ಕಲಬುರಗಿ: ಸಂಗೀತ ಮನುಷ್ಯನಿಗೆ ಶಾಂತಿ ಸಮಾಧಾನ ನೀಡುವುದರೊಂದಿಗೆ ಹಲವಾರು ರೋಗಗಳಿಗೆ ದಿವ್ಯ ಔಷಧವಾಗಿದೆ ಎಂದು ಈ ಭಾಗದ ಹೆಸರಾಂತ ಹಿರಿಯ ಸಂಗೀತ ಕಲಾವಿದ ಹಾಗೂ ಸಾಹಿತಿ ಅಮರಪ್ರಿಯ ಹಿರೇಮಠ ಹೇಳಿದರು.
ರವಿವಾರ ಸಾಯಂಕಾಲ ನಗರದ ಶರಣಬಸವೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ ನಂದಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘ ಹಾಗೂ ಅಮರಪ್ರಿಯ ಹಿರೇಮಠ ಕಲಾತಂಡದಿಂದ ಶ್ರಾವಣ ಸಂಭ್ರಮದಲ್ಲಿ ಕಲಾವಿದರ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಸಂಗೀತ ಕಲಾವಿದರಿಗೆ ರಾಜಾಶ್ರಯ ಕೊಟ್ಟು ಮಾನಸಿಕ ನೆಮ್ಮದಿ ಪಡೆದುಕೊಂಡು ಒಳ್ಳೆಯ ಆಡಳಿತದಿಂದ ಸಮೃದ್ಧ ಸಮಾಜ ನಿರ್ಮಿಸುತ್ತಿದ್ದರು.
ಪ್ರಸ್ತುತ ಸಂದರ್ಭದಲ್ಲಿ ಕಲಾವಿದರನ್ನು ಸರಕಾರ ಹಾಗೂ ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಈ ಭಾಗದ ಕಲೆಯು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳಗಲು ಸಾಧ್ಯವಾಗುತ್ತದೆ. ಈ ಭಾಗದಲ್ಲಿ ಕವಿ ಕಲಾವಿದರ ಕೊರತೆ ಇಲ್ಲ ಆದರೆ ಅವರಿಗೆ ಗುರುತಿಸಿ ವೇದಿಕೆ ನೀಡುವ ಮನಸುಗಳ ಕೊರತೆಯಿಂದ ಕಲಾಪ್ರತಿಭೆ ಹೊರಬರಲು ಸಾಧ್ಯವಾಗುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ಈ ಭಾಗದ ಹೆಸರಾಂತ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿಯವರು ಹಾಸ್ಯದ ಚಟಾಕಿಯೊಂದಿಗೆ ಮಾತನಾಡುತ್ತಾ ಮಕ್ಕಳಿಗೆ ಅಧ್ಯಾತ್ಮಿಕತೆಯ ಬೀಜವನ್ನು ಬಿತ್ತಿ ಉತ್ತಮ ಸಂಸ್ಕಾರ ನೀಡುವ ಕಾರ್ಯ ಪಾಲಕರಿಂದ ಆಗಲಿ ಎಂದು ಕರೆ ನೀಡಿದರು. ಸಂಘದ ಅಧ್ಯಕ್ಷ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಸಂಗೀತ ಕಲಾವಿದ ಅಮರಪ್ರಿಯ ಹಿರೇಮಠ ಹಾಗೂ ಸಂಗೀತ ಕಲಾವಿದ ಶ್ರವಣಕುಮಾರ ಮಠ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು. ಸಂಗೀತ ಕಲಾವಿದೆ ರತ್ನಪ್ರಿಯ ಹಿರೇಮಠ, ಜನಪದ ಕಲಾವಿದ ರಾಜು ಹೆಬ್ಬಾಳ, ಮಲ್ಲಿಕಾರ್ಜುನ ಕುಮಸಿ, ಶ್ರೀಕಾಂತ ಜೇವರ್ಗಿ ತೆಲ್ಲೂರ, ಮಹೇಶ ತೇಲಕುಣಿ, ಅಮರಪ್ರಿಯ ಕಲಾತಂಡದವರಿಂದ ಸಂಗೀತ ಸೇವೆ ಜರುಗಿತು.
ಕಾರ್ಯಕ್ರಮದಲ್ಲಿ ಕಿರುತೆರೆ ನಟ ಸದಾನಂದ ಹತ್ತಿ, ಹಿರಿಯ ರಂಗ ಕಲಾವಿದ ಸಿದ್ದಣ್ಣ ಕೋಲ್ಹಾರ, ರಘುನಂದನ ಕುಲಕರ್ಣಿ, ನಾಗೇಂದ್ರಯ್ಯ ಮಠ, ಶರಣು ಕಲ್ಮಠ, ಮಲಕಾರಿ ಪೂಜಾರಿ, ಶರಣು ಜೆ. ಪಾಟೀಲ, ಕಲ್ಯಾಣಿ ಮುರುಡ, ಬಸವರಾಜ ಜೋಗುರ, ಚೆನ್ನಮ್ಮ ಮಠ, ಜಗದೇವಿ ಪೂಜಾರಿ, ಶ್ರೀದೇವಿ ಅಟ್ಟೂರ, ಗುಂಡಮ್ಮ ಕುಲಕರ್ಣಿ, ವಿಜಯಲಕ್ಷ್ಮೀ ಮುರುಡ, ಐಶ್ವರ್ಯ ಪೂಜಾರಿ, ರಕ್ಷಿತಾ ಕುಲಕರ್ಣಿ, ಶಾರದಾ ಮುರುಡ, ಚೆನ್ನವೀರ, ಸಂಗಮೇಶ, ಪೃಥ್ವಿರಾಜ ಸೇರಿದಂತೆ ಅನೇಕ ಜನ ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…