ಕಲಬುರಗಿ: ಕಲಿಕೆ ಪೃವತ್ತಿಯಿಂದ ಯೋಚನಾ ಶಕ್ತಿ ಬೆಳೆಯುತ್ತದೆ. ಯೋಚನೆಗಳಿಂದ ಜ್ಞಾನ ಹೆಚ್ಚುತ್ತದೆ. ಜ್ಞಾನದಿಂದ ಕನಸ್ಸು ಮತ್ತು ಗುರಿ ಸಾಧಿಸುವ ಛಲ ವೃದ್ಧಿಗೊಳ್ಳುತ್ತದೆ. ದೇಶದ ಭವಿಷ್ಯ ಯುವಜನತೆಯ ಕನಸ್ಸು ಹಾಗೂ ಚಟುವಟಿಕೆಯಲ್ಲಿ ಅಡಗಿದೆ ಎಂದು ವ್ಯಕ್ತಿತ್ವ ವಿಕಸನ ಭಾಷಣಕಾರ (ಮೋಟಿವೇಶನ್ ಸ್ಪೀಕರ್) ರಮೇಶ ಬೆಲ್ಲದ್ ಹೇಳಿದರು.
ನಗರದ ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಇಂಡಕ್ಷನ್ (ದೀಕ್ಷಾರಂಭ-೨೦೧೯) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆ ತಾಯಿ ತನ್ನ ಮಕ್ಕಳು ಕೇವಲ ತನ್ನ ಕುಟುಂಬಕ್ಕೆ ಮಾತ್ರ ಆಶ್ರಯದ ವ್ಯಕ್ತಿಯಾಗದೇ, ಬದಲಾಗಿ ದೇಶಕ್ಕೆ ಆಶ್ರಯದಾತರಾಗಲಿ ಎಂದು ಹಂಬಲಿಸುತ್ತಾರೆ. ದೇಶದ ಏಳ್ಗೆ ಎಂಬುವದು ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿ ನಿಭಾಯಿಸುವ ಪ್ರವೃತ್ತಿಯಲ್ಲಿದೆ. ನೀವು ಮಾಡುವ ಕೆಲಸದಲ್ಲಿ ಶ್ರದ್ಧೇ, ಸಮಯಪ್ರಜ್ಞೆ, ಹೆಚ್ಚು ಹೆಚ್ಚು ಕೆಲಸ ಮಾಡಬೇಕು ಎನ್ನುವ ಹಂಬಲಹೊಂದಿ. ನೀವು ಮಾಡುವ ವೃತ್ತಿಯನ್ನು ಗೌರವಿಸಿ ಹಾಗೂ ನಿಮ್ಮ ವೃತ್ತಿ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಿ ಎಂದು ತಿಳಿಸಿದರು.
ಭಾಷೆ ಕಲಿಕೆಗೆ ಹಸಿವು, ಆಸಕ್ತಿ ಮುಖ್ಯ. ನಿಮ್ಮ ಕಲಿಕಾ ಶಕ್ತಿ ನಿಮ್ಮ ಗುರಿ ತಲುಪಿಸುತ್ತದೆ. ನಿಮ್ಮ ಪ್ರತಿ ಕೆಲಸದ ಒಳಿತು ಕೆಡಕುಗಳ ಬಗ್ಗೆ ನಿಮ್ಮನ್ನು ನೀವು ಪ್ರತಿದಿನ ಪ್ರಶ್ನಿಸಿಕೊಳ್ಳಿ. ಇದರಿಂದ ನಿಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹೈದರಬಾದ್ ಕರ್ನಾಟಕ ಭಾಗದಲ್ಲಿ ಪ್ರತಿಭೆಗಳು ಬಹಳಷ್ಟು ಇವೆ. ಇಲ್ಲಿದ್ದವರಿಗೆ ಅವಕಾಶಗಳು ದೊರೆಯಬೇಕು. ಪ್ರತಿಭೆಗಳಿಂದ ಶ್ರೀಮಂತರಾದ ನಾವು ಹಿಂದುಳಿದ ಪ್ರದೇಶದವರಲ್ಲ. ಮುಂದುವರಿದ ಕಲ್ಯಾಣ ಕರ್ನಾಟಕದವರಿದ್ದೇವೆ ಎಂದು ಗುರುತಿಸಿಕೊಳ್ಳಿ ಸಲಹೆ ನೀಡಿದರು.
ರೈತ ಪ್ರಪಂಚದ ಎರಡನೇ ದೇವರು. ಹೀಗಾಗಿ ವ್ಯವಸಾಯ ಕುಟುಂಬದ ಹಿನ್ನೆಲೆಯಿಂದ ಬಂದವರು, ನಾನು ರೈತನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ. ನಿಮ್ಮ ತಂದೆ ವಿಶ್ವದ ಅನ್ನದಾತ ಎಂದು ಹೆಮ್ಮೆಪಡೆದುಕೊಳ್ಳಿ. ಪ್ರತಿ ಕುಟುಂಬದಲ್ಲಿ ಒಬ್ಬ ಒಳ್ಳೆ ಮಾರ್ಗದರ್ಶಕರು ಇರುತ್ತಾರೆ. ಅವರ ಸಲಹೆಯಂತೆ ಮುಂದೆ ಸಾಗಿ ಎಂದು ಸಲಹೆ ನೀಡಿದರು. ವಿವಿ ಸಮ ಕುಲಪತಿ ಡಾ. ವಿ.ಡಿ.ಮೈತ್ರಿ ಮಾತನಾಡಿ, ವಿಶ್ವವಿದ್ಯಾಲಯದ ತರಗತಿ ವಿಧಾನ, ಪ್ರಾಯೋಗಿಕ ತರಗತಿ, ಪಠ್ಯಕ್ರಮ ಪದ್ಧತಿ, ಪರೀಕ್ಷೆಯ ವಿಧಾನ, ಪರೀಕ್ಷೆ ಫಲಿತಾಂಶದ ಗ್ರೇಡ್ ವಿಧಾನದ ಕುರಿತು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.
ವಿವಿ. ಕುಲಸಚಿವ ಡಾ. ಅನೀಲಕುಮಾರ ಬಿಡವೆ ಮಾತನಾಡಿ, ಇಂಡಕ್ಷನ್ ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳ ಪ್ರತಿಕ್ರಿಯೆ ಮತ್ತು ಉತ್ತಮ ಫಲಿತಾಂಶ ಒಳಗೊಂಡಿದೆ. ಕುಟುಂಬ ಮತ್ತು ಸಮಾಜದಲ್ಲಿ ನಿಮ್ಮ ಬೆಳವಣಿಗೆಗೆ ಕಾರಣಿಕರ್ತರ ಬಗ್ಗೆ ಹಾಗೂ ನಿಮ್ಮ ಕುಟುಂಬದವರಿಂದ ನಿಮಗೆ ಅವಶ್ಯವಾಗಿ ಬೇಕಾದ ವಸ್ತು ಮತ್ತು ಪ್ರೀತಿ, ಕಾಳಜಿ, ಮಮತೆಯ ಅಂಶಗಳ ಬಗ್ಗೆ ಬರೆಯುವ ಪ್ರಯತ್ನ ಮಾಡಿ ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಚಟುವಟಿಕೆಯಲ್ಲಿ ತೊಡಗಿಸಿದರು.
ಪ್ರೊ. ವಿಶಾಲ ಪಾಟೀಲ ನಿರೂಪಿಸಿದರು. ಕು. ವಿಶಾಲಾಕ್ಷಿ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಪ್ರೊ. ವಿಜಯಲಕ್ಷ್ಮಿ ರೆಡ್ಡಿ ಪರಿಚಯಿಸಿದರು. ವಿವಿ. ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ವಿವಿ ಡೀನ್ ಲಕ್ಷ್ಮಿ ಮಾಕಾ ಇತರರು ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…