ಬಿಸಿ ಬಿಸಿ ಸುದ್ದಿ

“ರಸ್ತೆ ಸುರಕ್ಷತಾ ಅಪಾಯದ ಅಂಶಗಳು” ಸಾರಾಂಶ ವರದಿ ಬಿಡುಗಡೆ

ಬೆಂಗಳೂರು; ಜಾನ್ಸ್ ಹಾಪ್ಕಿನ್ಸ್ ಇಂಟರ್ ನ್ಯಾಷನಲ್ ಇಂಜೂರಿ ರಿಸರ್ಚ್ ಘಟಕದವರು ಮತ್ತು ನಿಮಾನ್ಸ್ ಸಂಸ್ಥೆಯವರ ಸಹಭಾಗಿತ್ವದಲ್ಲಿ ಸಿದ್ಧಪಡಿಸಿರುವ “ರಸ್ತೆ ಸುರಕ್ಷತಾ ಅಪಾಯದ ಅಂಶಗಳು-2022” ಎಂಬ ಸಾರಾಂಶ ವರದಿಯನ್ನು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಡುಗಡೆ ಮಾಡಿದ್ದಾರೆ.

ಈ ವರದಿಯನ್ನು ಕರ್ನಾಟಕದಲ್ಲಿ ಬ್ಲೂಮ್ ಬರ್ಗ್ ಫಿಲಾಂತ್ರೋಫಿಸ್ ಇನಿಷಿಯೇಟಿವ್ ಫಾರ್ ಗ್ಲೋಬಲ್ ರೋಡ್ ಸೇಫ್ಟಿ ನಡೆಸುತ್ತಿರುವ ಚಟುವಟಿಕೆಗಳ ಭಾಗವಾಗಿ ಬೆಂಗಳೂರು ಮೆಟ್ರೋಪಾಲಿಟನ್ ವಲಯದ ದ್ವಿಚಕ್ರ ವಾಹನ ಬಳಕೆದಾರರನ್ನು ನವೆಂಬರ್- 2021 ರಿಂದ ಅಕ್ಟೋಬರ್ 2022 ರವರೆಗೆ ಗಮನಿಸಿ ರಸ್ತೆ ಸುರಕ್ಷತಾ ಅಪಾಯದ ಅಂಶಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ 1,21,098 ದ್ವಿಚಕ್ರ ವಾಹನ ಸವಾರರ ಪೈಕಿ ಕೇವಲ 34 ಶೇಕಡದಷ್ಟು ಸವಾರರು ಹೆಲ್ಮೆಟ್‍ಗಳನ್ನು ಸರಿಯಾದ ರೀತಿಯಲ್ಲಿ ಧರಿಸುತ್ತಾರೆ.

ಅಧ್ಯಯನದಲ್ಲಿ ರೂಢಿಯಲ್ಲಿರುವ ಮೂರು ರಸ್ತೆ ಸುರಕ್ಷತಾ ಅಪಾಯ ಉಂಟುಮಾಡುವ ಅಂಶಗಳಾದ: ಚಾಲನಾವೇಗ, ಹೆಲ್ಮೆಟ್ ಧರಿಸುವಿಕೆ, ಸೀಟ್ ಬೆಲ್ಟ್ ಧರಿಸುವಿಕೆ ಮತ್ತು ಮಕ್ಕಳ ನಿಯಂತ್ರಕ ಬಳಸುವಿಕೆಯ ಕುರಿತು ಮೌಲ್ಯಮಾಪನ ಮಾಡಲಾಗಿದೆ.

ಅಧ್ಯಯನದಿಂದ ಹೊರಹೊಮ್ಮಿರುವ ಅಂಶಗಳು: 88% ದ್ವಿಚಕ್ರ ವಾಹನ ಸವಾರರು ಹೆಲ್ಮೆಟನ್ನು ಧರಿಸಿದರೂ, ಕೇವಲ 34% ದಷ್ಟು ಸವಾರರು ಹೆಲ್ಮೆಟ್ಗಳನ್ನು ಸರಿಯಾದ ರೀತಿಯಲ್ಲಿ ಧರಿಸುತ್ತಾರೆ. 18 ವರ್ಷಪ್ರಾಯದೊಳಗಿನ ಬೈಕ್ ಸವಾರರಲ್ಲಿ ಕೇವಲ 8% ಅಷ್ಟು ಸವಾರರು ಹೆಲ್ಮೆಟ್ಗಳನ್ನು ಸರಿಯಾದ ರೀತಿಯಲ್ಲಿ ಧರಿಸುತ್ತಾರೆ. ಹಿಂಬದಿ ಸವಾರಲ್ಲಿ 16% ರಷ್ಟು ಮಂದಿ ಸರಿಯಾದ ರೀತಿಯಲ್ಲಿ ಹೆಲ್ಮೆಟನ್ನು ಧರಿಸುತ್ತಾರೆ. ವಾಹನ ಚಾಲನಾ ವೇಗದ ಅಧ್ಯಯನವನ್ನು 1,72,164 ವಾಹನಗಳಲ್ಲಿ ನಡೆಸಿದ್ದು, 30% ದಷ್ಟು ಚಾಲಕರು ನಿಗದಿಪಡಿಸಿರುವ ವೇಗದಮಿತಿಯಿಂದ ಚಲಾಯಿಸಿರುವುದು ಕಂಡುಬಂದಿರುತ್ತದೆ.

ವಾಹನಗಳ ಪೈಕಿ 44% ದಷ್ಟು ಸ್ಪೋಟ್ರ್ಯುಟಿಲಿಟಿ ವಾಹನ ಮತ್ತು 40% ದಷ್ಟು ಸಿಡಾನ್ ವಾಹನಗಳ ಚಾಲಕರು ವೇಗದ ಮಿತಿಯನ್ನು ಅನುಸರಿಸುವುದಿಲ್ಲ. ಬೆಂಗಳೂರು ಮೆಟ್ರೋಪಾಲಿಟನ್ ವಲಯದಲ್ಲಿ ವೇಗದ ಮಿತಿಯು ಸರಾಸರಿ 52 ಕಿ.ಮೀ/ಘಂಟೆಯಾಗಿರುತ್ತದೆ.
ಪೆÇಲೀಸ್ ಇಲಾಖೆಯ ಪ್ರಕಾರ 2020-21ನೇ ಸಾಲಿನಲ್ಲಿ ರಸ್ತೆ ಅಪಘಾತಗಳಿಂದ ಮರಣಹೊಂದಿದ 10,038 ಜನರಲ್ಲಿ 9,101 ಜನರ ಮರಣ ಅತಿವೇಗದಿಂದ ಸಂಭವಿಸಿರುತ್ತದೆ. ಅಧ್ಯಯನ ನಡೆಸುವ ಸಮಯದಲ್ಲಿ 66% ದಷ್ಟು ಚಾಲಕರು ಮತ್ತು 12% ದಷ್ಟು ಸಹಪ್ರಯಾಣಿಕರು ಸೀಟ್ ಬೆಲ್ಟ್ ಅನ್ನು ಧರಿಸಿರುವುದು ಕಂಡುಬರುತ್ತದೆ. ಕೇವಲ 2% ದಷು ್ಟಮಕ್ಕಳ ನಿಯಂತ್ರಕ ಬಳಸಲಾಗಿರುತ್ತದೆ.

ದ್ವಿಚಕ್ರ ವಾಹನಸವಾರರ ಅತ್ಯಂತ ಕಡಿಮೆ ಹೆಲ್ಮೆಟ್ ಧರಿಸುವಿಕೆಯು ಆಘಾತಕಾರಿಯಾಗಿದ್ದು, ಇದನ್ನು ನಿಯಂತ್ರಿಸಲು ಸರ್ಕಾರದೊಂದಿಗೆ ವಿವಿಧ ಕ್ಷೇತ್ರಗಳ ಸರ್ಕಾರೇತರ ಸಂಘಸಂಸ್ಥೆಗಳ ಸಹಭಾಗಿತ್ವದೊಂದಿಗೆ ಸುರಕ್ಷಿತ ವ್ಯವಸ್ಥೆಗಳ ವಿಧಾನವನ್ನು ಬಳಸಿ ಹೆಲ್ಮೆಟ್ ಧರಿಸುವಿಕೆಯನ್ನು ಮೋಟಾರು ವಾಹನ ಕಾಯ್ದೆ 1988, ಕಲಂ 129 (ಎ) ಮತ್ತು 129 (ಬಿ) ಅನ್ನು ಕಡ್ಡಾಯವಾಗಿ ಕಾರ್ಯಗತಗೊಳಿಸಿ ಅನುಸರಿಸಬೇಕಾಗಿದೆ.

ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರು ಮಾತನಾಡಿ ಜಾನ್ಸ್ ಹಾಪ್ಕಿನ್ಸ್ ಇಂಟರ್ ನ್ಯಾಷನಲ್ ಇಂಜೂರಿ ರಿಸರ್ಚ್ ಘಟಕ ಮತ್ತು ನಿಮಾನ್ಸ್ ನಡೆಸಿರುವ ಅಧ್ಯಯನದಿಂದ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಅನೇಕ ಜನರು ಉತ್ತಮಗುಣಮಟ್ಟದ ಹೆಲ್ಮೆಟ್ ಗಳನ್ನು ಸರಿಯಾದ ರೀತಿಯಲ್ಲಿ ಧರಿಸದೇ ಇರುವುದು ತಿಳಿದುಬರುತ್ತದೆ. ಪಾಲುದಾರಿಕೆ ಇಲಾಖೆಗಳ ಮುಖಾಂತರ ವೇಗದ ಮಿತಿಯೊಳಗಿನ ಚಾಲನೆ, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸುವಿಕೆಯನ್ನು ಜನರು ಅನುಸರಿಸುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧ್ಯಯನದ ಅಂಶಗಳನ್ನು ಬಳಸಲಾಗುವುದೆಂದು ತಿಳಿಸಿದರು.

ಜಾನ್ಸ್ ಹಾಪ್ಕಿನ್ಸ್ ಇಂಟರ್ ನ್ಯಾಷನಲ್ ಇಂಜೂರಿ ರಿಸರ್ಚ್ ಘಟಕದ ನಿಷಿತ್ ಪಟೇಲ್‍ರವರು ಈ ವೀಕ್ಷಣಾ ಅಧ್ಯಯನವು ಕರ್ನಾಟಕದಲ್ಲಿ ಚಾಲಕರು ಹೆಲ್ಮೆಟ್ ಧರಿಸುವ ವಿಧಾನವನ್ನು ಸರಿಪಡಿಸಬೇಕು ಎಂಬುದನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವು ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಇದಕ್ಕಾಗಿ ಜಾನ್ಸ್ ಹಾಪ್ಕಿನ್ಸ್ ಇಂಟರ್ ನ್ಯಾಷನಲ್ ಇಂಜೂರಿ ರಿಸರ್ಚ್ ಘಟಕ ಮತ್ತು ನಿಮಾನ್ಸ್ ಸಂಸ್ಥೆಗಳು ಕರ್ನಾಟಕ ರಾಜ್ಯದಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಂತ್ರಿಕ ಸಹಾಯವನ್ನು ನೀಡಲು ಸದಾಸಿದ್ದವಿರುವುದಾಗಿ ತಿಳಿಸಿದರು.

ದತ್ತಾಂಶಗಳ ಪ್ರಕಾರ, 34% ದಷ್ಟು ಜನರು ಹೆಲ್ಮೆಟನ್ನು ಸರಿಯಾದ ರೀತಿಯಲ್ಲಿ ಬಳಸುತ್ತಾರೆ. ಹೆಚ್ಚು ಜನರು ಕಳಪೆಮಟ್ಟದ ಅದರಲ್ಲೂ ಶಿರಕ್ಕೆ ಯಾವುದೇ ರಕ್ಷಣೆ ನೀಡದ ಹೆಲ್ಮೆಟ್ ಗಳನ್ನು ಧರಿಸುವುದು ಕಂಡುಬರುತ್ತದೆ ಆದ್ದರಿಂದ ಕಳಪೆಮಟ್ಟದ / ಕೈಗಾರಿಕಾ ಕ್ಯಾಪ್ ನಂತಹ ಹೆಲ್ಮೆಟ್ಗಳ ಮಾರಾಟವನ್ನು ನಿμÉೀಧಿಸುವುದು, ಗುಣಮಟ್ಟದ ಹೆಲ್ಮೆಟ್ಗಳು ಜನರಿಗೆ ಲಭ್ಯವಾಗುವ ವಿಧಾನ ಮತ್ತು ಸರಿಯಾದ ರೀತಿಯ ಧರಿಸುವಿಕೆ ಬಗ್ಗೆ ಮಾಹಿತಿಯನ್ನು ತಿಳಿಸಲು ಕ್ರಮಕೈಗೊಳ್ಳಬೇಕೆಂದು ನಿಮಾನ್ಸ್‍ನ ಹೆಚ್ಚುವರಿ ಪ್ರಾಚಾಯ ರಾದ ಡಾ. ಗೌತಮ್ ಸುಕುಮಾರ್ ಹೇಳಿದರು.

ಅಧ್ಯಯನದ ಪ್ರಮುಖ ಅಂಶಗಳು ಸಮಸ್ಯೆಗಳ ಒಳನೋಟವನ್ನು ತೋರಿಸುವುದಲ್ಲದೆ, ರಸ್ತೆ ಸುರಕ್ಷತಾ ಸ್ಥಂಭಗಳಾದ ಪ್ರವರ್ತನ, ರಸ್ತೆ ನಿರ್ಮಾಣ, ರಸ್ತೆಸುರಕ್ಷತಾ ಶಿಕ್ಷಣ ಮತ್ತು ತುರ್ತು ಚಿಕಿತ್ಸೆ ಮಾಡುವ ಪಾಲುದಾರಿಕೆ ಇಲಾಖೆಗಳ ಚಟುವಟಿಕೆಗಳ ಏಕೀಕರಣ ಮಾಡಲು ಸಹಾಯಕವಾಗುತ್ತದೆ.

ಬ್ಲೂಮ್ ಬರ್ಗ್ ಫಿಲಾಂತ್ರೋಫಿಸ್ ಇನಿಷಿಯೇಟಿವ್ ಫಾರ್ ಗ್ಲೋಬಲ್ ರೋಡ್ಸೇಫ್ಟಿ ನಡೆಸುತ್ತಿರುವ ಕಾರ್ಯಕ್ರಮದ ಭಾಗವಾಗಿ ಜಾನ್ಸ್ ಹಾಪ್ಕಿನ್ಸ್ ಇಂಟರ್ ನ್ಯಾಷನಲ್ ಇಂಜೂರಿ ರಿಸರ್ಚ್ ಘಟಕ ಮತ್ತು ನಿಮಾನ್ಸ್ ಸಂಸ್ಥೆಗಳು ರಸ್ತೆ ಬಳಕೆದಾರರ ನಡವಳಿಕೆ ಬಗ್ಗೆ ದತ್ತಾಂಶವನ್ನು ಸಂಗ್ರಹಿಸಿ, ಸಂಬಂಧಪಟ್ಟವರಿಗೆ ಕ್ರಮಕೈಗೊಳ್ಳಲು ಪೂರಕ ಮಾಹಿತಿ ನೀಡಲು ಬದ್ದವಾಗಿರುತ್ತದೆ ಎಂದು ತಿಳಿಸಿದರು.

Bloomberg Philanthropies ಜಾಗತಿಕ ರಸ್ತೆ ಸುರಕ್ಷತೆಗಾಗಿ ಲೋಕೋಪಕಾರಿ ಉಪಕ್ರಮ: ಜಾಗತಿಕ ರಸ್ತೆ ಸುರಕ್ಷತೆಗಾಗಿ ಬ್ಲೂಮ್ ಬಗ್ರ್ಲೋಕೋಪಕಾರಿ ಉಪಕ್ರಮವು ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಮತ್ತು ದೇಶದೊಳಗಿನ ಸರ್ಕಾರಿ ಮತ್ತು ಸರ್ಕಾರೇತರ ಪಾಲುದಾರರೊಂದಿಗೆ ಸಮನ್ವಯಗೊಳಿಸಲು ವಿಶ್ವದ ಪ್ರಮುಖ ರಸ್ತೆ ಸುರಕ್ಷತಾ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತದೆ. ಃIಉಖS ಫಲಿತಾಂಶಗಳನ್ನು ಸಾಧಿಸಲು ಮತ್ತು ನಿರಂತರವಾಗಿ ಪ್ರಗತಿಯನ್ನು ನಿರ್ಣಯಿಸಲು ಉತ್ತಮ ಗುಣಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಾರ್ಯವಿಧಾನಗಳನ್ನು ಬಳಸುವುದರ ಮೇಲೆ ಒತ್ತು ನೀಡುತ್ತದೆ.

ಜಾನ್ಸ್ಹಾಪ್ಕಿನ್ಸ್ ಇಂಟನ್ರ್ಯಾಷನಲ್ ಇಂಜುರಿ ರಿಸರ್ಚ್ ಯೂನಿಟ್: ಜಾನ್ಸ್ಹಾಪ್ಕಿನ್ಸ್ ಇಂಟನ್ರ್ಯಾಷನಲ್ ಇಂಜುರಿ ರಿಸರ್ಚ್ ಯುನಿಟ್ ಕಡಿಮೆ ಮತ್ತು ಮಧ್ಯಮ-ಆದಾಯದ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಹೆಚ್ಚುತ್ತಿರುವ ಗಾಯಗಳ ಹೊರೆಗೆ ಪರಿಣಾಮಕಾರಿ ಪರಿಹಾರಗಳನ್ನು ಗುರುತಿಸಲು ಶ್ರಮಿಸುತ್ತದೆ, ಸಾರ್ವಜನಿಕ ನೀತಿ ಮತ್ತು ಅಭ್ಯಾಸದ ಮೇಲೆ ಪ್ರಭಾವ ಬೀರುತ್ತದೆ.

ಡಾ|| ಎನ್.ವಿ.ಪ್ರಸಾದ್, ಐಎಎಸ್, ಕಾರ್ಯದರ್ಶಿ, ಸಾರಿಗೆ, ಅಲೋಕ್ ಕುಮಾರ್, ಐಪಿಎಸ್, ಆಯುಕ್ತರು, ಸಂಚಾರ ಮತ್ತು ರಸ್ತೆ ಸುರಕ್ಷತೆ, ಡಾ||ಬಿ.ಆರ್.ರವಿಕಾಂತೇಗೌಡ, ಐಪಿಎಸ್, ಐಜಿಪಿ, ಕೇಂದ್ರ, ಎಂ.ಎನ್.ಅನುಚೇತ್, ಐಪಿಎಸ್, ಜಂಟಿ ಆಯುಕ್ತರು, ಬೆಂಗಳೂರು ಸಂಚಾರ ಪೆÇಲೀಸ್, ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್, ಎಸ್ಪಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೆÇಲೀಸ್, ಜೆ.ಪುರುμÉೂೀತ್ತಮ್, ಹೆಚ್ಚುವರಿ ಆಯುಕ್ತರು, ಸಾರಿಗೆ ಇಲಾಖೆ ಮತ್ತು ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಮತ್ತು ಮಲ್ಲಿಕಾರ್ಜುನ, ಕರ್ನಾಟಕ ಸಾರಿಗೆ ಹೆಚ್ಚುವರಿ ಆಯುಕ್ತರು ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

1 hour ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

1 hour ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

1 hour ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago