ಕಲಬುರಗಿ: ಕಳೆದ ಗುರುವಾರ ರಾತ್ರಿ ಜೇವರ್ಗಿ ತಾಲೂಕಿನ ಹುಲ್ಲೂರ್ ಚೆಕ್‍ಪೆಸ್ಟ್ ಬಳಿಯ ನಾರಾಯಣಪೂರ ಗ್ರಾಮದ ಹತ್ತಿರ ನಡೆದ ಪ್ರಕರಣದಲ್ಲಿ ಮರಳು ದಂಧೆಕೋರರ ಟ್ರಾಕ್ಟರ್‍ಗೆ ಬಲಿಯಾದ ನೆಲೋಗಿ ಠಾಣೆಯ ಮುಖ್ಯಪೇದೆ ಮಯೂರ್ ಚವ್ಹಾಣ್ ಇವರ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿರುವ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ನಿಮ್ಮೊಂದಿಗೆ ನಾವಿz್ದÉೀವೆ, ಭಯ ಬೇಡ, ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸರ್ಕಾರಿಂದ ನೌಕರಿ ಕೊಡಿಸೋದಾಗಿ ಹೇಳುತ್ತ ಸಾಂತ್ವನದ ಮಾತುಗಳನ್ನಾಡಿ ಅಭಯ ನೀಡಿದ್ದಾರೆ.
ಅಫಜಲ್ಪುರ ಶಾಸಕ ಎಂವೈ ಪಾಟೀಲ್, ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಇವರಂದಿಗೆ ಚವಡಾಪುರ ತಾಂಡಾದಲ್ಲಿರುವ ಮಯೂರ್ ಚವ್ಹಾಣ್ ಮನೆಗೆ ಭೇಟಿ ನೀಡಿದ ಡಾ. ಅಜಯ್ ಸಿಂಗ್ ದುಃಖತಪ್ತ ಕುಟುಂಬಕ್ಕೆ 1 ಲಕ್ಷ ರುಪಾಯಿ ನಗದು ನೆರವು ನೀಡಿದರು.
ಘಟನೆಯ ಬಗ್ಗೆ ಮಾಹಿತಿ ಕೇಳಿ ಕುಟುಂಬ ಸದಸ್ಯರಂದಲೇ ತಿಳಿದ ಡಾ. ಅಜಯ್ ಸಂಗ್ ಈಗಾಗಲೇ ಈ ಬಗ್ಗೆ ತಾವು ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾಗಿ ಹಳಿದರಲ್ಲದೆ ಸರ್ಕಾರ 30 ಲಕ್ಷ ರು ನೆರವು ನೀಡೋದಾಗಿ ಹೇಳಿದೆ. ನಾವು ಈ ನೆರವಿನ ಮೊತ್ತ 50 ಲಕ್ಷ ರುಪಾಯಿಗೆ ಹೆಚ್ಚಸುವಂತೆ ಕೋರಿz್ದÉೀವೆ. ಸದನದಲ್ಲಿಯೂ ಈ ವಿಚಾರ ಪ್ರಸ್ತಾಪ ಮಾಡಿ ಕುಟುಂಬದ ನೆರವಿಗೆ ಬರೋದಾಗಿ ಹೇಳಿದರು.
ಚವ್ಹಾಣ್ ಕುಟುಂಬದ ಸಹೋದರರು, ಬಂಧುಗಳು, ಮೃತ ಮಯೂರನ ಮಕ್ಕಳಿಗೆ ಸಾಂತ್ವನ ಹೇಳಿದ ಶಾಸಕರು ಮಕ್ಕಳನ್ನು ಚೆನ್ನಾಗಿ ಓದಿಸುವಂತೆ ಮಯೂರ್ ಪತ್ನಿಗೆ ಕಿವಿಮಾತು ಹೇಳಿದರು. ಮನೆಯಲ್ಲಿ ಪೇದೆ ಮಯೂರ್ ಶಾಸಕರಾದ ಡಾ. ಅಜಯ್ ಸಿಂಗ್ ಅವರ ಬಗ್ಗೆ ತುಂಬ ಪ್ರಸ್ತಾಪಮಾಡುತ್ತಿದ್ದರು. ನೆಲೋಗಿಯಲ್ಲಿ ಕೆಲಸ ಚೆನ್ನಾಗಿದೆ. ನಾನು ಅಲ್ಲೇ ಇರುವೆ, ಶಾಸಕರು ಡಾ. ಅಜಯ್ ಸಿಂಗ್ ಸಾಹೇಬರು ತುಂಬಾ ಒಳ್ಳೆಯರೆಂದು ಮನೆಯಲ್ಲಿ ಹೇಳುತ್ತಿದ್ದರೆಂದು ತಮ್ಮ ಪತಿ ಮಯೂರ್ ನೆನಪಾಗಿ ಪತ್ನಿ ಹಾಗೂ ಮಕ್ಕಳು, ಸಹೋದರರು, ಮನೆ ಮಂದಿ ಎಲ್ಲರೂ ಕಣ್ಣೀರು ಹಾಕಿದರು.
ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಅಫಜಲ್ಪುರ ಶಾಸಕರಾದ ಎಂವೈ ಪಾಟೀಲರೂ ಸಾಂತ್ವನ ನುಡಿಗಳನ್ನು ಹೇಳುತ್ತ ಸರ್ಕಾರ, ನಾವು ನಿಮ್ಮ ಜೊತೆಗಿz್ದÉೀವೆ. ಆವುದೇ ಕಾರಣಕ್ಕೂ ಕಣ್ಣೀರು ಹಾಕಬೇಡಿ, ಆದ ಘಟನೆ ಮರೆಯಿರಿ, ಮುಂದಿನ ಮಕ್ಕಳ ಭವಿಷ್ಯ, ಕುಟುಂಬ ನಡೆಸುವುದನ್ನು ನೋಡಿರಿ, ಎಲ್ಲರೂ ಚೆನ್ನಾಗಿರಿ. ಮಕ್ಕಳ ಭವಿಷ್ಯಕ್ಕೆ , ಅವರ ಉನ್ನತಿಗೆ ಮುಂದಾಗರಿ ಎಂದು ಸಲಹೆ ನೀಡಿದರು.
ಜೇವರ್ಗಿ ಹಾಗೂ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕ್ಕುಂ ಪಟೇಲ್ ಇಜೇರಿ, ಸಿದ್ದಲಿಂಗರೆಡ್ಡಿ ಇಟಗಿ, ಕಲಬುರಗಿ ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ, ಕಾಂಗ್ರೆಸ್ ಪಕ್ಷದ ಜೇವರ್ಗಿ ಹಾಗೂ ಅಫಜಲ್ಪೂರ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…