ಬೀದರ: ಸಿದ್ಧರಾಮಯ್ಯನವರ ನೇತೃತ್ವದ ನೂತನ ಸರಕಾರದ ಮೇಲೆ ಬೀದರ ಜಿಲ್ಲೆಯ ರಚನಾತ್ಮಕ ಪ್ರಗತಿಯ ಬಗ್ಗೆ ಜಿಲ್ಲೆಯ ಜನಮಾನಸ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ನೂತನ ಸಂಪುಟದಲ್ಲಿ ಬೀದರ ಜಿಲ್ಲೆಯಿಂದ ಈಶ್ವರ ಖಂಡ್ರೆಯವರು ಮತ್ತು ರಹಿಂ ಖಾನ್ರವರು ನೂತನ ಸಚಿವರಾಗಿರುವುದು ಉಭಯ ಸಚಿವರು ಈ ಹಿಂದೆಯೂ ಸಚಿವರಾಗಿ ಕಾರ್ಯನಿರ್ವಹಿಸಿರುವುದರಿಂದ, ಅಪಾರ ಅನುಭವ ಹೊಂದಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿತಿರುವ ಸಚಿವರು ಬೀದರ ಜಿಲ್ಲೆಯ ರಚನಾತ್ಮಕ ಪ್ರಗತಿಯ ಬಗ್ಗೆ ಗಂಭೀರವಾಗಿ ಪರಿಗಣಿಸಿ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸುವ ಮೂಲಕ ಕಾಲಮಿತಿಯಲ್ಲಿ ಅಭಿವೃದ್ಧಿ ಕಾರ್ಯಗಳು, ಕಾರ್ಯಾಚರಣೆ ರೂಪದಲ್ಲಿ ಕೈಗೊಳ್ಳಬೇಕೆಂದು ವಿವಿಧ ಸಮಿತಿಯ ಸದಸ್ಯರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದ ಹೋರಾಟಗಾರರು ಆಗ್ರಹಿಸಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸಂವಿಧಾನದ 371ನೇ(ಜೆ) ಕಲಂ ತಿದ್ದುಪಡಿ ಮಾಡಿ ಭಾರತ ಸರಕಾರ ಜಾರಿಗೆ ತಂದಿದೆ. ಇದರ ಅನ್ವಯ ರಾಜ್ಯ ಸರಕಾರ ನಿಯಮಗಳನ್ನು ರೂಪಿಸಿ, ಸಮಗ್ರ ಅಭಿವೃದ್ಧಿಗೆ ಬದ್ಧತೆ ಪ್ರದರ್ಶಿಸಬೇಕಾಗಿದೆ. ಪ್ರಸ್ತುತವಾಗಿ ವಿಶೇಷ ಸ್ಥಾನಮಾನದಡಿ ಶೈಕ್ಷಣಿಕ ಪ್ರವೇಶಗಳು, ನೇಮಕಾತಿಗಳು, ಮುಮ್ಬಡ್ತಿಗಳು ಮತ್ತು ಕೆ.ಕೆ.ಆರ್.ಡಿ.ಬಿ ಯಿಂದ ಸೀಮಿತ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ 371ನೇ(ಜೆ) ಕಾನೂನು ಉಪಯೋಗವಾಗುತ್ತಿದೆ. ನೂತನ ಸರಕಾರ 371ನೇ(ಜೆ) ಕಲಂ ಅಡಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಬಗ್ಗೆ ನಿಯಮಗಳನ್ನು ರೂಪಿಸಿ, ಕಾಲಮಿತಿಯಲ್ಲಿ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನೆ ನಿವಾರಣೆ ಮಾಡುವುದು ಅತಿ ಅವಶ್ಯವಾಗಿದೆ. ರೈತರ, ಸಂತ್ರಸ್ತರು ಸೇರಿದಂತೆ, ಎಲ್ಲಾ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ 371ನೇ(ಜೆ) ಕಲಂ ಬಲಿಷ್ಠ ರಾಮಬಾಣವಾಗಿದ್ದರೂ ಸಹ ಅದರ ಪ್ರಯೋಗವಾಗದೇ ಇರುವುದು ಖೇದಕರವಾದ ವಿಷಯವಾಗಿದೆ. ನೂತನ ಸರಕಾರ ಈ ವಿಷಯಕ್ಕೆ ಸವಾಲಾಗಿ ಸ್ವೀಕರಿಸಲು ಒತ್ತಾಯಿಸಲಾಗುತ್ತದೆ.
ಸಿದ್ಧರಾಮಯ್ಯ ನೇತೃತ್ವದ ಸರಕಾರಕ್ಕೆ ಮತ್ತು ಕಲ್ಯಾಣ ಕರ್ನಾಟಕದ ಎಲ್ಲಾ ನೂತನ ಸಚಿವರಿಗೆ ಅದರಲ್ಲೂ ವಿಶೇಷವಾಗಿ ಬೀದರ ಜಿಲ್ಲೆಯ ಉಭಯ ಸಚಿವರಾದ ಈಶ್ವರ ಖಂಡ್ರೆ ಮತ್ತು ರಹಿಂಖಾನ್ ರವರಿಗೆ ಈ ಕೆಳಕಂಡ ಪ್ರಮುಖ ವಿಷಯಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಸವಾಲಾಗಿ ಸ್ವೀಕರಿಸಿ, ಕಾಲಮಿತಿಯಲ್ಲಿ ನಿವಾರಣೆಗೆ ಆಗ್ರಹಿಸಿದೆ.
ಸುಮಾರು 11 ತಿಂಗಳುಗಳಿಂದ ಕಾರಂಜಾ ಸಂತ್ರಸ್ತರು ನ್ಯಾಯಯುತವಾದ ಬೇಡಿಕೆಗೆ ಮಾನವಿಯತೆಯ ಮಾನದಂಡದಂತೆ, ಈಡೇರಿಸಲು ನಡೆಸುತ್ತಿರುವ ಹೋರಾಟಕ್ಕೆ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು. ಪ್ರಸ್ತುತ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸಲು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ, ಕಾಲಮಿತಿಯಲ್ಲಿ ಸಕರಾತ್ಮಕವಾಗಿ ಸ್ಪಂದನೆ ನೀಡಿ, ಸಂತ್ರಸ್ತರಿಗೆ (ಒನ್ ಟೈಮ್ ಸೆಟ್ಲಮೆಂಟ್ ಮಾನದಂಡದಂತೆ) ವೈಜ್ಞಾನಿಕ ಪರಿಹಾರ ಒದಗಿಸಿಕೊಡಬೇಕು. ಪ್ರಸ್ತುತ 371ನೇ(ಜೆ) ಕಲಂ ನಿಯಮವಳಿಗಳನ್ನು ಅವಲೋಕಿಸಿ ಪರಿಷ್ಕರಣೆ ಮಾಡಬೇಕು. ಅಷ್ಟೇ ಅಲ್ಲದೇ ಪ್ರತಿ ವರ್ಷ ನಿಯಮಾವಳಿಗಳಿಗೆ ಪರಿಷ್ಕರಣೆ ಮಾಡಿ ಕಲ್ಯಾಣ ಕರ್ನಟಕದ ವ್ಯಾಪಕ ಕ್ಷೇತ್ರದ ಅಭಿವೃದ್ಧಿಗೆ ನಿಯಮಗಳನ್ನು ರೂಪಿಸಬೇಕು.
ನೂತನ ಸರಕಾರದ ಸಚಿವರಾದ ಪ್ರೀಯಾಂಕ್ ಖರ್ಗೆಯವರು ಈಗಾಗಲೇ ಪ್ರಕಟಿಸಿರುವಂತೆ ಕೆ.ಕೆ.ಆರ್.ಡಿ.ಬಿ.ಗೆ ಮಂತ್ರಿಗಳನ್ನೇ ಸರದಿವಾರು ಅಧ್ಯಕ್ಷರನ್ನಾಗಿ ಮಾಡಬೇಕು. ಅದರಂತೆ 371ನೇ(ಜೆ) ಕಲಂ ಸಂಪುಟ ಉಪ ಸಮಿತಿಗೆ ಕಲ್ಯಾಣ ಕರ್ನಾಟಕದ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು. ಬೀದರ, ಕಲಬುರಗಿ ಜಿಲ್ಲೆಯ ನೀರಾವರಿ ಯೋಜನೆಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕೃಷ್ಣಾ ಭಾಗ್ಯ ಜಲ ನಿಗಮದಡಿ ಸೇರಿಸಬೇಕು. ಈಗಾಗಲೇ ಕೇಂದ್ರ ಸರಕಾರ ಕೃಷ್ಣಾ ಗೋದಾವರಿ ಕೊಳದ ಯೋಜನೆಗಳಿಗೆ ಹೈದ್ರಾಬಾದದಲ್ಲಿ ಒಂದೇ ಆಯುಕ್ತಾಲಯ ಕಚೇರಿ ಅಸ್ತಿತ್ವಕ್ಕೆ ತಂದಿದೆ. ಅದಕ್ಕೆ ಪೂರಕವಾಗಿ ಎರಡು ಜಿಲ್ಲೆಗಳ ನೀರಾವರಿ ಯೋಜನೆಗಳು (ಕಾರಂಜಾ, ಭೀಮಾಮ್, ಮುಂತಾಗಿ ಎಲ್ಲಾ ಯೋಜನೆಗಳು) ಕೆ.ಬಿ.ಜೆ.ಎನ್.ಎಲ್.ಗೆ ಸೇರಿಸಲು ಕಲ್ಯಾಣದ ಸಚಿವರು ಸವಾಲಾಗಿ ಸ್ವೀಕರಿಸಲು ಆಗ್ರಹಿಸಲಾಗುತ್ತದೆ.
ಕಾರಂಜಾ ನೀರಾವರಿ ಯೋಜನೆಗೆ ಹೆಚ್ಚುವರಿಯಾಗಿ ಭೂಮಿ ಸ್ವಾಧೀನಪಡಿಸಿಕೊಂಡ ನಂತರ, ಫಲಾನುಭವಿಗಳಿಗೆ ಭೂಸ್ವಾಧೀನ ಇಲಾಖೆ ಕಚೇರಿ ಮತ್ತು ನೀರಾವರಿ ನಿಗಮ ಕಚೇರಿಯಲ್ಲಿ ಸಕಾಲದಲ್ಲಿ ಪರಿಹಾರ ಸಿಗದೇ ಕಚೇರಿಯ ಆಡಳಿತ ವ್ಯವಸ್ಥೆ ನಿರ್ಲಕ್ಷತನ ಮತ್ತು ಮಲತಾಯಿ ಧೋರಣೆ ತೋರುತ್ತಿದೆ. ಅಷ್ಟೇ ಅಲ್ಲದೇ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಮಧ್ಯವರ್ತಿಗಳು ಸುಮಾರು 10 ರಿಂದ 15% ಪ್ರತಿಶತ ಹಣ ಸಂತ್ರಸ್ಥರಿಂದ ಕಮಿಷನ್ ಪಡೆದು ಉಭಯ ಕಚೇರಿ ಅಧಿಕಾರಿಗಳೊಂದಿಗೆ ಶಾಮಿಲಾಗಿ ಅವ್ಯವಹಾರ ನಡೆಸುತ್ತಿದ್ದಾರೆ. ಈ ಬಗ್ಗೆ ಜಲಸಂಪನ್ಮೂಲ ಸಚಿವರು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಬೀದರ ಜಿಲ್ಲೆಯ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಭಯ ಕಚೇರಿಗಳ ಎದುರು ಸಮಿತಿಯಿಂದ ಹೋರಾಟ ನಡೆಸಲಾಗುವುದು.
2021-22 ರಲ್ಲಿ ಸುಮರು ಒಂದು ಕೋಟಿ ಹಣ ವೆಚ್ಚ ಮಾಡಿ ಕಾರಂಜಾ ನೀರಾವರಿ ಯೋಜನೆಗೆ ಜಮೀನು ನೀಡಿದ ಪ್ರದೇಶದ ಸರ್ವೆ ಕಾರ್ಯವನ್ನು ಡ್ರೋನ್ ಮುಖಾಂತರ ಕೈಗೊಳ್ಳಲಾಯಿತು. ಇದರ ವರದಿಯನ್ನು ಆಧರಿಸಿ ಸಂತ್ರಸ್ಥರಿಗೆ ಯಾವುದೇ ಸ್ಪಂದನೆ ಸಿಗದಿರುವುದು ಖೇದಕರವಾದ ವಿಷಯವಾಗಿದೆ. ಈ ಬಗ್ಗೆ ನೂತನ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಶೀಘ್ರ ನೂತನ ಸಚಿವರನ್ನು ಸಂಪರ್ಕಿಸಿ ದಿನಾಂಕ ಪಡೆದು ಸಚಿವರ ಮತ್ತು ಶಾಸಕರುಗಳ ಉಪಸ್ಥಿತಿಯಲ್ಲಿ ಸಮಿತಿಯ ವತಿಯಿಂದ ಸಮಾಲೋಚನಾ ಸಭೆಯನ್ನು ನಡೆಸಿ ಪ್ರಸ್ತಾವನೆ ಸಲ್ಲಿಸಲಾಗುವುದು. ಬೀದರ ಜಿಲ್ಲೆಯಿಂದ ಸಂಪುಟ ದರ್ಜೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಈಶ್ವರ ಖಂಡ್ರೆಯವರು ಮತ್ತು ರಹಿಂ ಖಾನ್ ರವರು ನಮ್ಮ ಬೇಡಿಕೆಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಸ್ಪಂದಿಸಲು ಈ ಪತ್ರಿಕಗೋಷ್ಠಿಯ ಮೂಲಕ ಒತ್ತಾಯಿಸಲಾಗುತ್ತದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…