ಕಲಬುರಗಿ: ನಗರದ ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲಾ ಸಂಸತ್ (investiture ceremony) ರಚನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಎರ್ಪಡಿಸಾಲಿಗಿತ್ತು.
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ನಾಮಫಲಕಗಳನ್ನು ಕೊಟ್ಟು ಸನ್ಮಾನಿಸಲಾಯಿತು. ಸಮಾರಂಬದಲ್ಲಿ ಎಲ್ಲ ಮಕ್ಕಳು ಮಾರ್ಚಫಾಸ್ಟ ಮಾಡುವುದರ ಮೂಲಕ ಎಲ್ಲರಗಮನ ಸೇಳೆದರು ಸಮಾರಂಭದಲ್ಲಿ ಮುಖ್ಯ ಅತಿಥಿತಿಗಳಾಗಿ ಡಿ ಜಿ ರಾಜಣ್ಣ (ಡಿ.ಎಸ್.ಪಿ), ಶಾಲೆಯ ಅಧ್ಯಕ್ಷರಾದ ರಾಮಚಂದ್ರ ಡಿ ರಘೋಜಿ ಕಾರ್ಯದರ್ಶಿಗಳಾದ ಮೀರಾ ಆರ್ ರಘೋಜಿ ಹಾಗೂ ಟ್ರಸ್ಟೀ ಹೊಂದಿರುವ ಕುಮಾರಿ ಮನೋಶ್ರೀ ಆರ್ ರಘೋಜಿ ಹಾಗೂ ನಂದಿನಿ ಆರ್ ರಘೋಜಿ ಮತ್ತು ಪ್ರಾಂಶುಪಾಲರು ,ಬೋಧಕರು, ಬೋಧಕೇತರರು ಹಾಗೂ ಎಲ್ಲಾ ಮಕ್ಕಳು ಉಪಸ್ಥಿತರಿದ್ದರು. ಕೊನೆಗೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ರೇವಣಸಿದ್ದೇಶ್ವರ ಕಾಲೋನಿಯ ದೂರದರ್ಶನ ಕೇಂದ್ರದ ಹಿಂದುಗಡೆ ಇರುವ ದಾಮೋದರ ರಘೋಜಿ ಸ್ಮಾರಕ ಸಿ ಬಿ ಎಸ್ ಸಿ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಲು ಶಾಲಾ ಸಂಸತ್ತಿನ ಚುನಾವಣೆಯನ್ನು ನಡೆಸಲಾಯಿತು
ಶಾಲಾ ಸಂಸತ್ತಿನಲ್ಲಿ ಒಟ್ಟು 10 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನ ನಡೆಯಿತು. ಇದಕ್ಕೂ ಮೊದಲು ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಯಿತು. 10 ಪ್ರತಿನಿಧಿಗಳ ಸ್ಥಾನಗಳಿಗೆ 30 ನಾಮಪತ್ರಗಳು ಸಲ್ಲಿಕೆಯಾಗಿದ್ದವು
ಶಾಲೆ ಪ್ರಾಂಶುಪಾಲರಾದ ಪ್ರಮೋದ ಕುಮಾರ್ ಮಾಳೇಕರ ಮತದಾನದ ಮಹತ್ವ ತಿಳಿಸಿದರು. ಮೋಹನ ಎಸ್ ರಾಠೋಡ ಮತದಾನ ಮಾಡುವ ವಿಧಾನ ಹೇಳಿಕೊಟ್ಟರು.
ಚುನಾವಣಾ ವೀಕ್ಷ ಕರಾಗಿದ್ದ ಶಿಕ್ಷ ಕರಾದ ಗಿರಿಜಾ ಕುಲಕರ್ಣಿ, ಶಾಲಿನಿ ದಿಡ್ಡಿಮನಿ, ಗೀತಾ ನಾಯ್ಕಲ್, ಕಮಲಾ ತಿವಾರಿ , ಐಶ್ವರ್ಯ ಇವರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಿ ನಂತರ ಮತದಾನಕ್ಕೆ ಅವಕಾಶ ಮಾಡಕೊಡಲಾಯಿತು. ವಿದ್ಯಾರ್ಥಿಗಳು ಪ್ರತ್ಯೇಕ ಸರದಿಯಲ್ಲಿ ನಿಂತು ಶಾಲಾ ಗುರುತಿನ ಚೀಟಿ ಹಿಡಿದು ಹಕ್ಕು ಚಲಾಯಿಸಿರು. ಇದರಲ್ಲಿ 5ನೇ ತರಗತಿಯಿಂದ 10ನೇ ತರಗತಿಯ ವರೆಗಿನ 377ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಡಗೈ ತೋರು ಬೆರಳಿಗೆ ಶಾಹಿ ಹಚ್ಚಿಕೊಂಡು ಮತದಾನ ಮಾಡಿದರು.
ಮತಗಟ್ಟೆ ಅಧಿಕಾರಿಗಳಾಗಿ ಮೋಹನ್ ಎಸ್ ರಾಠೋಡ, ಕಾರ್ಯನಿರ್ವಹಿಸಿದರು. ಎಪಿಆರ್‌ಒ ಆಗಿ ಪ್ರಶಾಂತ ಸ್ವಾಮಿ, ಪಿಆರ್‌ಒ ಆಗಿ ರಾಮಚಂದ್ರ ಪಾಟೀಲ್ ಜಗದೇವಿ ಪಾಟಿಲ್ ನಾಗಮ್ಮ ಪಾಟೀಲ್ ಕಾರ್ಯನಿರ್ವಹಿಸಿದರು.
ಈ ಚುನಾವಣೆಯಲ್ಲಿ ಶಾಲೆಯ ಆಡಳಿತ ಮಂಡಳಿಯವರಾದ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀರಾಮಚಂದ್ರ ಡಿ ರಘೋಜಿ , ಕಾರ್ಯದರ್ಶಿ ಮಿರಾ ಆರ್ ರಘೋಜಿ, ನಂದಿನಿ ಆರ್ ರಘೋಜಿ, ಹಾಗೂ ಮನುಶ್ರೀ ಆರ್ ರಘೋಜಿ, ಪ್ರಾಂಶುಪಾಲರಾದ ಪ್ರಮೋದಖುಮಾರ ಮಾಳೆಕರ, ಆಡಳಿತ ಅಧಿಕಾರಿ ನಾಗೇಶ್ ಕಮಲಾಪುರೆ, ಶಾಲೆಯ ಎಲ್ಲ ಸಿಬ್ಬಂದಿ ವರ್ಗ ಭಾಗವಹಿಸಿ ಮತದಾನ ಮಾಡಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…