ಬಿಸಿ ಬಿಸಿ ಸುದ್ದಿ

ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳವಣಿಗೆ ಮನೆಯಿಂದಲೇ ಆರಂಭವಾಗಲಿ

ಸುರಪುರ; ತಾಲೂಕಿನ ಹುಣಸಿಹೊಳ್ಳೆಯ ಕಣ್ವಮಠದಲ್ಲಿ ಮಠದ ಪೀಠಾಧಿಪತಿಗಳಾಗಿದ್ದ ವಿದ್ಯಾಭ್ಯಾಸ್ಕರ ತೀರ್ಥ ಸ್ವಾಮಿಗಳ ಮದ್ಯಾರಾಧನೆ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿಯವರು ಮಾತನಾಡಿ, ನೈತಿಕ ಮೌಲ್ಯಗಳು ಮತ್ತು ಒಳ್ಳೆಯ ಹವ್ಯಾಸಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗುತ್ತವೆ ಈ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯ ಮನೆಯಿಂದಲೇ ಪ್ರಾರಂಭವಾಗಬೇಕು ಎಂದರು.ಮನೆ, ಕುಟುಂಬ, ಪರಿಸರ ಇವೆಲ್ಲವುಗಳು ನೈತಿಕ ಮೌಲ್ಯಗಳ ಪ್ರೇರಣೆಗೆ ಪೂರಕವಾಗುತ್ತವೆ ಇಂದು ನಮ್ಮಲ್ಲಿ ಹೆಚ್ಚಾಗುತ್ತಿರುವ ಬಯಕೆಗಳು, ಸೌಲಭ್ಯಗಳಿಂದ ವ್ಯಕ್ತಿತ್ವ ವಿಕಾಸಕ್ಕೆ ಅಡ್ಡಿಯಾಗಿವೆ ದಾಸ ಸಾಹಿತ್ಯ ಸಾಕಷ್ಟು ಕೀರ್ತನೆಗಳನ್ನು ಸಮಾಜಕ್ಕೆ ನೀಡಿದೆ ಎಂದರು.

ಸಂಗೀತಾ ವಕೀಲ್ ಅವರು ಶುಕ್ಲ ಯಜುರ್ವೇದದ ಹಿರಿಮೆ ಮತ್ತು ಗುರುಗಳ ಮಹಿಮೆ ಕುರಿತು ಹಾಗೂ ರಂಗನಾಥಚಾರ್ಯ ಸಾಲಗುಂದಿ ನಿತ್ಯ ಕರ್ಮಾನುಷ್ಠಾನಗಳ ಮಹತ್ವ ಕುರಿತು ಮಾತನಾಡಿದರು.

ಶುಕ್ಲ ಯಜುರ್ವೇದ ಹಾಗೂ ಕಣ್ವಮಠದ ಬೆಳವಣಿಗೆಗೆ ವಿದ್ಯಾಭಾಸ್ಕರ ತೀರ್ಥರ ಕೊಡುಗೆ ಅಪಾರ ಜೇಷ್ಠ ಮಾಸದ ಏಕಾದಶಿಯ ಪರ್ವಕಾಲದಲ್ಲಿ ವೃಂದಾವನಸ್ಥರಾದ ವಿದ್ಯಾಭಾಸ್ಕರ ಯತಿಗಳು ಕಣ್ವಮಠದ ಆಪತ್ಕಾಲದಲ್ಲಿ ಸನ್ಯಾಸತ್ವ ಸ್ವೀಕರಿಸಿ ತಮ್ಮ ಜೀವನವನ್ನು ಶುಕ್ಲ ಯರ್ಜುವೇದಿಗಳಿಗೆ ಮೀಸಲಾಗಿರಿಸುವ ಮೂಲಕ ಶುಕ್ಲ ಯಜುರ್ವೇದ ಹಾಗೂ ಕಣ್ವಮಠದ ಬೆಳವಣಿಗೆಗೆ ಕಾರಣೀಭೂತರಾದ ಮಹಾನ್ ಚೈತನ್ಯಮಯಿಗಳಾಗಿದ್ದರು ಎಂದು ಆಶೀರ್ವಚನ ನೀಡಿದ ಹುಣಸಿಹೊಳೆಯ ಕಣ್ವಮಠದ ಪೀಠಾಧಿಪತಿಗಳಾದ ವಿದ್ಯಾ ಕಣ್ವವಿರಾಜ ತೀರ್ಥ ಶ್ರೀಪಾದಂಗಳವರು ಹೇಳಿದರು. ಪೂರ್ವಾಶ್ರಮದಲ್ಲಿ ನ್ಯಾಯವಾದಿಗಳು ಹಾಗೂ ಅತ್ಯಂತ ಶ್ರೀಮಂತರಾಗಿದ್ದ ಇವರು ಎಲ್ಲವನ್ನೂ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿ ಮಠದ ಏಳಿಗೆಗಾಗಿ ಹಾಗೂ ಭಕ್ತರಿಗಾಗಿ ಜೀವನವನ್ನು ಸವೆಸಿದರು ಶ್ರೀಮಠದ ಸಮಸ್ಯೆಗಳನ್ನು ಬಗೆಹರಿಸಿದರು ಮಠದ ಪ್ರಸಿದ್ಧಿಯನ್ನು ಎಲ್ಲಾ ಕಡೆಗಳಲ್ಲಿ ಪಸರಿಸಿದರು ಎಂದು ಅವರು ಹೇಳಿದರು.

ಮದ್ಯಾರಾಧನೆ ಪ್ರಯುಕ್ತ ನಿರ್ಮಾಲ್ಯ ವಿಸರ್ಜನೆ, ಶುದ್ಧೋದಕ ಅಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ ಹಾಗೂ ಆಗಮಿಸಿದ್ದ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ನೆರವೇರಿದವು. ಈ ಸಂದರ್ಭದಲ್ಲಿ ನಾಡಿನ ಖ್ಯಾತ ಸಂಗೀತ ಕಲಾವಿದರಾದ ಡಾ. ಮುದ್ದುಮೋಹನ ಮತ್ತು ಡಾ. ಸುನಂದಾ ಸಾಲವಾಡಗಿ ಅವರಿಂದ ದಾಸವಾಣಿ ನಡೆಯಿತು ಹಾಗೂ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶ್ರೀಪಾದಂಗಳವರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಯಾದಗಿರಿಯ ಆಯುಷ್ ಇಲಾಖೆಯ ವತಿಯಿಂದ ಉಚಿತ ಹೋಮಿಯೋಪಥಿಕ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀಮಠದ ವೈದಿಕರಾದ ವಿಷ್ಣು ಪ್ರಕಾಶ ಜೋಷಿ, ಶಂಕರಭಟ್ ಜೋಷಿ, ಜಗನ್ನಾಥಾಚಾರ್ಯ ಕೊಡೇಕಲ್ ನೇತೃತ್ವದಲ್ಲಿ ವಿವಿದ ಧಾರ್ಮಿಕ ಪೂಜೆ ವಿಧಿ ವಿಧಾನಗಳು ನೆರವೇರಿದವು ಟ್ರಸ್ಟ್ ಅಧ್ಯಕ್ಷ ಮನೋಹರ ಮಾಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು ರಾಜು ಜೋಷಿ ಸ್ವಾಗತಿಸಿದರು. ವಿನುತ ಜೋಷಿ ನಿರೂಪಿಸಿದರು. ವಿಷ್ಣುಪ್ರಕಾಶ ಜೋಷಿ ವಂದಿಸಿದರು, ಔದಂಬರಭಟ್ ಜೋಷಿ, ಮೋಹನ ದೇವರು, ಸುರೇಶ ಕುಲಕರ್ಣಿ, ಭೀಮಸೇನಾಚಾರ್ಯ ವನದುರ್ಗ, ಪಿ.ಬಿ. ಹಂಗರಗಿ, ರಾಘವೇಂದ್ರ ಆಲಗೂರ, ಹನುಮಂತರಾವ ಟಕ್ಕಳಕಿ, ರಾಘವೇಂದ್ರ ಗೆದ್ದಲಮರಿ, ಸುರೇಖಾ ಕುಲಕರ್ಣಿ, ಮಂಜುಳಾದೇವಿ, ನೀಲಕಂಠರಾವ ತಲೇಖಾನ, ಮಂಜುನಾಥ ಕುಲಕರ್ಣಿ, ಭೀಮಸೇನ ದೇಸಾಯಿ ಹಾಗೂ ವಿವಧೆಡೆಯಿಂದ ಆಗಮಿಸಿದ್ದ ನೂರಾರು ಭಕ್ತರು ಪಾಲ್ಗೊಂಡಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago