ಮಣಿಕಂಠ ರಾಠೋಡ ಅವರು ತಕ್ಷಣವೇ ವ್ಯಯಕ್ತಿಕವಾಗಿ 1.5 ಲಕ್ಷ ರೂ. ಹಣದಲ್ಲಿ 12 ಬೀದಿದೀಪಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.ಅವರು ಮಾಡಿದ ಉಪಕಾರವನ್ನು ಮನುಷ್ಯರಾದ ನಾವುಗಳು ಸ್ಮರಿಸಲೇಬೇಕು.ಆ ನಿಟ್ಟಿನಲ್ಲಿ ಅವರನ್ನು ಬಸವ ನಗರದಿಂದ ಸನ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಸವ ನಗರದ ಬಸವ ಸಮಿತಿಯ ಅಧ್ಯಕ್ಷ ನೀಲಕಂಠ ಮೂದೋಳಕರ್,ಬಸವ ಸಮಿತಿಯ ಮಾಜಿ ಅಧ್ಯಕ್ಷ ಅಮೃತ ಮಾನಕರ್, ಉಮೇಶ್ ಪಾಟೀಲ್, ಮಲ್ಲಿಕಾರ್ಜುನ್ ಘಾಲಿ, ಯಲ್ಲಾಲಿಂಗ ನಾಗೂರೆ, ಗೋಪಾಲ್ ರಾಥೋಡ್, ಮಲ್ಲಿಕಾರ್ಜುನ ಇಟಗಿ, ಸಿದ್ದು ಅಲ್ಲೂರ್, ಸುನೀಲ ಭಗತ್, ಶರಣಪ್ಪ ಸಣಮೋ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…