ಕಲಬುರಗಿ: ನಾವು ಎಷ್ಟು ಕನ್ನಡ ಬಳಸುತ್ತೇವೆಯೋ ಅಷ್ಟು ಉಳಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅಭಿಮತ ವ್ಯಕ್ತಪಡಿಸಿದರು.
ನಗರದ ಕನ್ನಡಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕ್ರಿಯಾಶೀಲ ಗೆಳೆಯರ ಬಳಗದ ಆಶ್ರಯದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀ¯ ತೇಗಲತಿಪ್ಪಿ ಜನ್ಮದಿನದ ನಿಮಿತ್ತ ಭಾನುವಾರ ಆಯೋಜಿಸಿದ್ದ ಸಾಹಿತ್ಯ ಸಂಸ್ಕøತಿ ಉತ್ಸವ-2023 ನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಮಾತನಾಡುವ ಮೂಲಕ ಮಾತೃ ಭಾಷೆ ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಅವರು ಕನ್ನಡ ಭಾಷೆ, ಜಲ, ನುಡಿ ಉಳಿಸಿ ಬೆಳಸುವಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದಾರೆ. ತೇಗÀಲತಿಪ್ಪಿ ಅವರ ಕನ್ನಡಪರ ಕಾಳಜಿಗೆ ಶ್ಲಾಘನೀಯ ಎಂದರು.
ಸಾಮಾಜಿಕ, ಸಾಂಸ್ಕøತಿಕ ಮೌಲ್ಯಗಳ ಪುನರುತ್ಥಾನ ಕುರಿತು ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಉಪನ್ಯಾಸ ನೀಡಿ, ಸಾಹಿತ್ಯ ಎಂದರೆ ನುಡಿಯುವುದು, ಸಂಸ್ಕøತಿ ಎಂದರೆ ನಡೆಯುವುದು. ನುಡಿದಂತೆ ನಡೆದರೆ ಅದುವೆ ಸಾಹಿತ್ಯ ಸಂಸ್ಕøತಿ. ಸಾಹಿತ್ಯ ಮತ್ತು ಸಂಸ್ಕøತಿ ಮನುಷ್ಯನ ವ್ಯಕ್ತಿತ್ವಕ್ಕೆ ಪೂರಕವಾಗುತ್ತವೆ ಎಂದರು. ಸಂಪೂರ್ಣ ಹದಗೆಟ್ಟಿರುವ ಇಂದಿನ ಸಂದರ್ಭದಲ್ಲಿ ಸಮಾಜ ಸುಧಾರಿಸುವ ಗಟ್ಟಿ ಸಾಹಿತ್ಯ ರಚನೆ ಅಗತ್ಯವಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಇಂದಿನ ಹೊಸ ಜನಾಂಗವು ನಮ್ಮ ಪರಂಪರೆಯ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಕನ್ನಡ ಭಾಷೆ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸರಕಾರಿ ಶಾಲೆಗಳ ಉಳಿಯುವಿಕೆ ಹಾಗೂ ಅವುಗಳ ಅಭಿವೃದ್ದಿಗಾಗಿ ಮುಂದಿನ ದಿನಗಳಲ್ಲಿ ಹೊಸ ಹೆಜ್ಜೆ ಇಡುತ್ತಿದೆ ಎಂದರು.
ಮುತ್ಯಾನ ಬಬಲಾದಿನ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಲೇಖಕ ಡಾ. ಕೆ.ಗಿರಿಮಲ್ಲ ಅವರು ರಚಿಸಿದ `ವಿಜಯ ವಿಕಾಸ’ ಕೃತಿಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ ಅವರು ಜನಾರ್ಪಣೆಗೊಳಿಸಿದರು. ಸಂಶೋಧಕ ಮುಡುಬಿ ಗುಂಡೇರಾವ, ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಠಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಮಹಿಳಾ ಪ್ರತಿನಿಧಿಗಳಾದ ಶಕುಂತಲಾ ಪಾಟೀ¯ ಜಾವಳಿ, ಶಿಲ್ಪಾ ಜೋಶಿ, ನ್ಯಾಯವಾದಿ ಮಾಲತಿ ರೇಷ್ಮಿ, ಜ್ಯೋತ್ಸ್ನಾ ಹೇರೂರ ಮಾತನಾಡಿದರು.
ರಾಜುಗೌಡ ನಾಗನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಡಾ. ಬಾಬುರಾವ ಶೇರಿಕಾರ, ಸಿದ್ದಲಿಂಗ ರೆಡ್ಡಿ ಹಣಮನಳ್ಳಿ, ಎಂ.ಎಸ್.ಪಾಟೀಲ್ ನರಬೋಳಿ, ರಾಜೇಂದ್ರ ಮಾಡಬೂಳ, ವಿಶಾಲಾಕ್ಷಿ ಮಾಯಣ್ಣನವರ್, ಧರ್ಮಣ್ಣ ಹೆಚ್ ಧನ್ನಿ, ಸುನಿತಾ ದೊಡ್ಡಮನಿ, ಸಿದ್ದಲಿಂಗ ಬಾಳಿ, ಕಸಾಪದ ವಿವಿಧ ತಾಲೂಕಾಧ್ಯಕ್ಷರಾದ ಸುರೇಶ ದೇಶಪಾಂಡೆ, ಸಂತೋಷ ಕುಡಳ್ಳಿ, ನಾಗಪ್ಪ ಸಜ್ಜನ್, ಸುರೇಶ ಲೇಂಗಟಿ, ಶರಣಬಸಪ್ಪ ಕೋಬಾಳ, ಗುರುಬಸಪ್ಪ ಸಜ್ಜನಶೆಟ್ಟಿ, ವಿರೇಂದ್ರಕುಮಾರ ಕೊಲ್ಲೂರ, ಎಸ್ ಕೆ ಬಿರಾದಾರ, ಸುಮಾ ಚಿಮ್ಮನಚೋಡಕರ್, ಪ್ರಭು ಫುಲಾರಿ, ಉತ್ತರ ವಲಯದ ಅಧ್ಯಕ್ಷ ಪ್ರಭುಲಿಂಗ ಮೂಲಗೆ, ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ, ಪ್ರಭವ ಪಟ್ಟಣಕರ, ಶಿವಾನಂದ ಪೂಜಾರಿ, ಬಸ್ವಂತರಾಯ ಕೋಳಕೂರ, ಬಾಬುರಾವ ಪಾಟೀಲ, ರಾಜಶೇಖರ ಚೌಧರಿ, ರವೀಂದ್ರಕುಮಾರ ಭಂಟನಳ್ಳಿ, ಸಿದ್ಧಾರಾಮ ಹಂಚನಾಳ, ರಾಜೇಂದ್ರ ಹೇರೂರ ಉಪಸ್ಥಿತರಿದ್ದರು.
ಹೆಚ್ಚು ಬಾರಿ ರಕ್ತ ದಾನ ಮಾಡಿ ಮತ್ತೊಬ್ಬರ ಜೀವ ಉಳಿಸಿದ ಮಹನೀಯರನ್ನು, ವಿವಿಧ ಕ್ಷೇತ್ರದ ಪ್ರಮುಖರು ಹಾಗೂ ಹತ್ತನೇ ಪರೀಕ್ಷೆಯ ನೂರಕ್ಕೆ ನೂರು ಪ್ರತಿಶತ ತಂದುಕೊಟ್ಟ ಮಕ್ಕಳನ್ನು ವಿಶೇಷವಾಗಿ ಗೌರವಿಸಲಾಯಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…