ಕಲಬುರಗಿ; ಅಂದು ಜನರು ದುಡಿಮೆ ನಂಬಿ ಬದುಕುತ್ತಿದ್ದರು, ಅದಕ್ಕೆ ಜೀವನ ನೆಮ್ಮದಿಯಿಂದ ಕೂಡಿತ್ತು, ಇಂದು ಕೆಲವು ಜನರು ದುಡ್ಡು ನಂಬಿ ಬದುಕುತ್ತಿದ್ದಾರೆ ಅವರಿಗೆ ಆತ್ಮತೃಪ್ತಿ ಇಲ್ಲ, ನೆಮ್ಮದಿಯ ಜೀವನ ನಮ್ಮದಾಗಬೇಕಾದರೆ ಆಧ್ಯಾತ್ಮಿಕ ಕಾರ್ಯಕ್ರಮ ಹಾಗೂ ಗುರುಗಳ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ಶಿಕ್ಷಣ ಇಲಾಖೆಯಲ್ಲಿ ಸೇವೆಗೆಯುತ್ತಿರುವ ನಿರ್ಮಲಾ ಎಸ್ ಸಿರಗಾಪುರ ಹೇಳಿದರು.
ನಗರದ ಭವಾನಿ ನಗರದಲ್ಲಿರುವ ಬಬಲಾದ ಮಠದಲ್ಲಿ 164ನೇ ಶಿವನುಭವಗೋಷ್ಠಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಾ ಹಿಂದೆ ಸಂತರು,ಮಾಹಾಂತರು, ಶರಣರು ಕೂಡ ಗುರುವಿನ ಮಾರ್ಗದರ್ಶನದಿಂದ ಆದರ್ಶ ವ್ಯಕ್ತಿಗಳಾಗಿ ಅಮರರಾಗಿದ್ದಾರೆ.
ಗುರುವಿನ ಸ್ಥಾನ ಬಹಳ ಪವಿತ್ರವಾದದ್ದು ಆ ಸ್ಥಾನಕ್ಕೆ ಕಪ್ಪು ಚುಕ್ಕೆ ಬರದಂತೆ ನೋಡಿಕೊಳ್ಳುವುದು ಗುರುವಿನ ಪಾತ್ರ ಬಹು ಮುಖ್ಯವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಕೃಷಿ ಪತ್ತಿನ ಸಹಕಾರ ಸಂಘದ ತಾಲೂಕ ಕಾರ್ಯದರ್ಶಿಗಳ ಸಂಘದ ಉಪಾಧ್ಯಕ್ಷರಾದ ಶಿವರುದ್ರ ಕರಿಕಲ್ ಕಣ್ಣಿ ಮಾತನಾಡುತ್ತಾ ಸಂದರ್ಭಗಳು ಭವಿಷ್ಯವನ್ನು ನಿರ್ಮಿಸುವುದಿಲ್ಲ ಆದರೆ ನಾವು ತೆಗೆದುಕೊಂಡ ಒಳ್ಳೆಯ ನಿರ್ಧಾರಗಳು ನಮ್ಮ ಜೀವನದ ಭವಿಷ್ಯ ನಿರ್ಮಿಸುತ್ತವೆ. ಸಮಯ ಸಂದರ್ಭದೊಂದಿಗೆ ಉತ್ತಮವಾದ ನಿರ್ಧಾರ ತೆಗೆದುಕೊಂಡ ವ್ಯಕ್ತಿ ಮಹಾನ್ ವ್ಯಕ್ತಿಯಾಗುತ್ತಾನೆ.
ಇಂದಿನ ದಿನಗಳಲ್ಲಿ ಮನುಷ್ಯರ ಮನಸ್ಸುಗಳು ಚಿಕ್ಕದಾಗಿ ಮನೆಗಳು ದೊಡ್ಡದಾಗುತ್ತಿವೆ. ಮಕ್ಕಳಿಗೆ ಹಿರಿಯರಿಂದ ಪಡೆಯಬೇಕಾಗಿದ್ದ ಸಂಸ್ಕಾರ ಸಿಗುತ್ತಿಲ್ಲ ಏಕೆಂದರೆ ಹಿರಿಯರು ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯುತ್ತಿರುವುದು ವಿಷಾದಕರ ಬೆಳವಣಿಗೆ ನಮ್ಮ ಮಕ್ಕಳು ಸಂದಿಗ್ಧ ಪರಿಸ್ಥಿತಿಯಲ್ಲಿ ಬದುಕು ದೂಡುತ್ತಿದ್ದಾರೆ.
ಹಿರಿಯರ ವಿಚಾರ ಅನುಭವ ಮಕ್ಕಳಿಗೆ ಕೊಡಿಸುವುದರೊಂದಿಗೆ ಹೆತ್ತವರನ್ನು ಉತ್ತಮವಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂಗಮೇಶ ನಾಗೂರ, ಮಾಣಿಕ ಮಿರ್ಕಲ, ಕವಿತಾ ದೇಗಾಂವ, ರೇವಣಸಿದ್ದಯ್ಯ ಶಾಸ್ತ್ರಿ, ಶರಣು ಜವಳಗಾ, ಸಿದ್ದಣ್ಣ ವಾಡಿ, ಗುರುರಾಜ ಹಸರಗುಂಡಗಿ, ರಾಜೇಶ್ರೀ ಗುಂಡಣ್ಣ ಡಿಗ್ಗಿ, ಚಂದ್ರಕಲಾ ಕಾಳಗಿ ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…