ಬಿಸಿ ಬಿಸಿ ಸುದ್ದಿ

ರೈತರ ಅರಣ್ಯ ಕೃಷಿಗೆ ಸಸಿಗಳ ಬೆಲೆ ಏರಿಕೆಯ ಬೆಂಕಿ: ಆಕ್ರೋಶ

ಆಳಂದ: ಬರುವ ಮುಂಗಾರು ಹಂಗಾಮು ಅರಣ್ಯ ಕೃಷಿಗೆ ಪೂರಕ ವಾತಾವರಣ ಹಿನ್ನೆಲೆಯಲ್ಲಿ ಈಗಿನಿಂದಲೆ ಇಲ್ಲಿನ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಪ್ರತ್ಯೇಕವಾಗಿ ಭರದ ಸಿದ್ಧತೆ ಮಾಡಿಕೊಳ್ಳತೊಡಗಿದೆ.

ಈ ನಡುವೆ ಅರಣ್ಯ ಕೃಷಿಗೆ ಮುಂದಾಗುವ ರೈತರಿಗೆ ಅರಣ್ಯ ಇಲಾಖೆ ನೀಡುವ ಸಸಿಗಳಲ್ಲಿ ಭಾರೀ ಬೆಲೆ ಏರಿಕೆಯ ಮಾಡಿದ್ದರಿಂದ ಒಂದು ಹಂತದಲ್ಲಿ ಸರ್ಕಾರವೇ ಅರಣ್ಯ ಕೃಷಿಗೆ ಬೆಂಕಿಯಿಟ್ಟಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗತೊಡಗಿದೆ.

ಅರಣ್ಯ ಕೃಷಿಗೆ ಮುಂದಾಗುವ ಅನೇಕರಿಗೆ ಈ ಬಾರಿ ಇಲಾಖೆಯ ಸಸಿಗಳ ವಿತರಣೆಯಲ್ಲಿ ಬೆಲೆ ಏರಿಕೆ ಮಾಡಿದ್ದರಿಂದ ರೈತರಿಗೆ ಸಸಿಗಳು ಖರೀದಿಸಲು ಹಿಂದೇಟಾಗುತ್ತಿದೆ. ಹೀಗಾಗಿ ಈ ಬಾರಿ ಅರಣ್ಯ ಕೃಷಿಗೆ ಕುಸಿಯುವ ಆತಂಕವೂ ಎದುರಾಗಿದ್ದು ಪರಿಸರ ಹೆಚ್ಚಿಸುವ ಬದಲು ಸರ್ಕಾರ ಸಾಮಾಜಿಕ ಹೊಣೆಗಾರಿಕೆ ಮರೆತು ತನ್ನ ಆರ್ಥಿಕ ನಷ್ಟ ತಪ್ಪಿಸಲು ಸಸಿಗಳ ಮೇಲೆ ಬೆಲೆ ಏರಿಕೆ ಕ್ರಮವನ್ನು ಅನುಸರಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಹಸವಾಗಿದೆ.

ಪ್ರತಿವರ್ಷ ಅರಣ್ಯ ಇಲಾಖೆಯಿಂದ ಪ್ರೋತ್ಸಾಹಧನ ಅಡಿಯಲ್ಲಿ ತಮಗೆ ಬೇಕಾದ ಸಸಿಗಳನ್ನು ಪಡೆದದು ಅರಣ್ಯ ಕೃಷಿ ಕೈಗೊಳ್ಳಲು ಮುಂದಾಗುವ ರೈತರಿಗೆ ಇಲಾಖೆಯಿಂದಲೇ ಸಸಿಗಳ ಬೆಲೆ ಇದೇ ವರ್ಷ ದುಪ್ಪಟ್ಟಾಗಿಸಿದ್ದರಿಂದ ರೈತರು ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ.

ಕಳೆದ ಸಾಲಿನ ದರಕ್ಕೆ ಹೊಲಿಸಿದರೆ 3 ರೂಪಾಯಿಗೆ ಇದ್ದ ಸಸಿಗಳನ್ನು ಈ ಬಾರಿ ಅರಣ್ಯ ಇಲಾಖೆಯ ಮೂಲಕ ಸರ್ಕಾರವು ಸಸಿಯೊಂದಕ್ಕೆ 23 ರೂಪಾಯಿಗೆ ಬೆಲೆ ಹೆಚ್ಚಿಸಿದ್ದರಿಂದ 300ರಿಂದ 400 ಸಸಿಗಳನ್ನು ಖರೀದಿಸಿ ನೆಡಲು ರೈತರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಸಾರ್ವಜನಿಕರಿಗೆ ಇಕೋ ಬಜೆಟ್ ಅಡಿಯಲ್ಲಿ ಒಂದು ರೂಪಾಯಿಗೆ ವಿತರಣೆ ಆಗುತ್ತಿದ್ದ ಸಸಿಗಳ ಬೆಲೆ ಈಗ 6 ರೂಪಾಯಿ ಹೆಚ್ಚಿಸಿದ್ದು ಸಹ ಅರಣ್ಯ ಕೃಷಿಗೆ ಮುಂದಾದವರಿಗೆ ಆರ್ಥಿಕ ಹೊರೆಯಾಗಿ ಕೈಸುಟ್ಟುಕೊಳ್ಳುವಂತೆ ಮಾಡಿದೆ.

ಈ ಕುರಿತು ಕೂಡಲೇ ಸರ್ಕಾರ ಎಚ್ಚೇತುಕೊಂಡು ಅರಣ್ಯ ಕೃಷಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಲು ಹೆಚ್ಚಿಸಿದ ಸಿಸಿಗಳ ಬೆಲೆಯನ್ನು ಹಿಂಪದೆದು ಮೊದಲಿನ ಬೆಲೆಯಲ್ಲಿ ನೀಡಿದರೆ ಅರಣ್ಯ ಕೃಷಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ರೈತರು ಹೇಳಿಕೊಂಡಿದ್ದಾರೆ. ಸರ್ಕಾರ ಅರಣ್ಯ ಕೃಷಿಗೆ ಉತ್ತೇಜನ ನೀಡುಬೇಕೆ ಹೊರತು ದರ ಹೆಚ್ಚಿಸುವ ಮೂಲಕ ಅರಣ್ಯ ಕೃಷಿಗೆ ಹಿಂದೇಟು ಹಾಕುತ್ತಿರುವುದು ವಿಪರ್ಯಾಸವಾಗಿ ಮಾರ್ಪಟ್ಟಿದೆ.

ನಗರ ಹಸಿರುಕರಣ ಯೋಜನೆ ಅಡಿಯಲ್ಲಿ ಸಾರ್ವಜನಿಕ ಸ್ಥಳ ಉದ್ಯಾನವನ ಸೇರಿ ಇನ್ನಿತರ ಸ್ಥಳಗಳಲ್ಲಿ ನೆಡುವುದಕ್ಕೆ 1520 ಸಸಿಗಳು ಉತ್ಪಾದಿಸಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯಿಂದ ರಸ್ತೆ ಬದಿ ನೆಡುತೋಪ ನಡೆಸುವುದಕ್ಕಾಗಿ 6600 ಸಸಿಗಳ ಉತ್ಪಾದನೆ ಕೈಗೊಂಡು ಮಳೆಗಾಲಕ್ಕೆ ನೆಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಇದರ ಜೊತೆಯಲ್ಲೇ ಸಾರ್ವಜನಿಕರಿಗೆ ರೀಯಾತಿದರದಲ್ಲಿ ಇಕೋ ಬಜೆಟ್ ಅಡಿಯಲ್ಲಿ ವಿತರಣೆಗೆ ಮಹಾಗನಿ, ಹೆಬ್ಬೇವು, ಕರಿಬೇವು, ಬೀದಿರು, ಸಾಗವಾನಿ ಮತ್ತು ಶ್ರೀಗಂಧದಂತ 50 ಸಾವಿರ ಸಸಿಗಳು ಉತ್ಪಾದಿಸಿದ್ದು, ಪ್ರತಿ ಸಸಿಗೆ 6 ರೂಪಾಯಂತೆ ದರ ನಿಗದಿಪಡಿಸಸಿದೆ. ಕಳೆದ ಸಾಲಿನಲ್ಲಿ ಈ ಸಸಿಗೆ ಒಂದು ರೂಪಾಯಿ ಇದ್ದಿದ್ದು ಹಠಾತಾಗಿ ಸರ್ಕಾರ 6 ರೂಪಾಯಿ ಹೆಚ್ಚಿಸಿದ್ದರಿಂದ ಹೊಸ ಅರಣ್ಯ ಕೃಷಿಗೆ ಮುಂದಾಗುವ ರೈತರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.

ಸಾರ್ವಜನಿಕರ ವಿತರಣೆಗಾಗಿ ಸಸಿಗಳನ್ನು ಬೆಳೆಸುವ ಯೋಜನೆಯಲ್ಲೂ ಒಟ್ಟು ಶ್ರೀಗಂಧ, ಮಹಾಗಣ , ಬೀದಿರು, ಬೇವು, ನೆರಳೆ ಸೇರಿ ಇನ್ನಿತರ 50 ಸಾವಿರ ಸಸಿಗಳು ಉತ್ಪಾದಿಸಿದ್ದು ಇದು ಪ್ರತಿ ಸಸಿಗೆ 23 ರೂಪಾಯಿ ಇದೇ ಹಳೆಯ ದರ ಕೇವಲ 3 ರೂಪಾಯಿ ಇತ್ತು. ಇದನ್ನೇ ಮುಂದುವರೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗಿಡ,ಮರ ಬೆಳೆಸಲು ಸಿದ್ಧತೆ: ತಾಲೂಕಿನಲ್ಲಿ ಒಟ್ಟು 1505.4 ಹೆಕ್ಟೇರ್ ಕ್ಷೇತ್ರದ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಹಲವು ವರ್ಷಗಳಿಂದ ಕ್ಲಿರಿಸಿಡಿಯ ಮತ್ತು ಸ್ಥಳೀಯ ಕಾಡುಜಾತಿ ನೆಡುತೋಪು ನೆಟ್ಟು ಅರಣ್ಯ ವ್ಯಾಪ್ತಿಯ ಪೂರ್ಣಸ್ಥಳದಲ್ಲಿ ಗಿಡ,ಮರಗಳನ್ನು ಬೆಳೆಸಲಾಗಿದೆ. ಈಗ ರಸ್ತೆ ಬದಿ ಸಾರ್ವಜನಿಕ ಸ್ಥಳಗಳಲ್ಲಿ ಇಲಾಖೆಯಿಂದಲೇ ಸಸಿಗಳು ನೆಡುವ ಕಾರ್ಯ ನಡೆಯಲಿದೆ.
ಜಗನಾಥ ಕೊರಳ್ಳಿ ತಾಲೂಕು ಪ್ರಾದೇಶಿಕ ಅರಣ್ಯಾಧಿಕಾರಿಗಳು ಆಳಂದ

ಹಸಿರೀಕರಣಕ್ಕೆ ಪ್ರೋತ್ಸಾಹ ಅಗತ್ಯ: ನೆರೆಯ ರಾಜ್ಯಗಳಿಗೆ ಹೊಲಿಸಿದರೆ ಅರಣ್ಯ ಬೆಳೆಸುವಲ್ಲಿ ಕನಾಟಕ ತನ್ನತ್ತ ನೋಡುವಂತೆ ಮಾಡಿತ್ತಾದರು. ಇದೇ ಸಲ ತನ್ನ ಆರ್ಥಿಕ ಹೊರೆಯನ್ನು ತಗ್ಗಿಸಲು ಇಲಾಖೆಯ ಬಹುತೇಕ ಮುಂದಾಗಿದ್ದು, ರಿಯಾಯಿತಿ ದರದಲ್ಲಿನ ಸಸಿಗಳ ಬೆಲೆಯನ್ನು ಹೆಚ್ಚಿಸಿದೆ. ಆದರೆ ಬೆಲೆ ಹೆಚ್ಚಳದಿಂದ ನೂರಾರು ಸಸಿಗಳನ್ನು ಖರೀದಿಸಲು ಮುಂದಾಗುವ ಜನರಿಗೆ ಆರ್ಥಿಕ ಹೊರೆಯಾಗಿ ಅರಣ್ಯ ಕೃಷಿಯನ್ನೇ ಬಿಡುವ ಸಾಧ್ಯತೆ ಇರುತ್ತದೆ. ಅರಣ್ಯ ಕೃಷಿ ಹೆಚ್ಚಳ ಮಾಡಲು ಆರ್ಥಿಕ ಲಾಭ ನೋಡದೆ ಸಾಮಾಜಿಕ ಹೊಣೆಗಾರಿಕೆಯನ್ನೇ ಮರೆಯುವ ಮೂಲಕ ಬೆಲೆ ಇಳಿಕೆ ಮಾಡಿ ಅರಣ್ಯ ಕೃಷಿಗೆ ಪ್ರೋತ್ಸಾಹಿಸಲು ಇಲಾಖೆ ಮತ್ತು ಸರ್ಕಾರ ಮುಂದಾಗಬೇಕು. ಪರಿಸರ ಪ್ರೇಮಿಗಳು ಮತ್ತು ರೈತ ಸಮುದಾಯ

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago