ಕಲಬುರಗಿ: ರಾಜಕೀಯ ಪ್ರೇರಿತ ದಮನಕಾರಿ ಶಕ್ತಿಗಳಿಂದಾಗಿ ಜಿಲ್ಲೆಯ ರೈತರು, ಅಲ್ಪಸಂಖ್ಯಾತರು ಮಹಿಳೆಯರು ದುರ್ಬಲರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಮಾಪಿಯಾಗಳಿಗೆ ಮಟ್ಟ ಹಾಕಬೇಕೆಂದು ಒತ್ತಾಯಿಸಿ ಪೆÇಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ದಲಿತ ಸೇನೆಯ ರಾಜ್ಯಾಧ್ಯಕ್ಷÀ ಹನುಮಂತ ಯಳಸಂಗಿ ತಿಳಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ¥sುಡ್ ಮಾಪಿಯಾ, ಸ್ಯಾಂಡ್ ಮಾಪಿಯಾ, ಲ್ಯಾಂಡ್ ಮಾಪಿಯಾ ಇವುಗಳ ಜೊತೆ ಜೊತೆಗೆ ಸದ್ದಿಲ್ಲದೆ ಗೋ ಮಾಪಿಯಾ ದಂಧೆ ವ್ಯಾಪಕವಾಗಿ ಜಾಲಬೀಸುತ್ತಿದೆ, ಅದಕ್ಕೆ ಕಡಿವಾಣ ಹಾಕಬೇಕಿದ್ದ ಪೆÇಲೀಸ್ ಇಲಾಖೆ ಪರೋಕ್ಷವಾಗಿ ಸಹಕರಿಸುತ್ತಿದೆ ಎಂದ ಆರೋಪಿಸಿದ ಯಳಸಂಗಿ ಅವರು, ಹಿಂದಿನ ಬಿಜೆಪಿ ಸರಕಾರದ ಆಡಳಿತ ಸಂದರ್ಭದಲ್ಲಿ ಗೋ ರಕ್ಷಣೆಯ ನೆಪದಲ್ಲಿ ಜಿಲ್ಲೆಯಲ್ಲಿ ಜಪ್ತಿಮಾಡಿರುವ ಸಾವಿರಾರು ಹಸು-ಕರುಗಳು ನಾಪತ್ತೆಯಾಗಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಪ್ತಿಮಾಡಿರುವ ದನಕರುಗಳು ನಾಪತ್ತೆಯ ಹಿಂದೆ ಜವಾಬ್ದಾರಿ ಯಿಂದ ನಡೆದುಕೊಂಡು ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕೊಡಬೇಕಿದ್ದ ಪೆÇಲೀಸ್ ಇಲಾಖೆ, ಗೋ ಶಾಲೆಯ ಮುಖ್ಯಸ್ಥರು, ಪಶು ವೈದ್ಯರು ಮತ್ತು ಕಸಾಯಿ ಖಾನೆಯವರಿದ್ದಾರೆ. ಆದ್ದರಿಂದಲೇ ವಿದೇಶಕ್ಕೆ ಗೋ ಮಾಂಸ ರಪ್ತಿನಲ್ಲಿ ಭಾರತದ ನಂ.1 ಆಗಿದೆ ಎಂದು ಆರೋಪಿಸಿದರು.
2022ರಲ್ಲಿ ಗುವಿವಿ ಠಾಣೆಯ ಇನ್ಸ್‍ಪೆಕ್ಟರ್ ಅವರು ರೈತನಾದ ಮಹ್ಮದ ಜಾವೀದ್ ಅವರ ತೋಟದಲ್ಲಿದ್ದ 26 ಹಸು ಮತ್ತು ಕರುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ, ಆದರೆ ನ್ಯಾಯಾಲಯದ ಆದೇಶ ನೀಡಿದರು ಇಲ್ಲಿಯವರೆಗೆ ದನಕರುಗಳನ್ನು ಬಿಡುಗಡೆ ಮಾಡಿಲ್ಲ, ಜೊತೆಗೆ ಜಪ್ತಿಮಾಡಿರುವ ದನಕರುಗಳನ್ನು ರೇವಣಸಿದ್ದೇಶ್ವರ ಗೋ ಶಾಲೆಯಲ್ಲಿಡಲಾಗಿದೆ ಎಂದು ಪೆÇಲೀಸರು ಪತ್ರಬರೆದಿದ್ದರು. ಆದರೆ ಬಿಡುಗಡೆ ಆದೇಶ ಪತ್ರ ತಗೆದುಕೊಂಡು ಗೋ ಶಾಲೆಗೆ ಸಂಪರ್ಕಿಸಿದರೆ ಕೇವಲ 5 ದನಗಳು ಮಾತ್ರ ಜೀವಂತವಿವೆ ಎಂದು ಗೋಶಾಲೆಯವರು ಹೇಳುತ್ತಾರೆ, ಹಾಗಾದರೆ ಉಳಿದ 21 ಹಸುಗಳು ಎಲ್ಲಿಗೆ ಹೋದವು ಎಂದು ಕೇಳಿದರೆ ಅಧಿಕಾರಿಗಳಲ್ಲಿ ಉತ್ತರವಿಲ್ಲ.
ಈ ಎಲ್ಲಾ ಮಾಪಿಯಾ ಮಾಡುವಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮತ್ತು ಗೋ ಶಾಲೆಯವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ 26ರಂದು ಬೆಳಿಗ್ಗೆ 11 ಗಂಟೆಗೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದರು.
ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಶಿವಕುಮಾರ ಗೋಳಾ, ಮಹ್ಮದ್ ಅಶ್ರಫ್, ಶ್ರೀಕಾಂತ ರೆಡ್ಡಿ, ಗುರು ಎಸ್. ಮಾಳಗೆ, ಮಲ್ಲೇಶಿ ಯಾದವ್, ಪಂಚಶೀಲ ಚಾಂಬಾಳ ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…