ಬಿಸಿ ಬಿಸಿ ಸುದ್ದಿ

ಜಯತೀರ್ಥರ ಮೂಲ ಸನ್ನಿಧಾನದ ಬಗ್ಗೆ ಅಪಪ್ರಚಾರಕ್ಕೆ ಆಕ್ರೋಶ;

ಕಲಬುರಗಿ: ಜಯತೀರ್ಥರ ಮೂಲವೃಂದಾವನದ ಬಗ್ಗೆ ವಿನಃ ಕಾರಣ ವಿವಾದ ಸೃಷ್ಟಿಸಿ ಭಕ್ತರ ನಂಬಿಕೆಗೆ ದ್ರೋಹ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಪ್ರ ಸಮಾಜದ ಮುಖಂಡರು, ಶ್ರೀ ಜಯತೀರ್ಥರ ಭಕ್ತವೃಂದದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

630 ವರ್ಷಗಳಿಂದ ಮಳಖೇಡವೇ ಶ್ರೀ ಜಯತೀರ್ಥರ ಮೂಲವೃಂದಾವನ ಸನ್ನಿಧಾನವೆಂದು ಪ್ರಶಿದ್ಧಿ ಪಡೆದಿದೆ. ನವ ವೃಂದವನದಲ್ಲಿನ ಶ್ರೀ ರಘುವರ್ಯತೀರ್ಥರ ಮೂಲವೃಂದಾವನಕ್ಕೆ ಜಯತೀರ್ಥರ ವೃಂದವನವೆಂದು ಪ್ರತಿಪಾದಿಸುವ ಕೆಲಸ ನಡೆಯುತ್ತಿದೆ. ಮಳಖೇಡಕ್ಕೆಆಗಮಿಸಿ ಜಯತೀರ್ಥರನ್ನು ಪೂಜಿಸುವ ಲಕ್ಷಾಂತರ ಭಕ್ತರ ಭಾವನೆ ಜತೆ ಕೆಲವರು ಆಟವಾಡುತ್ತಿದ್ದಾರೆ. ಅಂಥ ಕಿಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕೊಪ್ಪಳ ಜಿಲ್ಲೆಯ ನವವೃಂದಾವನ ದಲ್ಲಿ ಉತ್ತರಾದಿ ಮಠದ ಯತಿ ಶ್ರೀ  ರಘುವರ್ಯತೀರ್ಥರ ಮೂಲ ವೃಂದಾವನಕ್ಕೆ ಜಯತೀರ್ಥರ ವೃಂದಾವನ ಎಂದು ಬಿಂಬಿಸುತ್ತಿದ್ದಾರೆ. ಭಕ್ತರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಜುಲೈ 6.7 ಮತ್ತು8 ರಂದು ನವವೃಂದಾವನದ ರಘುವರ್ಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಜಯತೀರ್ಥರ ಆರಾಧನೆ ಮಾಡಲು ಕೆಲ ಕಿಡಿಗೇಡಿಗಳು ನಿರ್ಧಸಿದ್ದಾರೆ. ಆರಾಧನೆ ಮಾಡಲು ಕೊಪ್ಪಳ ಜಿಲ್ಲಾಡಳಿತ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಖಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಪಂ.ವಿಷ್ಣುದಾಸಾಚಾರ್ಯ ಖಜೂರಿ, ಪಂ.ಡಾ.ಗುರುಮಧ್ವಾಚಾರ್ಯ ನವಲಿ, ಪಂ.ಗೋಪಾಲಾಚಾರ್ಯ ಅಕಮಂಚಿ, ಪಂ. ವೆಂಕನ್ಣಾಚಾರ್ಯ ಪೂಜಾರ, ಪಂ. ಪ್ರಸನ್ನಾಚಾರ್ಯ ಜೋಶಿ, ಪಂ. ಅಭಯಾಚಾರ್ಯ, ಪಂ.ಭಿಮಸೇನಾಚಾರ್ಯ, ಪಂ. ಹಣಮಂತಾಚಾರ್ಯ ಸರಡಗಿ,ಪಂ. ವಿನೋದಾಚಾರ್ಯ ಗಲಗಲಿ, ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಅಭಿಜೀತ ದೇಶಮುಖ, ಡಾ.ಗಿರೀಶ ಗಲಗಲಿ, ರವಿ ಲಾತೂರಕರ್, ಡಾ. ಪ್ರಹ್ಲಾದ ಬುರ್ಲಿ, ಪ್ರಶಾಂತ ಕೊರಳ್ಳಿ, ಪ್ರಸನ್ನ ದೇಶಪಾಂಡೆ, ಜಯತೀರ್ಥ ಜೋಶಿ, ರಘುತ್ತಮ ಘಂಟಿ, ಅನಂತ ಮಿಸ್ತ್ರಿ, ಮಹೇಶ ದೇಶಪಾಂಡೆ, ಷಂದ್ರಕಾಂತ ದೇಶಮುಖ, ಕೆ.ಬಿ. ಕುಲಕರ್ಣಿ, ಸಮೀರ ದೇಶಪಾಂಡೆ,  ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ, ಡಾ.ಕಾಶಿಲಿಂಗಯ್ಯ ಮಠ, ಅನಂತ ಕಾಮೇಗಾಂವ, ವಿನಾಯಕ ಕುಲಕರ್ಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಹಾದೇವಿ ಹಾಗೂ ವಿಪ್ರ ಸಮಾಜದ ಮುಖಂಡು, ಮಹಿಳಾ ಭಜನಾ ಮಂಡಳಿಗಳ ಸದಸ್ಯೆಯರು ಪ್ರತಿ ಭಟನೆಯಲ್ಲಿದ್ದರು.

ಶತಮಾನಗಳಿಂದ ಮಳಖೇಡದಲ್ಲಿಯೇ ಜಯತೀರ್ಥರ ಆರಾಧನೆ ಮಾಡಲಾಗುತ್ತಿದೆ. ನವ ವೃಂದಾವನದಲ್ಲಿ ಜಯತೀರ್ಥರ ಮೂಲವೃಂದಾವನ ಇದೆ ಎಂದು ವಾದಿಸುವವರ ಪೂರ್ವಜರು ಕೂಡ ಮಳಖೇಡಕ್ಕೆ ಆಗಮಿಸಿ ಜಯತೀರ್ಥರ ದರ್ಶನಪಡೆದಿದ್ದಾರೆ. ಪುರಂದರ ದಾಸರಾದಿ ಯಾಗಿ ಎಲ್ಲ ಹರಿದಾಸರು ಮಳಖೇಡ ನಿವಾಸ ಎಂದು ಜಯತೀರ್ಥರನ್ನು ಕೊಂಡಾಡಿದ್ದಾರೆ. ಮಳಖೇಡವೇ ಜಯತೀರ್ಥರ ಮೂಲ ಸನ್ನಿಧಾನ ಎಂಬುದಕ್ಕೆ ಸಾಕಷ್ಟು ಪುರಾವೆಗಳುವೆ. ನವವೃಂದಾವನದಲ್ಲಿ ಜಯತೀರ್ಥರ ವೃಂದಾವನ ಇರುವ ಬಗ್ಗೆ ಅವರಲ್ಲಿ ಯಾವ ಸಾಕ್ಷಿಗಳಿಲ್ಲದೆ ವಿನಾ ಕಾರಣ ಗೊಂದಲ ಸೃಷ್ಠಿಸುತ್ತಿದ್ದಾರೆ. – ರಾಮಾಚಾರ್ಯ ಘಂಟಿ.

ಇದು ಕೇವಲ ವಿಪ್ರ ಸಮಾಜಕ್ಕೆ ಸಂಬಂಧಿಸಿದ್ದಲ್ಲ. ಜಿಲ್ಲೆಯ ಇತಿಹಾಸಕ್ಕೆ ಧಕ್ಕೆತರುವ ವಿಷಯವಾಗಿದೆ. ಹೀಗಾಗಿ ಜಿಲ್ಲೆಯ ಪ್ರತಿ ನಾಗರಿಕರು ಈ ಕುರಿತು ಧ್ವನಿ ಎತ್ತುವುದು ಅಗತ್ಯವಾಗಿದೆ. ಇತಿಹಾಸ ತಿರಚುವ ದಿಸ್ಹಾಸಕ್ಕೆ ಕೆಲವರು ಕೈ ಹಾಕಿದ್ದಾರೆ. ಹೀಗಾಗಿ ಜಿಲ್ಲೆಯ ಜನತೆ ಅಂಥವರ ವಿರುದ್ಧ ಪ್ರತಿಭಟಿಸುವುದು ಅಗತ್ಯವಗಿದೆ. – ಪಂ. ಡಾ. ಗುರುಮಧ್ವಾಚಾರ್ಯ ನವಲಿ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

1 hour ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

12 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

12 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

14 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

14 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

15 hours ago