ಬಿಸಿ ಬಿಸಿ ಸುದ್ದಿ

ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಅಲ್ಲಮಪ್ರಭು ಪಾಟೀಲ

ಕಲಬುರಗಿ: ನಗರದ ಸ್ವಚ್ಚತೆ ಕಾಪಾಡುವ ಮೂಲಕ ಜನ ಜೀವನ ಆರೋಗ್ಯ ವೃದ್ಧಿ ಹಾಗೂ ಕ್ಷೇತ್ರದ ಅಭಿವೃದ್ಧಿ ಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಸಹಕಾರ ನೀಡಬೇಕು. ಇಲ್ಲದಿದ್ದಲ್ಲಿ ಇಲ್ಲಿಂದ ನೀವು ಜಾಗ ಖಾಲಿ ಮಾಡಬೇಕಾಗುತ್ತದೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ನೂತನ ಶಾಸಕ ಅಲ್ಲಮಪ್ರಭು ಪಾಟೀಲ ಖಡಕ್ ಎಚ್ವರಿಕೆ ನೀಡಿದರು.

ನಗರದ ಟೌನ್ ಹಾಲ್ ನಲ್ಲಿ ಶುಕ್ರವಾರ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇನ್ನೇನು ಮಳೆಗಾಲ ಆರಂಭವಾಗುವುದಿಂದ
ನಗರದ ಡ್ರೈನೇಜ್, ಕುಡಿವ ನೀರು ಹಾಗೂ ಸ್ವಚ್ಛತೆ ಕಾಪಾಡಬೇಕು ಎಂದು ಸೂಚಿಸಿದರು.

ಕಳೆದ ಬಾರಿ ಮಳೆ ಬಂದಾಗ ನಗರದ ದತ್ತ ಕಾಲೊನಿಯಲ್ಲಿ ನೀರು ನಿಂತು ಕೆರೆ ನಿರ್ಮಾಣ ಆಗಿತ್ತು. ಕೋರ್ಟ್ ರಸ್ತೆ, ಗೋಲ್ಡ್ ಹಬ್ ಎದುರು ಕೆರೆ ನಿರ್ಮಾಣ ಆಗುತ್ತದೆ. ಲಾಲಗೇರಿ ಕ್ರಾಸ್ ಹತ್ತಿರ ಓಡಾಡುವುದು ಸಾಧ್ಯವಿಲ್ಲದಂತೆ ಆಗುತ್ತದೆ. ಹಳೆ ಜೇವರ್ಗಿ ರಸ್ತೆಯ ಅಂಡರ್ ಬ್ರಿಡ್ಜ್ ಹಾಗೂ ಪಿಡಿಎ ಕಾಲೇಜ್ ಹತ್ತಿರ ಅಂಡರ್ ಬ್ರಿಡ್ಜ್ ನೀರಿನಿಂದ ಆವೃತ್ತವಾಗಿರುತ್ತವೆ ಎಂದು ಪಾಲಿಕೆ ಕಮಿಷನರ್ ಭೀಮಾಶಂಕರ ಪಾಟೀಲ ಅವರ ಗಮನ ಸೆಳೆದರು.

ಇದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕು. ನಗರದಲ್ಲಿ ಹಲವು ಕಡೆ ಅವೈಜ್ಞಾನಿಕ ಕಾಮಗಾರಿ ನಡೆದಿವೆ. ಅದರಿಂದ ಇದೀಗ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜನರ ಹಲವು ಆಶೋತ್ತರಗಳನಿಟ್ಟು ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂದರು.

ಎಲ್ ಆ್ಯಂಡ್ ಟಿ ಮೇಲೆ ದೂರುಗಳ ಸುರಿಮಳೆ: ಇಡೀ ಸಭೆಯ ಪ್ರತಿ ಸದಸ್ಯರು ನಗರದಲ್ಲಿ 24*7 ಕುಡಿವ ನೀರಿನ ಕಾಮಗಾರಿ ನಡೆಸುತ್ತಿರುವ ಎಲ್ ಆ್ಯಂಡ್ ಟಿ ಕಂಪನಿ ಕಾರ್ಯ ವೈಖರಿ ಬಗ್ಗೆ ಹರಿ ಹಾಯ್ದದದ್ದು ಕಂಡು ಬಂತು. ನಗರದಲ್ಲಿ ಅವು ಮಾಡುವ ಕೆಲಸ ಯಾವುದೆಂದು ಯಾರಿಗೂ ತಿಳಿಯುತ್ತಿಲ್ಲ. ಸರಕಾರಿ ಇಲಾಖೆ ಸರಿಯಾಗಿ ಕೆಲಸ ಮಾಡಲ್ಲ ಎಂದು ಖಾಸಗಿಯವರಿಗೆ ಕೆಲಸ ನೀಡಲಾಗುತ್ತಿದೆ. ಆದರೆ ಇಲ್ಲ ಖಾಸಗಿ ಅವರು ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳ ಮಾತು ಕೇಳಲ್ಲ. ಇಂಥವರಿಂದ ಕೆಲಸ ಮಾಡಿಸದಿರಿ ಎಂದು ಸಚಿನ್ ಶಿರವಾಳ ಆಕ್ರೋಶ ಹೊರ ಹಾಕಿದರು. ಈ ವೇಳೆ ಉತ್ತರಿಸಿದ ಪಾಲಿಕೆ ಆಯುಕ್ತ ಎಲ್ ಆ್ಯಂಡ್ ಟಿ ಅವರಿಗೆ ನಾನು ಕೇವಲ ನೋಟಿಸ್ ನೀಡಬಹುದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯರು ಮಾತನಾಡಿ, ನಗರದ ಹಲವು ಭಾಗಗಳಲ್ಲಿ ಒಳ ಚರಂಡಿ ತುಂಬಿ ಹರಿಯುತ್ತಿವೆ. ಅವುಗಳ ಬಗ್ಗೆ ಪಾಲಿಕೆ ಗಮನ ನೀಡುತ್ತಿಲ್ಲ. ಹಲವು ಕಡೆ ಮಳೆ ನೀರು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಹೀಗಾದರೆ ಈ ಬಾರಿಯೂ ಕೂಡ ಮುಂಗಾರಿನಲ್ಲಿ ಜನರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ದೂರು ಸಲ್ಲಿಸಿದರು.

ಪಾಲಿಕೆ ಆಯುಕ್ತ ಭುವನೇಶ ದೇವಿದಾಸ್ ಪಾಟೀಲ್, ಉಪ ಆಯುಕ್ತರಾದ ಆರ್.ಪಿ.ಜಾಧವ್, ಪ್ರಕಾಶ ರಜಪೂತ, ಪಾಲಿಕೆ ಸದಸ್ಯರಾದ ಸಚಿನ್ ಶಿರವಾಳ, ರೇಣುಕಾ, ವಿಶಾಲ ನವರಂಗ ಸೇರಿ ಹಲವರಿದ್ದರು.

ಕ್ಷೇತ್ರಗಳ ಪರಿಣತರನ್ನು ಕರೆಸಿ: ನಗರದಲ್ಲಿ ಹಲವು ಚರಂಡಿ, ಒಳ ಚರಂಡಿ, ರಸ್ತೆಗಳು ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರಿಂದ ಇಂದು ಸಮಸ್ಯೆ ಅನುಭವಿಸುವಂತೆ ಆಗಿದೆ. ಮುಂದಿನ ದಿನಗಳಲ್ಲಿ ಆಯಾ ಕ್ಷೇತ್ರಗಳ ಪರಿಣಿತರನ್ನು ಕರೆಸಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸಿ. ಹಣ ತರುವುದು ನನ್ನ ಕೆಲಸವಾಗಿದೆ, ಸರಕಾರವನ್ನು ಕಾಡಿ ಬೇಡಿ ಅನುದಾನ ನಾನು ತರುತ್ತೇನೆ ಎಂದು ಅಲ್ಲಮ ಪ್ರಭು ಪಾಟೀಲ್ ಹೇಳಿದರು.

ಇದಕ್ಕೆ ಉತ್ತರಿಸಿದ ಕಮಿಷನರ್ ಈಗಾಗಲೇ 150 ಕೋಟಿ ರೂ. ನೀಲ ನಕ್ಷೆ ತಯಾರಿ ಮಾಡಲಾಗಿದೆ ಎಂದು ಹೇಳಿದರು. 150 ಕೋಟಿ ಏಕೆ ಅದಕ್ಕಿಂತ ಹೆಚ್ಚಿನದನ್ನು ಮಾಡಿ, ಒಟ್ಟಾರೆಯಾಗಿ ಅಭಿವೃದ್ಧಿ ಎಂಬುದು ಬರಿ ಬಾಯಿ ಮಾತಿನಲ್ಲಿ ಬೇಡೆ ಕಣ್ಣಿಗೆ ಕಾಣುವಂತೆ ಜನರಿಗೆ ಅನುಕೂಲ ಆಗುವಂತೆ ಮಾಡೋಣ ಎಂದು ಹೇಳಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

24 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago