ಆಳಂದ: ಆಳಂದ – ಅಫಜಲಪುರ ತಾಲ್ಲೂಕುಗಳು ಬೇರೆ – ಬೇರೆ ಇಲ್ಲ ಎರಡು ಒಂದೇ ಎಂದು ಅಫಜಲಪುರ ಶಾಸಕ ಎಂ ವೈ ಪಾಟೀಲ್ ಅವರು ಬಣ್ಣಿಸಿದ್ದಾರೆ.
ಪಟ್ಟಣದ ಎ.ವಿ.ಪಾಟೀಲ ಕಲ್ಯಾಣ ಮಂಟಪದಲ್ಲಿ ಶನಿವಾರ ನೂತನ ಶಾಸಕ ಬಿ.ಆರ್.ಪಾಟೀಲ ಹಾಗೂ ಎಂ.ವೈ.ಪಾಟೀಲ ಅವರಿಗೆ ಪ್ರಥಮ ದರ್ಜೆ ಗುತ್ತಿಗೇದಾರ,ಮಾಜಿ ಪುರಸಭೆ ಸದಸ್ಯ ರೇವಣಸಿದ್ದ ನಾಗೂರೆ ಹಾಗೂ ಅಭಿಮಾನಿಗಳಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಆಳಂದದಲ್ಲಿ ಕೂಡ ನನ್ನ ಗೆಲುವಿನ ಇಲ್ಲಿಯ ಅಭಿಮಾನಿಗಳು ಪಾತ್ರ ದೊಡ್ಡದು ಎಂದರು.
ಶಾಸಕ ಬಿ.ಆರ್.ಪಾಟೀಲ ಮಾತನಾಡಿ,ಇಂಡಿ ಗೇಟ್ ಮೂಲಕ ತಾಲ್ಲೂಕಿಗೆ ನೀರು ತರಲು ಪ್ರಯತ್ನಿಸಲಾಗುವುದು,ಭೀಮಾನದಿಯಿಂದ ನೀರು ತರುವ ಯೋಜನೆಯ ಕುರಿತು ಮುಂಬರುವ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದರು.
ಮುಖಂಡ ಮಹಾಂತೇಶ ಕವುಲಗಿ ಮಾತನಾಡಿ,ಶಾಸಕರ ರಾಜಕೀಯ ಜೀವನದ ಏಳು – ಬೀಳುಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾನಿಧ್ಯ ಹಿರೇಮಠ ಸೀದ್ದೇಶ್ವರ ಸ್ವಾಮಿಜಿ, ಅಧ್ಯಕ್ಷತೆ ಶಂಕರಾವ ಹತ್ತಿ ,ಭೀಮಾಶಂಕರ ಪಾಟೀಲ,ಕೆ.ಪಿ.ಸಿ.ಸಿ.ಸದಸ್ಯ ರಾಜಶೇಖರ್ ಪಾಟೀಲ,ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ,ಪಾಶಾ ಗುತ್ತೇದಾರ, ಪುರಸಭೆ ಸದಸ್ಯ ಫೀರದೋಸ್ ಅನ್ಸಾರಿ,ಸಲಾಂ ಸಗರಿ,ಬಸವರಾಜ್ ಪವಾಡಶೇಟ್ಟಿ, ರಫೀಕ್ ಸೇರಿದಂತೆ ಕುಟುಂಬ ಸದಸ್ಯರು,ಅಭಿಮಾನಿಗಳು ಇದ್ದರು.
ಶಾಸಕರನ್ನು ಬೆಳ್ಳಿ ಕಿರಿಟ ತೊಡಿಸಿ ಸನ್ಮಾನಿಸಲಾಯಿತು. ವಿವಿಧೆಡೆ ಮುಖಂಡರು ಸನ್ಮಾನಿಸಿದರು.ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಸ್ವಾಗತಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…