ಶಹಾಬಾದ: ಇದುದನ್ನು ಇದ್ದಂಗೆ ಹೇಳುವ 12ನೇ ಶತಮಾನದ ನೇರ ದಿಟ್ಟ ಶರಣರೆಂದರೆ ಅಂಬಿಗರ ಚೌಡಯ್ಯನವರು ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಅವರು ನಗರದ ಹಳೆಶಹಾಬಾದನಲ್ಲಿ ಕೋಲಿ ಸಮಾಜದ ವತಿಯಿಂದ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತವನ್ನು ಉದ್ಘಾಟಿಸಿ ಮಾತನಾಡಿದರು.
ತಪ್ಪನ್ನು ಯಾರ ಮುಲಾಜಿಲ್ಲದೇ ಹೇಳುವ ಸಂಸ್ಕøತಿ ಅವರಲ್ಲಿತ್ತು.ಅದಕ್ಕಾಗಿ ಅವರನ್ನು ಚಾಟಿ ಏಟಿನ ಶರಣ ಕರೆಯುವುದುಂಟು.ಅಂಬಿಗರ ಚೌಡಯ್ಯನವರ ವೃತ್ತ ಉದ್ಘಾಟಿಸಿರುವುದು ನನ್ನ ಸೌಭಾಗ್ಯ.ಅಲ್ಲದೇ ತಮ್ಮ ಸಹಕಾರದಿಂದ ಇಂದು ಶಾಸಕನಾಗಿ ಎರಡನೇ ಬಾರಿ ಆಯ್ಕೆಯಾಗಿದ್ದೆನೆ.ತಮ್ಮ ಬೇಡಿಕೆಯಂತೆ ತಾವು ನಿಗದಿ ಪಡಿಸಿದ ಸ್ಥಳದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾಗಿ ಆಯ್ಕೆಯಾಗಿದಕ್ಕೆ ಅವರನ್ನು ಸನ್ಮಾನಿಸಲಾಯಿತು. ಹಳೆಶಹಾಬಾದನ ಮುಖಂಡರಾದ ಶಿವಕುಮಾರ ನಾಟೀಕಾರ,ಸಿದ್ದು ಬೆಳಗುಂಪಿ, ದೇವೆಂದ್ರಪ್ಪ ಹೊನಗುಂಟಿ, ಸಾಯಬಣ್ಣ ಬೆಳಗುಂಪಿ, ಗುರುರಾಜ ಮಾಲಿ ಪಾಟೀಲ,ಶ್ರೀಶೈಲಪ್ಪ ಬೆಳಮಗಿ, ಶಿವರಾಜ ಪಾರಾ,ಶರಣಪ್ಪ ಕೊಡದೂರ,ಶಿವುಗೌಡ ಪಾಟೀಲ, ಚನ್ನವೀರ ಪೊಲೀಸ್ ಪಾಟೀಲ,ಚಂದ್ರಕಾಂತ ನಾಟೀಕಾರ, ಸಂತೋಷ ತಿಳಗೂಳ,ನಾಗೇಂದ್ರ ನಾಟೀಕಾರ, ಚಂದ್ರಶೇಖರ ಜಾಪೂರ,ರಾಜು ಇಟಗಿ, ವಿಶ್ವನಾಥ ವಚ್ಚಾ, ನಿಂಗು ನಾಟೀಕಾರ, ಭೀಮಾಶಂಕರ ರಾವೂರ, ರಾಜು ನಾಟೀಕಾರ, ಮಲ್ಲು ಬೇನೂರ್ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…