ಚಿಂಚೋಳ್ಳಿ: ಸಮುದಾಯದಲ್ಲಿ ಕ್ಷಯರೋಗದ (ಟಿಬಿಯ) ಲಕ್ಷಣಗಳು ಇರುವ ಯಾವುದೇ ವ್ಯಕ್ತಿ ಕಂಡು ಬಂದರೆ ಅವರಿಗೆ ಕ್ಷಯರೋಗ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಬೇಕು ಗುಣಮುಖವಾಗುವಂತಹ ರೋಗವಾಗಿದೆ ಇದರ ಬಗ್ಗೆ ಭಯ ಪಡದೆ ಕ್ಷಯ ಖಚಿತವಾಗಿರುವ ರೋಗಿಯು ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖವಾಗಿ ಕ್ಷಯರೋಗ ಮುಕ್ತ ಕರ್ನಾಟಕ ಮಾಡಲು ಸಾಧ್ಯವಿದೆ ಕ್ಷಯ ರೋಗ ಮುಕ್ತ ಗ್ರಾಮ ಮಾಡುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸುವುದರ ಜೊತೆಗೆ ಆರೋಗ್ಯದ ಅರಿವಿನ ಪ್ರಾಮುಖ್ಯತತೆ ಬಹಳ ಅವಶ್ಯ ಎಂದು ಜಿಲ್ಲಾ ಡಿ ಅರ್ ಟಿಬಿ ಟೀಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ ಸಲಹೆ ನೀಡಿದರು.
ಅವರು ಚಿಂಚೋಳ್ಳಿ ತಾಲೂಕಿನ ನಿಡಗುಂದ . ಕರುನಾಡ ವಿಜಯ ಸೇನೆ ಸಂಘಟನೆ ನಿಡಗುಂದ ಏರ್ಪಡಿಸಿದ್ದ ಡಾ. ಬಿ ಆರ್. ಅಂಬೇಡ್ಕರ್ ಚೌಕ ಹತ್ತಿರದ ಭವನದಲ್ಲಿ . ಜಿಲ್ಲಾ ಪಂಚಾಯತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಕಲಬುರಗಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನಿಡಗುಂದಾ . ಇವರ. ಸಂಯೋಗದಲ್ಲಿ ಹಮ್ಮಿಕೊಂಡ. ಕ್ಷಯರೋಗ ನಿರ್ಮೂಲನ ಹಾಗೂ ಮಧುಮೇಹ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಗ್ರಾಮದ ಸದಸ್ಯರು ಸ್ವಸಹಾಯ ಸಂಘದ ಮಹಿಳೆಯರು ಸಾಮಾನ್ಯ ಪ್ರಜೆಗಳು ಕೈ ಜೋಡಿಸುವುದರ ಜೊತೆಗೆ ಸಮುದಾಯದ ಜನರಿಗೆ ಕ್ಷಯರೋಗ ಕುರಿತು ಅರಿವು ಮಾಹಿತಿ ಸಂಘ ಸಂಸ್ಥೆಗಳು ಮುಂದು ಬರಬೇಕು ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಈ ರೀತಿಯಾಗಿ ಹಮ್ಮಿಕೊಳ್ಳವುದರ ಜೊತೆಗೆ ನಿಮ್ಮ ಆರೋಗ್ಯದ ರಕ್ಷಣೆ ಹೇಗೆ ಗ್ರಾಮ ಸ್ವಚ್ಛಗೊಳಿಸುವದರ ಜೊತೆಗೆ ಪರಿಸರದ ನಿರ್ಮಾಣದ ಮಾಡಬೇಕಾಗಿದೆ ಅಂದಾಗ ಮಾತ್ರ ಆರೋಗ್ಯ ವಂತ ಜೀವನ ರೂಪಿಸಿಕೊಳ್ಳು ಸಾಧ್ಯವೆಂದರು ಅವರು ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮ ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಎಂಬ ಘೋಷವಾಕ್ಯದಂತೆ ಸಮುದಾಯದ ಜನರು ಕ್ಷಯರೋಗ ನಿರ್ಮೂಲನಗೆ ಪಣತೊಡಬೇಕೆಂದರು.
ನಂತರ ಅವರು ಮಾತನಾಡುತ್ತ ಟಿಬಿ ಹೆಚ್ ವಿ ಬೆಂಜಮಿನ್ ಅವರು ವಯಕ್ತಿಕ ( ಸ್ವಯಂ) ಸ್ವಚ್ಚತೆ ಬಗ್ಗೆ ಮಾತನಾಡಿ ಹಾಗೆ ಕ್ಷಯರೋಗ ಗಾಳಿ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತ ರೋಗವಾಗಿದ್ದು ಪ್ರತಿ ಒಬ್ಬರು ಎಚ್ಚರವಹಿಸಬೇಕು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಕ್ಷಯರೋಗ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣವಾಗಿ ಉಚಿತ ಇರುತ್ತದೆ. ಮತ್ತು ಆರು ತಿಂಗಳ ಚಿಕಿತ್ಸೆಯ ಸಂಧರ್ಬದಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರ ಸಂಬಂದ ಮಾಸಿಕ ೫೦೦ ರೂ, ಗಳನ್ನು ಕೊಡಲಾಗುತ್ತದೆ ಇದರ ಉಪಯೋಗ ಪ್ರತಿ ರೋಗಿಯು ಪಡೆದುಕೊಳ್ಳುತ್ತರೆ ಎಂದು ತಿಳಿಸಿದರು.
ಗಡಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಎನ್ ಸಿ ಡಿ ಸಮಾಲೋಚಕಿ ರೇಷ್ಮಾ ರಾಠೋಡ ಅವರು ಮಧುಮೇಹದ ಬಗ್ಗೆ ಮಾಹಿತಿ ನೀಡಿದರು ಹಾಗೆ ಸಂಶಯಾಸ್ಪದ ಗ್ರಾಮದ 12 ಜನರ ಕಫದ ಮಾದರಿ ಸಂಗ್ರಹ ಹಾಗೆ 24 ಜನ ಮಧುಮೇಹ ರಕ್ತ ಪರೀಕ್ಷೆ .ಬಿಪಿ ಪರೀಕ್ಷೆಯನ್ನು ಗ್ರಾಮದ ಜನರು ಸದುಪಯೋಗ ಪಡಿಸಿಕೊಂಡರು.
ವೇದಿಕೆ ಮೇಲೆ ಪ್ರಮುಖರಾದ ಕರುನಾಡ ವಿಜಯ ಸೇನೆಯ ತಾಲ್ಲೂಕ ಅಧ್ಯಕ್ಷರಾದ ರಾಜು ಆರ್ ಹೆಚ್. ಪ್ರಾಸ್ತಾವಿಕ ನುಡಿಯಾಡಿದರು. ಗ್ರಾಮ ಪಂಚಾಯತ್ ಸದಸ್ಯರು ನಿಡಗುಂದಾ ರಾಜು ಸಿದ್ರಮೇಶ ನಿಷ್ಠಿ. ಗ್ರಾ ಪಂ ಸದಸ್ಯ ಶಂಕರ ಸಜ್ಜನ್ . ಕಾಂಗ್ರೆಸ್ ಯುವ ಮುಖಂಡರಾದ ಸಿದ್ಧರಾಮ ಮಳ್ಳೂರ, ಸಂತೋಷ ಗೌತಮ್. ಎಸ್ ಟಿ ಎಲ್ ಎಸ್ ಸುರೇಶ ಕಲಶೆಟ್ಟಿ . ಟಿಬಿ ಹೆಚ್ ವಿ ಪ್ರವೀಣ್ ಕಾಂಬಳೆ. ಇದ್ದರು.
ವಿಶೇಷವಾಗಿ ಕ್ಷಯರೋಗ ಕುರಿತು ಗ್ರಾಮದ ಜನರಿಗೆ ಬಿತ್ತಿ ಪತ್ರದ ಮೂಲಕ ಜಾಗೃತಿ ಮೂಡಿಸಿಲಾಯಿತು.
ಆಶಾ ಕಾರ್ಯಕರ್ತರಾದ ಸಂಗೀತ, ಚಂದ್ರಕಲಾ , ಸಚಿನ್ ಜಜ್ಬಲಾ ಬಾರ್, ಚಂದ್ರಕಾಂತ ಕಿರಣ ಕಾಳ, ಸುನಿಲ್ ಕಾರ್ಚಖೇಡ್ ಸತೀಶ್. ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು . ಹಣಮಂತ ಕುಂಬಾರ ಸ್ವಾಗತಿಸಿದರು, ಶ್ರೀನಿವಾಸ ಗುತ್ತೆದಾರ ನಿರೂಪಿಸಿದರು. ಶಿವು ಹಡಪದ ವಂದಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…