ಬಿಸಿ ಬಿಸಿ ಸುದ್ದಿ

ಬುದ್ದಿ ಜೀವಿಗಳೇಕೆ ಹಸುವಿನ ಹತ್ಯೆಗೆ ಮರುಗಲ್ಲ: ಆಂದೋಲಾ ಶ್ರೀ

ವಾಡಿ: ನಾಗರ ಪಂಚಮಿಯಂದು ಹುತ್ತಿಗೆ ಹಾಲು ಹಾಕುವುದನ್ನು ವಿರೋಧಿಸುವ ಬುದ್ದಿಜೀವಿಗಳು, ಬಕ್ರೀದ್ ಹಬ್ಬದಂದು ನಾಲೆಗೆ ಹರಿಯುವ ಹಸುವಿನ ರಕ್ತವನ್ನು ಕಂಡೇಕೆ ಮರುಗುವಿದಿಲ್ಲ ಎಂದು ಆಂದೋಲಾ ಕರುಣೇಶ್ವರ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಪ್ರಶ್ನಿಸಿದರು.

ಕೊಂಚೂರು ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಮಹರ್ಷಿ ಸವಿತಾ ಪೀಠದ ವತಿಯಿಂದ ಲೋಕ ಕಲ್ಯಾಣಾರ್ಥ ಏರ್ಪಡಿಸಲಾಗಿದ್ದ ಸುದರ್ಶನ ನಾರಸಿಂಹ ಯಾಗ-ಯಜ್ಞ ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ದುರ್ದೈವದ ಸಂಗತಿ ಎಂದರೆ ನಾಗ ಪಂಚಮಿಯಂದು ಬಿಲದಿಂದ ಹಾವುಗಳು ಬರುವುದಿಲ್ಲ. ಮನೆಯಿಂದ ಹೊರಗಡೆ ಬುದ್ದಿಜೀವಿಗಳು ಬಂದು ರಸ್ತೆ ಮೇಲೆ ನಿಲ್ಲುತ್ತಾರೆ. ಕಲ್ಲಿನ ವಿಗರಹಕ್ಕೆ ಮತ್ತು ಹುತ್ತಿಗೆ ಹಾಲು ಹಾಕಬೇಡಿ ವ್ಯರ್ಥವಾಗುತ್ತದೆ. ಹಾಲು ಅನಾಥ ಮಕ್ಕಳಿಗೆ ಕುಡಿಸಿರಿ ಎಂದು ಈ ಬುದ್ದಿಜೀವಿ ಎಂಬ ವಿಷ ಸರ್ಪಗಳು ನಮಗೆ ಉಪದೇಶ ಕೊಡುತ್ತವೆ. ಬರೀ ನಾಗಪಂಚಮಿಯಂದೇ ಏಕೆ ನಿಮಗೆ ಅನಾಥ ಮಕ್ಕಳು ನೆನಪಾಗುತ್ತಾರೆ ಎಂದು ನಾವು ಹಿಂದುಗಳು ಪ್ರಶ್ನಿಸಿಬೇಕಿದೆ. ಮರುದಿನ ಇವರಿಗೆ ಅನಾಥರೂ ನೆನಪಾಗಲ್ಲ ಮಕ್ಕಳೂ ನೆನಪಾಗಲ್ಲ. ಮತ್ತೆ ಆ ಹಾವುಗಳು ಬಿಲದಲ್ಲಿ ಕುಳಿತುಕೊಳ್ಳುತ್ತವೆ ಎಂದು ಹರಿಹಾಯ್ದ ಸ್ವಾಮೀಜಿ, ಬಕ್ರೀದ್-ರಂಜಾನ್ ಹಬ್ಬದ ದಿನ ಸಾವಿರಾರು ಹಸುಗಳ ರಕ್ತ ಚರಂಡಿಯಲ್ಲಿ ಹರಿಯುವುದು ಏಕೆ ಕಾಣಲ್ಲ ಎಂದು ಗುಡುಗಿದರು.

ವಿವಿಧತೆಯಲ್ಲಿ ಏಕತೆಯನ್ನು ಕಂಡ ನಾವು ನಮ್ಮ ಧರ್ಮವನ್ನು ಪ್ರೀತಿಸುತ್ತೇವೆ. ಜತೆಗೆ ಪರಧರ್ಮವನ್ನು ಗೌರವಿಸುತ್ತೇವೆ. ಸರ್ವೇಜನ ಸುಃಖಿನೋಭವಂತು ವಸುದೈವಕುಟುಂಬಕಂ ಎಂಬ ಘೋಷಣೆ ನಮ್ಮ ದೇಶವಾಸಿಗಳಲ್ಲಿದೆ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಕೆಲವು ಧರ್ಮಿಯರು ನಮ್ಮ ಧರ್ಮದ ಮೇಲೆ ಆಕ್ರಮಣ ಮಾಡುತ್ತಿದ್ದಾರೆ. ಇದನ್ನು ಸಮರ್ಥವಾಗಿ ಎದುರುಸಲು ನಮಗೆ ಶಕ್ತಿ ಕೊಡುವಂತೆ ದೇವರನ್ನು ಕೋರಿ ಇಂದು ಶ್ರೀಧರಾನಂದ ಸರಸ್ವತಿ ಶ್ರೀಗಳು ಸುದರ್ಶನ ಯಾಗ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಇದೇ ವೇಳೆ ಮಾತನಾಡಿದ ಸವಿತಾ ಮಹರ್ಷಿ ಪೀಠದ ಧರ್ಮಾಧೀಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಅಪಘಾತದಲ್ಲಿ ನನಗೆ ಸಾವು ಎದುರಾಗಿದ್ದಾಗ ಹಸುವೊಂದು ಎದುರುಬಂದು ಪ್ರಾಣ ಉಳಿಸಿತು. ಅಂದಿನಿಂದ ಗೋವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಅದಕ್ಕಾಗಿಯೇ ಕೊಂಚೂರಿನಲ್ಲಿ ಮಠ ಸ್ಥಾಪನೆಗೂ ಮುಂಚೆ ಗೋಶಾಲೆ ತೆರೆದಿದ್ದೇನೆ. ಸಂದರ್ಭ ಬಂದರೆ ಪೀಠ ಬಿಡುತ್ತೇನೆ ಆದರೆ ಗೋ ರಕ್ಷಣೆ ಕಾಯಕ ಮಾತ್ರ ಬಿಡುವುದಿಲ್ಲ. ನಮ್ಮ ಸವಿತಾ (ಕ್ಷೌರಿಕ) ಸಮಾಜ ಜಾತಿ ಅಸ್ಪೃಶ್ಯತೆಯ ನೋವು ಅನುಭವಿಸುತ್ತಿದೆ. ನಮ್ಮ ಸಮಾಜದ ಜನರಿಗೆ ಮನೆ ಬಾಡಿಗೆ ಸಿಗುತ್ತಿಲ್ಲ. ಹಿಂದೂಗಳೇ ನಮ್ಮನ್ನು ಹಿಂದುಗಳಂತೆ ಕಾಣುತ್ತಿಲ್ಲ. ಹೀಗಾಗಿ ಸವಿತಾ ಸಮಾಜದ ಅನೇಕರು ವಿವಿಧ ರಾಜ್ಯಗಳಲ್ಲಿ ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದಾರೆ ಎಂದು ಮನದಾಳದ ನೋವು ಹೇಳಿಕೊಂಡರು.

ಸವಿತಾ ಸಮಾಜದ ಮುಖಂಡರಾದ ಶರಣಪ್ಪ ಬಳ್ಳಾರಿ, ರಮೇಶ ಚಿನ್ನಾಕರ, ಅಪ್ಪಣ್ಣ ಚಿನ್ನಾಕರ, ವಾಡಿ ಸವಿತಾ ಸಮಾಜದ ಅಧ್ಯಕ್ಷ ಅಂಬರೀಶ ಕಡದರಾಳ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಪಾಲ್ಗೊಂಡಿದ್ದರು. ವಾಡಿ, ಶಹಾಬಾದ, ಕಲಬುರಗಿ, ಯಾದಗಿರಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸವಿತಾ ಸಮಾಜದ ಸಾವಿರಾರು ಜನರು ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಕೊಂಚೂರು ಸವಿತಾ ಪೀಠ ಹಾಗೂ ಕಲಬುರಗಿಯ ಅನುಗೃಹ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ನಡೆಯಿತು.

emedialine

View Comments

  • ಸವಿತಾ ಸಮಾಜದ ಗುರುಗಳು ಅಡಿದ ಹಿಂದು ಧರ್ಮದ ಅಸಪರ್ಶ ತೆ ಬಗ್ಗೆ ಅಡಿದ ಮಾತುಗಳು ಹೆಡ ಲೈನ ಎಕೆ ಮಾಡಲಿಲ್ಲ?

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago