ಬಿಸಿ ಬಿಸಿ ಸುದ್ದಿ

ಶ್ರೀನಿವಾಸ ಸರಡಗಿಯ ಚಿಕ್ಕವೀರೇಶ್ವರ ಸಂಸ್ಥಾನ ಮಠದಲ್ಲಿ ಗುರುಪೂರ್ಣಿಮೆ ಆಚರಣೆ

ಕಲಬುರಗಿ: ಮನುಷ್ಯನ ಮನದ ಮಂದಿರದಲ್ಲಿ ಮಹಾದೇವನಿದ್ದುಕರುಣೆ, ಪ್ರೀತಿ, ವಾತ್ಸಲ್ಯಗಳ ಮೂಲಕ ನಾವುಗಳು ಅದನ್ನುಅರ್ಥ ಮಾಡಿಕೊಳ್ಳಬೇಕಾಗಿದೆ, ಪರಸ್ಪರಒಬ್ಬರನ್ನೊಬ್ಬರು ಪ್ರೀತಿಯಿಂದಕಂಡು ಬದುಕು ಸಾಗಿಸಬೇಕಾಗಿದೆಎಂದುಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವಡಾ.ಬಸವರಾಜಡೋಣೂರ ನುಡಿದರು.

ತಾಲೂಕಿನ ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಮಠದಲ್ಲಿಗುರುಪೂರ್ಣಿಮಾ ಅಂಗವಾಗಿ ಪೂಜ್ಯ ಶ್ರೀಗಳ ಪಾದಪೂಜೆ, ತುಲಾಭಾರ ಮತ್ತುಆರೋಗ್ಯತಪಾಸಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದಅವರು ಮನುಷ್ಯಇಂದುಆಡಂಬರದ ಬೆನ್ನು ಹತ್ತಿ ಮಾನಸಿಕ ಮತ್ತುದೈಹಿಕ ಸಂಪತನ್ನು ಕಳೆದುಕೊಳ್ಳುತ್ತಿದ್ದು, ಸರಳ, ಸಹಜ, ಸತ್ಯ, ಅಹಿಂಸೆಯಿಂದ ಬದುಕಿದಾಗ ಮಾತ್ರ ಮನುಷ್ಯ ನೆಮ್ಮದಿಯಾಗಿಇರಬಲ್ಲ, ಜೀವನದ ಪರಿಪೂರ್ಣತೆಯನ್ನು ಅರ್ಥೈಸಿಕೊಳ್ಳಬಲ್ಲ ಎಂದು ಪ್ರತಿಪಾದಿಸಿದರು.

ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯ ರೇವಣಸಿದ್ದ ಶಿವಾಚಾರ್ಯರು ಮನುಷ್ಯನ ಬದುಕಿಗೆಗುರು ಬಹಳ ಮುಖ್ಯವಾಗಿದ್ದುಗುರುಉಪದೇಶದಿಂದ ಮನುಷ್ಯ ಸಂತೃಪ್ತಿಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯಎಂದು ನುಡಿದಅವರು ಭಕ್ತರು ಭಕ್ತಿಯ ಮಾರ್ಗದಲ್ಲಿ ನಡೆದು ಬದುಕು ಹಸನು ಮಾಡಿಕೊಳ್ಳುವಂತೆ ಕರೆ ನೀಡಿದರು. ಮನುಷ್ಯಇಲ್ಲಿ ವ್ಯವಹಾರಕ್ಕಾಗಿ ಹಣಕೂಡಿಡಲು, ಗಳಿಸಿಡಲು ಬಂದಿಲ್ಲ, ಉತ್ತಮವಾದಜೀವನ ಮಾಡಲು ಬಂದಿದ್ದು, ಒಳ್ಳೆಯ ಆರೋಗ್ಯ, ನೆಮ್ಮದಿಯ ಬದುಕಿನಿಂದ ಬಾಳುವಂತೆ ಕರೆ ನೀಡಿದರು.

ವೇದಿಕೆಯ ಮೇಲೆ ಸಾಂಸ್ಕøತಿಕ ಲೋಕದ ಅಧ್ಯಕ್ಷ ಡಾ. ರಾಜೇಂದ್ರ ಯರನಾಳೆ, ಸಾಹಿತಿ ಬಿ.ಹೆಚ್. ನಿರಗುಡಿ, ಖ್ಯಾತ ವೈದ್ಯರಾದ ಡಾ. ಸಂತೋಷಜೆ, ಮಂಗಶೆಟ್ಟಿ, ವಾಣಿವಿಲಾಸ ಶಿಕ್ಷಣ ಸಂಸ್ಥೆಯಅಧ್ಯಕ್ಷ ವಾಣಿ ಪ್ರಸಾದ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಮಠದಿಂದಖ್ಯಾತ ಪುರೋಹಿತರಾದ ಧನಂಜಯ ಸ್ವಾಮಿ, ಗಂಗಾಧರಅಗ್ಗಿಮಠ, ಮಹೇಶ್ವರ ಶಾಸ್ತ್ರಿಗಳು ಭದ್ರಯ್ಯ ಸ್ವಾಮಿ ಸಾಲಿಮಠ, ಬಸಯ್ಯ ಸ್ವಾಮಿ ಮಠಪತಿ, ರಾಚಯ್ಯ ಸ್ವಾಮಿ ಮಠಪತಿ, ಗೌರಿಶಂಕರ ಸ್ವಾಮಿಟೆಂಗಿನಮಠ, ಈರಯ್ಯ ಮಠಪತಿ ನಾಗೂರ, ಶಿವರುದ್ರಯ್ಯ ಸ್ವಾಮಿ, ಚನ್ನಯ್ಯ ಸ್ವಾಮಿ ಮುತ್ಯಾನ ಬಬಲಾದ ಇವರುಗಳಿಗೆ ಪುರೋಹಿತರತ್ನ ಪ್ರಶಸ್ತಿ ನೀಡಿಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿವಶಂಕರ ಬಿರಾದಾರ, ಶಿವಶರಣಪ್ಪ, ರಾಜಕುಮಾರಉದನೂರ, ಅಣ್ಣಾರಾಯ ಮತ್ತಿಮೂಡ, ಗುಂಡಣ್ಣಡಿಗ್ಗಿ, ಶರಣಗೌಡ ಪಾಟೀಲ ಪಾಳಾ, ಮಲ್ಲಿಕಾರ್ಜುನ ವರನಾಳ ಇವರಿಗೆ ಸಮಾಜಸೇವಾರತ್ನ ಪ್ರಶಸ್ತಿ ಪ್ರದಾನಮಾಡಲಾಯಿತು.

ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀಮಠದಿಂದ ಸತ್ಕರಿಸಲಾಯಿತು. ಸಮಾರಂಭದಲ್ಲಿ ಶ್ರೀಶೈಲ ಶಾಸ್ತ್ರಿಗಳ ವೈದಿಕ ಬಳಗದಿಂದ ವೇದಘೋಷ ನೆರವೇರಿತು. ಶಿವಶಂಕರ ಬಿರಾದಾರ ಪ್ರಾರ್ಥನಾಗೀತೆ ಹಾಡಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago