ಬಿಸಿ ಬಿಸಿ ಸುದ್ದಿ

ಸರ್ವಧರ್ಮ, ದೇವರ ಪೂಜೆಯೊಂದಿಗೆ ಕಾರಂಜಾ ಹೋರಾಟದ ವರ್ಷಾಚರಣೆ

ಬೀದರ: ಬೀದರ ಜಿಲ್ಲೆಯ ಜನರಿಗೆ ನೀರು ಉಣ ಸುವ ಕಾರಂಜಾ ಯೋಜನೆ ನಿರ್ಮಾಣಕ್ಕೆ ತಾಯಿ ಸಮಾನ ಭೂಮಿ ನೀಡಿದ ರೈತ ಸಂತ್ರಸ್ತರ ನ್ಯಾಯಯುತವಾದ ಬೇಡಿಕೆ ಈಡೇರಿಸಲು ರಾಜಕಿಯ ಇಚ್ಛಾಶಕ್ತಿ ಅತೀ ಅವಶ್ಯಕವಾಗಿದೆ ಎಂದು ಕಲ್ಯಾಣ ಕರ್ನಾಟಕ ಹಿರಿಯ ಹೋರಾಟಗಾರರಾದ ಲಕ್ಷ÷್ಮಣ ದಸ್ತಿಯವರು ನೂತನ ಸರಕಾರಕ್ಕೆ ಆಗ್ರಹಿಸಿದರು. ಸಂತ್ರಸ್ತರ ಆಹೋರಾತ್ರಿ ಸತ್ಯಾಗ್ರಹದ ವರ್ಷಾಚರಣೆ ನಿಮಿತ್ಯ ಸರ್ವಧರ್ಮ ಸಮನ್ವಯಕ್ಕೆ ಪೂರಕವಾಗಿ ಎಲ್ಲಾ ಧರ್ಮದ ದೇವರುಗಳ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ವಿನೂತನ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ನೂತನ ಸರಕಾರದ ಬೀದರ ಜಿಲ್ಲೆಯ ಉಭಯ ಸಚಿವರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿರುವುದು ಸ್ವಾಗತಾರ್ಹ ವಿಷಯವಾಗಿದೆ ಇದಕ್ಕೆ ಪೂರಕವಾಗಿ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸಕರಾತ್ಮಕವಾಗಿ ಸ್ಪಂದನೆ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಕಾರಂಜಾ ನೀರಾವರಿ ಯೋಜನೆಗೆ ಭೂಮಿ ಮನೆ, ಮಠ ಕಳೆದುಕೊಂಡ ರೈತ ಸಂತ್ರಸ್ತರು ಸುಮಾರು ಒಂದು ವರ್ಷದಿಂದ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. 1ನೇ ಜುಲೈ 2022ರಿಂದ 1ನೇ ಜುಲೈ2023 ಕ್ಕೆ ಆಹೋರಾತ್ರಿ ಸತ್ಯಾಗ್ರಹ ಹೋರಾಟ ಒಂದು ವರ್ಷಕ್ಕೆ ಕಾಲಿಟ್ತಿದೆ. ಈ ಹಿನ್ನಲೆಯಲ್ಲಿ ಹೋರಾಟದ ಸಂಪ್ರದಾಯದಂತೆ ಒಂದು ವರ್ಷದ ವರ್ಷಾಚರಣೆಯ ನಿಮಿತ್ಯ ಕಲ್ಯಾಣ ಕರ್ನಾಟಕದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ವಿನೂತನ ಮಾದರಿಯ ಹೋರಾಟ ನಡೆಸಿ ಸರಕಾರದ ಗಮನ ಸೆಳೆದಿದ್ದಾರೆ.

ಕಾರಂಜಾ ರೈತ ಸಂತ್ರಸ್ತರ ಗಾಂಧಿ ಮತ್ತು ಅಂಬೇಡ್ಕರ ಮಾರ್ಗದ ಹೋರಾಟಕ್ಕೆ ಬೀದರ ಜಿಲ್ಲೆಯ ಪೋಲಿಸ ಆಡಳಿತ ಸ್ಪಂದಿಸದೇ ಇರುವುದು ಖೇದಕರ ವಿಷಯವೆಂದು ಮಾತಾಡಿದ ಅವರು, ಒಂದು ವರ್ಷದ ಹೋರಾಟದ ಅವಧಿಯಲ್ಲಿ ಹಿಂದಿನ ಸರಕಾರ ಕೋಣದ ರೀತಿಯಲ್ಲಿ ವರ್ತಿಸಿರುವ ಕಾರಣ ಕೋಣದ ಎದುರು ಕಿನ್ನುರಿ ಬಾರಿಸುವ ಹೋರಾಟಕ್ಕೆ ಪೋಲಿಸ್ ಇಲಾಖೆ ಸಹಕರಿಸದೇ ಇರುವುದು ನೋವುಂಟಾಗಿದೆ ಎಂದು ತಿಳಿಸಿದರು. ಬರುವ ದಿನಗಳಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿರುವಂತೆ ಕಾಲಮಿತಿಯಲ್ಲಿ ಕಾರಂಜಾ ಸಂತ್ರಸ್ತರ ಬೇಡಿಕೆ ಈಡೇರಿಸಲು ಸವಾಲಾಗಿ ಸ್ವೀಕರಿಸಬೇಕೆಂದು ಜಿಲ್ಲೆಯ ಉಭಯ ಸಚಿವರಲ್ಲಿ ಆಗ್ರಹಿಸಿದರು.

ಜುಲೈ ೨೦೨೨ ರಿಂದ ಹನ್ನೊಂದು ತಿಂಗಳ ಅವಧಿಯಲ್ಲಿ ಹಿಂದಿನ ಸರಕಾರದ ಬೀದರ ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ, ಸ್ಥಳಿಯ ಸಚಿವರು, ಕೇಂದ್ರ ಸಚಿವರು ಆಡಳಿತ ರೂಢ ಜನಪ್ರತಿನಿಧಿಗಳು, ಸೌಜನ್ಯಕ್ಕಾದರೂ ಗಾಂಧಿ, ಅಂಬೇಡ್ಕರ ಮಾರ್ಗದ ಈ ಹೋರಾಟಕ್ಕೆ ಸ್ಪಂದನೆ ನೀಡದೆ ನಿರ್ಲಕ್ಷ ಮತ್ತು ಮಲತಾಯಿ ಧೋರಣೆ ಮಾಡಿರುವುದು ಖೇದಕರ ವಿಷಯವಾಗಿದೆ ಎಂದು ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹುಚಕನಳ್ಳಿ ಸೇರಿದಂತೆ ಅನೇಕರು ನೋವು ತೋಡಿಕೊಂಡರು.

ಜುಲೈ-೨೦೨೨ರಿಂದ ನಿರಂತರವಾಗಿ ನಡೆದಿರುವ ಕಾರಂಜಾ ಸಂತ್ರಸ್ತರ ಆಹೋರಾತ್ರಿ ಧರಣ ಸತ್ಯಾಗ್ರಹಕ್ಕೆ ಬೆಂಬಲಿಸಿ ಮಠಾಧೀಶರು ಸೇರಿದಂತೆ ಸಾಮಾಜಿಕ ಕಳಕಳಿಯಿರುವ ಜನಪ್ರತಿನಿಧಿಗಳು ಆಯಾ ಸಂಘ ಸಂಸ್ಥೆ ಸಂಘಟನೆಗಳು ಬೆಂಬಲಿಸಿ ಬೃಹತ್ ಹೋರಾಟಗಳು ಸಹ ನಡೆಸಿದ್ದಾರೆ. ಮಳೆಗಾಲ, ಚಳಿಗಾಲ ಬೇಸಿಗೆ ಎನ್ನದೇ ಒಂದು ವರ್ಷದಿಂದ ನಮ್ಮ ನ್ಯಾಯಯುತವಾದ ಬೇಡಿಕೆಗೆ ಒತ್ತಾಯಿಸಿ ಹೋರಾಟ ಮುಂದುವರೆದಿದೆ.

ಇಂದಿನ ಒಂದು ವರ್ಷದ ವರ್ಷಾಚರಣೆಯ ಸರ್ವಧರ್ಮ ಪ್ರಾರ್ಥನೆಯ ಪ್ರತೀಕವಾದ ವಿನೂತನ ಹೋರಾಟದಲ್ಲಿ ಮುಖಂಡರಾದ ಸಾಜಿದ ಅಲಿ ರಂಜೋಲಿ, ದಯಾನಂದ ಪಾಟೀಲ, ಚಂದ್ರಕಾಂತ ಹಾಲಹಳ್ಳಿ ವಕೀಲರು, ರಾಜಪ್ಪ ಕಮಲಪೂರ ಮುಂತಾದವರು ಉದ್ದೇಶಿಸಿದ ಮಾತನಾಡಿ, ಬೇಡಿಕೆ ಈಡೇರದಿದ್ದರೆ ಸಂಘಟಿತ ಹೋರಾಟಕ್ಕೆ ಸಿದ್ಧರಾಗಿರಬೇಕೆಂದು ಆಗ್ರಹಿಸಿದರು.

ಹೋರಾಟದ ಸಂಪ್ರದಾಯದAತೆ, ಒಂದು ವರ್ಷಕ್ಕೆ ಕಾರಂಜಾ ಸಂತ್ರಸ್ತರ ಹೋರಾಟ ಕಾಲಿಟ್ಟಿರುವ ಸಂದರ್ಭದಲ್ಲಿ ಕೋಣದ ಎದುರು ಕಿಣ್ಣೂರಿ ಬಾರಿಸುವ ಇಂದಿನ ಹೋರಾಟದ ಮುಖಾಂತರ ನಮ್ಮ ಹೋರಾಟದ ವಾಸ್ತವಿಕತೆಯನ್ನು ಸರಕಾರದ ಎದುರು ಮತ್ತು ಜನಮಾನಸದ ಎದುರು ಸಂತ್ರಸ್ತರು ನೋವು ವ್ಯಕ್ತಪಡಿಸಿದರು.

ಈ ಹಿಂದಿನ ಸರಕಾರದ ಅವಧಿಯಲ್ಲಿ ನಮ್ಮ ಹೋರಾಟಕ್ಕೆ ಕೋಣದ ಎದುರು ಕಿನ್ನೂರಿ ಬಾರಿಸುವ ಪರಿಸ್ಥಿತಿಯಾಗಿದ್ದನ್ನು ನೆನೆಸುತ್ತ ಪ್ರಸ್ತುತ ಸಿದ್ಧರಾಮಯ್ಯನವರ ನೇತೃತ್ವದ ಸರಕಾರ ನಮ್ಮ ನ್ಯಾಯಯುತವಾದ ಬೇಡಿಕೆಗೆ ಕಾಲಮಿತಿಯಲ್ಲಿ ಈಡೇರಿಸಲು ಅದರಂತೆ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಪೌರಾಡಳಿತ ಸಚಿವರು ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿರುವAತೆ ನಮ್ಮ ಬೇಡಿಕೆಯ ಮುಂದಿನ ಪ್ರಕ್ರಿಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಇಂದಿನ ಸರ್ವ ಧರ್ಮ ದೇವರುಗಳ ಪ್ರಾರ್ಥನೆ ಮಾಡಿ, ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಇಚ್ಛಾಶಕ್ತಿ ನೀಡಲೆಂದು ಅದರಂತೆ ಹೋರಾಟಕ್ಕೆ ಶಕ್ತಿ ನೀಡಲೆಂದು ಈ ವಿನೂತನ ಹೋರಾಟದ ಮುಖಾಂತರ ಸಮಿತಿ ಒತ್ತಾಯಿಸಿದೆ.

ಈ ಹೋರಾಟದಲ್ಲಿ ಮುಖಂಡರಾದ ನಾಗಶೆಟ್ಟಿ ಹಚ್ಚೆ, ಕಲ್ಯಾಣರಾವ ಚನಶೆಟ್ಟಿ, ಮಹೇಶ ಕಮಲಪೂರ, ಮನ್ನಾನ್ ಪಟೇಲ್, ಅಬ್ದಗುಲ ಗಫಾರ್, ಮಹ್ಮದ ಆರೀಫ್, ಹಬೀಬ್ ಸೇರಿದಂತೆ ನೂರಾರು ಜನ ಮಹಿಳೆಯರು ಮತ್ತು ರೈತ ಸಂತ್ರಸ್ತರು ಈ ವರ್ಷಾಚರಣೆ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

5 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

5 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

7 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

7 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

7 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

7 hours ago